January 29, 2026
n638493725173115140600597f8567907a25a988f481b029d218c27a4cc38858203daa5bdadb62fe9320f01.png

ಬೆಂಗಳೂರು ನ.9

: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ವಿಶೇಷ ಅಧಿಕಾರಿ ಹಾಗೂ ಅವರ ಆಪ್ತ ಇದ್ದೇನೆ ಎಂದು ಸರ್ಕಾರಿ ನೌಕರರಿಗೆ ವಂಚನೆ ಎಸಗುತ್ತಿದ್ದ ತುಮಕೂರು ಮೂಲದ ಆರೋಪಿ ಒಬ್ಬನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾನು ಆಪ್ತ ಆಗಿದ್ದೇನೆ ನಿಮಗೆ ವರ್ಗಾವಣೆ ಬೇಕಾದರೆ ನನಗೆ ಹೇಳಿ ಎಂದು ಸರ್ಕಾರಿ ನೌಕರರಿಗೆ ಕರೆ ಮಾಡಿ ರಘುನಾಥ್ ಎನ್ನುವ ವ್ಯಕ್ತಿ ಆಮೀಷ ಒಡ್ದುತ್ತಿದ್ದ.ಅಲ್ಲದೇ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ವಿಶೇಷ ಅಧಿಕಾರಿಯಂದು ವಂಚನೆ ಮಾಡಿದ್ದಾನೆ. ಇದೀಗ ತುಮಕೂರು ಮೂಲದ ರಘುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

ಚಳ್ಳಕೆರೆ ಸರಕಾರಿ ಅಧಿಕಾರಿಗೂ ವಂಚನೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಚಳ್ಳಕೆರೆ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎನ್‌.ಕಾವ್ಯಾ ಸ್ಥಳ ನಿರೀಕ್ಷಣೆಯಲ್ಲಿದ್ದರು. ರಘುನಂದನ್‌ ಎಂಬ ವ್ಯಕ್ತಿಯು ಕಾವ್ಯಾ ಅವರಿಗೆ ಕರೆ ಮಾಡಿ ತಾನು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಸಹಾಯಕ ಹಾಗೂ ವಿಶೇಷಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ವರ್ಗಾವಣೆಗಾಗಿ 2 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇರಿಸಿ ಬೆದರಿಸಿದ್ದಾನೆ. ಅ.15 ಮತ್ತು 16ರಂದು ಕಾವ್ಯಾ ಅವರಿಂದ ಒಟ್ಟು 80 ರೂ ಸಾವಿಗಳನ್ನು  ಫೋನ್‌ ಪೇ ಮುಖಾಂತರ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿ ಸಕಾಗಿತ್ತು.

ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ಹಾಗೂ ವಿಶೇಷ ಕಾರ್ಯದರ್ಶಿ ಎಂದು ರಘುನಾಥ್ ಸರ್ಕಾರಿ ನೌಕರರಿಗೆ ಕರೆ ಮಾಡುತ್ತಿದ್ದ. ನಿಮಗೆ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ರಘುನಾಥ್ ಸರ್ಕಾರಿ ಅಧಿಕಾರಿಗಳಿಗೆ ಆಮಿಷ ಒಡ್ದುತ್ತಿದ್ದ.ಅದೇ ರೀತಿ ಸಚಿವ ಪ್ರಿಯಾಂಕರಿಗೆ ವಿಶೇಷ ಅಧಿಕಾರಿ ಎಂದು ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿರುವ ಆರೋಪ ಕೇಳಿ ಬಂದಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading