ನಾಯಕನಹಟ್ಟಿ:: ಶಿಕ್ಷಣ ಇಲಾಖೆ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದ್ದಾರೆ.


ಶನಿವಾರ ಪಟ್ಟಣದ ವಿದ್ಯಾ ವಿಕಾಸ ಶಾಲೆಯಲ್ಲಿ ಹೋಬಳಿ ಮಟ್ಟದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಚಳ್ಳಕೆರೆ ತಾಲೂಕಿನಲ್ಲಿ ನಲಿಕಲಿ ವಿಶೇಷ ಪದ್ಧತಿಯ ಮೂಲಕ ಚಟುವಟಿಕೆ ಆಧಾರಿತ ಬೋಧನೆಯನ್ನು ಮಾಡುವ ಪದ್ಧತಿ ಜಾರಿಯಲ್ಲಿದೆ 1998ರಿಂದ ಜನ ಶಾಲಾ ಶಿಕ್ಷಣ ನಮ್ಮ ಜಿಲ್ಲೆಯ ಚಳ್ಳಕೆರೆ ಮತ್ತು ಹಿರಿಯೂರು ಸೇರಿದಂತೆ ಆಗಿನಿಂದಲೂ ನಲಿಕಲಿ ಜನಶಾಲಾ ಶಿಕ್ಷಣದಿಂದ ಜಾರಿಯಾಗಿ ಸುಮಾರು 26 ರಿಂದ 27 ವರ್ಷಗಳ ಕಾಲದಿಂದಲೂ ನಡೆದುಬಂದಿದೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡುವಾಗ ಅದರ ಮೌಲ್ಯಮಾಪನ ಮಾಡುವಾಗ ನಲಿ ಕಲಿ ಶಿಕ್ಷಕರ ಪರಿಶ್ರಮ ಬಹಳ ದೊಡ್ಡದು ಯಾಕೆಂದರೆ ಪ್ರಾಥಮಿಕ ಶಾಲಾ ಶಿಕ್ಷಣ ನಮ್ಮ ದೇಶದ ಭವಿಷ್ಯದ ಬುನಾದಿ ಸಹಜವಾದದ್ದು. ಅಂತಹ ಭವಿಷ್ಯದ ಬುನಾದಿಗೆ ಬಹಳ ಭದ್ರವಾದಂತಹ ಅಡಿಪಾಯವನ್ನು ಹಾಕುವಾಗ ನಲಿ ಕಲಿ ಶಿಕ್ಷಕರ ಪಾತ್ರ ಅವರ ಒಂದು ಮನ್ನಣೆ ತುಂಬಾ ಮಹತ್ವವಾದದ್ದು.
ಶಿಕ್ಷಣ ಇಲಾಖೆ ತರಬೇತಿಗಳನ್ನು ನೀಡಿ ಕಾರ್ಯಗಾರಗಳನ್ನು ನಡೆಸಿ ಇಂತಹ ಸಮಾಲೋಚನೆಗಳನ್ನು ನಡೆಸುವ ಮೂಲಕ ಇನ್ನಷ್ಟು ಸುಜನಾತ್ಮಕವಾದಂತ ಬೋಧನಾ ವಿಧಾನವನ್ನು ಮತ್ತು ಚಟುವಟಿಕೆ ಆಧಾರಿತವಾದಂತಹ ಕಲಿಕಾ ಪದ್ಧತಿಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಸಂತಸದಾಯಕ ಕಲಿಕೆ ಉಂಟು ಮಾಡುತ ಅವರನ್ನು ಶಾಲೆಗೆ ಆಕರ್ಷಣೆ ಶಾಲೆಯಲ್ಲಿ ಉಳಿಯುವಂತೆ ಮಾಡುವಂತದ್ದು ಉತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದರು.
ಇನ್ನೂ ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನೂತನ ನಿರ್ದೇಶಕರಗಳಾದ. ಪಿ.ಎಂ. ವಿಶ್ವನಾಥ್ ಸಿ ಹನುಮಂತಪ್ಪ (ಹೇಮಂತ್), ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹಾಗೂ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನೂತನ ನಿರ್ದೇಶಕರಾದ ಪಿ.ಎಂ. ವಿಶ್ವನಾಥ್, ಸಿ ಹನುಮಂತಪ್ಪ (ಹೇಮಂತ್), ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ವಿ. ಈಶ್ವರಪ್ಪ, ಸಿಆರ್‌ಪಿಗಳಾದ ಲಿಂಗರಾಜ್, ಪಾಲಯ್ಯ, ಈಶ್ವರಪ್ಪ, ಜಗದೀಶ್, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆರ್ ಸದಾಶಿವಯ್ಯ, ಸಂಪನ್ಮೂಲ ವ್ಯಕ್ತಿ ಶಿಕ್ಷಕರಾದ ಚನ್ನಪ್ಪ,
ಸೇರಿದಂತೆ ಹೋಬಳಿಯ ಶಾಲೆಯ ಮುಖ್ಯ ಶಿಕ್ಷಕರು ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.