March 22, 2026
Screenshot_20241109_093405.png

ಚಳ್ಳಕೆರೆ ನ.9

ಮೆರವಣಿಗೆ ಕಡಿಮೆ ಮಾಡಿ ವೇಧಿಕೆಗೆ ಹೆಚ್ಚು ಸಮಯ ಕೊಡುವ ಮೂಲಕ ಕನಕದಾಸರ ಚಿಂತನೆ ತತ್ವಗಳ ಜೀವನ ಚರಿತ್ರೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ರೇವಣಸಿದ್ದೇಶ್ವರ ವಿದ್ಯಾವರ್ದಕ ಸಂಘದ ಅಧ್ಯಕ್ಷ ಆರ್. ಮಲ್ಲೇಶಪ್ಪ ಹೇಳಿದರು.
ನಗರದ ರೇವಣಸಿದ್ದೇಶ್ವರ ಸಂಘದ ಕಚೇರಿಯಲ್ಲಿ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ನ.18 ರಂದು ಕನಕ ಜಯಂತಿ ತಾಲೂಕು ಕೇಂದ್ರದಲ್ಲಿ ಕನಕ ಪ್ರತಿಮೆ ಅನಾವರಣ ಮಾಡಿರುವುದರಿಂದ ಕನಕ ಜಯಂತಿಯನ್ನು ಈ ಬಾರಿ ವಿಶೇಷವಾಗಿ ಆಚರಣೆ ಮಾಡಲಾಗುವುದು.
ತಾಲೂಕಿನ ಪ್ರತಿ ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಸಮುದಾಯದ ಮುಖಂಡಲ್ಲಿ ಮನವಿ ಮಾಡಿದರು.
ಮಾಜಿ ಜಿಪಂ ಅಧ್ಯಕ್ಷೆ ಶಶಿಕಲಾಸುರೇಶ್ ಬಾಬು ಮಾತನಾಡಿ ನ.18 ರಂದು ಕನಕ ಜಯಂತಿ ಆಚರಣೆ ತಾಲೂಕು ಕೇಂದ್ರದಲ್ಲಿ‌ವಿಶೇಷವಾಗಿ ಆಚರಣೆ ಮಾಡುವುದರಿಂದ ಗ್ರಾಮೀಣ ಭಾಗದಲ್ಲಿ ನ.18 ನಂತರ ಆಚರಣೆ ಮಾಡುವ ಮೂಲಕ ತಾಲೂಕು ಕೇಂದ್ರದ ಕನಕ ಜಯಂತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ನಗರಸಭೆ ಸದಸ್ಯ ಎಂ.ಜೆ.ರಾಘವೇಂದ್ರ ಮಾತನಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮ್ಯ ಹಾಗೂ ಶಾಸಕ ಟಿ.ರಘುಮೂರ್ತಿಯವ ಶ್ರಮದೊಂದಿಗೆ ಕನಕ ವೃತ್ತ ಮಂಜುರಾತಿಯಾಗಿ ಈಗಾಗಲೆ ಕನಕ ಪ್ರತಿಮೆ ಅನಾವರವಾಗಿದ್ದು. ಕನಕ ಜಯಂತಿ ಯ ದಿನ ಶಾಸಕ ಟಿ.ರಘುಮೂರ್ತಿಯವರಿಂದ ಕನಕ ಪ್ರತಿಮೆಗೆವಮಾಲಾರ್ಪಣೆ ಹಾಗೂ ವೃತ್ತ ಅನಾವರಗೊಳಿಸಿ ಕನಕ ಜಯಂತಿಗೆ ಮೆರವಣಿಗೆ ಚಾಲನೆ ನೀಡಲಾಗುವುದು.
ಮೆರವಣಿಗೆಯಲ್ಲಿ ಗೊರವಗಳ ಕುಣಿತ ವಿವಿಧ ಕಲಾ ತಂಡಗಳೊಂದಿಗೆ ಮೆರಗು ತರಲಾಗುವುದು ತಾಲೂಕಿನಾಧ್ಯತಂದ ಕುರುಬ ಸಮುದಾದ ವಿವಿಧ ಸಂಘಟನೆಗಳು ಜನಪ್ರತಿನಿಧಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ ಮಾತನಾಡಿ ಕನಕ ದಾಸರು ಕುರುಬ ಸಮಾಜಕ್ಕೆ ಸೀಮಿತರಾಗಿಲ್ಲ ಆದ್ದರಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಮುದಾದ ಐದು ಜನ ಹಾಗೂ ಇತರೆ ಸಮುಧಾಯದ ಐದು ಜನರಿಗೆ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ನಾಮನಿರ್ದೇಶಕ ಬಸವರಾಜ್ . ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್. ಭೀಮಣ್ಣ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading