ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಹೈನುಗಾರಿಕೆ ಕ್ಷೇತ್ರದಿಂದ ಗ್ರಾಮೀಣ ಪ್ರದೇಶದ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಅವರು ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬಗಳು ಕೂಡ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಕೆಲಸವನ್ನು ನಿರ್ವಹಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲೂ ಉದ್ಯೋಗವನ್ನು ಸೃಷ್ಟಿ ಮಾಡಿಕೊಳ್ಳಲಾಗಿದೆ. ಇದರಿಂದ ಕುಟುಂಬದ ಸರ್ವರಿಗೂ ಉದ್ಯೋಗ ದೊರಕಿದಂತಾಗುತ್ತದೆ. ಆ ಮೂಲಕ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಜೊತೆಗೆ ತಮ್ಮ ಬದುಕನ್ನು ಸಮಾಜದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲು ಹೆಚ್ಚಿನ ಅನುಕೂಲವಾಗಿದೆ. ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಇತರ ಒಕ್ಕೂಟಗಳಿಗಿಂತ ಹೆಚ್ಚಿನ ಬೆಲೆಯನ್ನು ರೈತರಿಗೆ ನೀಡುತ್ತಿದೆ ಎಂದರು.
ಸಾಲಿಗ್ರಾಮ – ಹರದನಹಳ್ಳಿ ಮಾರ್ಗದ ಮುಖ್ಯರಸ್ತೆಯಿಂದ ಕಾಳಮ್ಮನ ಕೊಪ್ಪಲು ಸಾಲುಕೊಪ್ಪಲು ಮಾರ್ಗವಾಗಿ ಕರ್ಪೂರವಳ್ಳಿ ಗ್ರಾಮದವರೆಗೆ ಬಹು ದಶಕಗಳಿಂದ ಹಾಳಾಗಿದ್ದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಗ್ರಾಮದ ಪರಿಮಿತಿ ಒಳಗಡೆ, ಕಳ್ಳಿಕೊಪ್ಪಲು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು. ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಯ ಮೇರೆಗೆ ಹಂತ ಹಂತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯ ಋಣವನ್ನು ತೀರಿಸಲಾಗುವುದು ಎಂದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ ಗ್ರಾಮದ ಹಾಲಿನ ಡೇರಿಯು ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಇಂತಹ ಸಂಘಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹತ್ತು ಲಕ್ಷ ರೂ ಅನುದಾನವನ್ನು ನೀಡಲಾಗುವುದು ಜೊತೆಗೆ ಗ್ರಾಮದಲ್ಲಿ ಬಿಎಂಸಿ ಕೇಂದ್ರವನ್ನು ಆರಂಭಿಸಲು ಒಕ್ಕೂಟದಿಂದ 20 ಲಕ್ಷ ರೂಗಳ ಘಟಕದ ವೆಚ್ಚವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಮಂಜುಳಾ ರಂಗೇಗೌಡ, ಭಾಗ್ಯಮ್ಮ ರಾಜೇಗೌಡ, ಸುವರ್ಣ ಕುಮಾರ, ಜ್ಯೋತಿ ಮಹದೇವ್, ಜಯಲಕ್ಷ್ಮಿ ಗೌಡಯ್ಯ ಅವರುಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಮಾಜಿ ಉಪಾಧ್ಯಕ್ಷ ಕೋಮಲಚಾರಿ, ಸದಸ್ಯರಾದ ಡಿ.ಕೃಷ್ಣ, ದಮಯಂತಿಮಹದೇವ್, ಮಾಜಿ ಸದಸ್ಯರಾದ ಜೆಸಿಬಿ ಬಲರಾಮ್, ಸಾಕಮ್ಮಕೃಷ್ಣೆಗೌಡ, ರಂಗಮ್ಮಸುಬ್ಬೇಗೌಡ, ತಾಲ್ಲೂಕು ಹಾಲಿನ ಡೇರಿಗಳ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ, ಉಪಾಧ್ಯಕ್ಷ ದಿನೇಶ್, ಮಾರ್ಗ ವಿಸ್ತರಣಾಧಿಕಾರಿ ನೇಮಿನಾಥ ಮಕಾನಿ, ಸಂಘದ ಅಧ್ಯಕ್ಷೆ ರಂಗಮ್ಮತಿಮ್ಮೇಗೌಡ, ಉಪಾಧ್ಯಕ್ಷೆ ಭಾಗ್ಯಕುಮಾರನಾಯಕ, ನಿರ್ದೇಶಕರುಗಳಾದ ಸೌಮ್ಯ ಲೋಕೇಶಚಾರ್, ಗೌರಮ್ಮ ರಾಜೇಗೌಡ, ಸಣ್ಣನಿಂಗಮ್ಮ ರಾಮೇಗೌಡ, ಅಕ್ಕಯ್ಯಮ್ಮ ಕಾಳೇಗೌಡ, ಜಯಶೀಲಪಾಲಾಕ್ಷ, ರಾಜೇಶ್ವರಿ ಪುಟರಾಜು, ಗೌರಮ್ಮ ಗೌಡಯ್ಯ, ಮಹದೇವಿದೀಪು, ಸಿಇಓ ಪಿ.ಜಿ.ರಂಜಿನಿರಘು, ಸಿಬ್ಬಂದಿಗಳಾದ ತ್ರಿವೇಣಿ ರಂಗೇಗೌಡ, ಸುಮಿತ್ರ ಸುಬ್ಬೆಗೌಡ, ಮುಖಂಡರುಗಳಾದ ರಂಗೇಗೌಡ, ಜವರೇಗೌಡ, ಕೃಷ್ಣೆಗೌಡ, ಜವರಪ್ಪ, ಲೋಕೇಶಚಾರಿ, ಕೆ.ಪಿ.ಮಹೇಶ್, ರಘು, ಪಾಲಾಕ್ಷ, ಹರೀಶ್, ಕುಮಾರನಾಯಕ, ಮಹದೇವ, ರಾಜೇಗೌಡ, ಕುಮಾರ, ಲೋಕೇಶನಾಯಕ, ಕೆ.ಟಿ.ಶಿವಣ್ಣ, ಸ್ವಾಮಿ, ಶಿವಣ್ಣ, ಮಂಜು, ನಾಗರಾಜ, ಪ್ರತಾಪ, ಮಹೇಶ್, ದೀಪು, ಚಂದ್ರಚಾರಿ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.