September 16, 2025


ಚಿತ್ರದುರ್ಗ  ಅ.09:
ಹಿರಿಯೂರಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಅ.15 ರಿಂದ 17 ರವರೆಗೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ “ಸಹಜ ಕೃಷಿ – ಸಂತೃಪ್ತ ಜೀವನಕ್ಕೆ ದಾರಿ’’ ಎಂಬ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಅ.15ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ತರಬೇತಿ ಕಾರ್ಯಕ್ರಮದಲ್ಲಿ ಐಕಾಂತಿಕ ಸಮುದಾಯದ ಪ್ರಗತಿಪರ ಸಹಜ ಕೃಷಿಕರಾದ ದಾವಣಗೆರೆಯ ಐಕಾಂತಿಕ ತೋಟದ ರಾಘವ, ಯರೇಹಳ್ಳಿಯ ಹನುಮಂತಪ್ಪ, ಚಿಕ್ಕಜಾಜೂರಿನ ವೀರೇಶ್, ಮಲೇಬೆನ್ನೂರಿನ ಪಾಂಡುರಂಗಾಚಾರಿ, ದಾವಣಗೆರೆಯ ಅಭಿಶೇಕ್, ಜಬೀವುಲ್ಲಾ, ನಿಟ್ಟೂರಿನ ಸುಜೀತ್ ಮತ್ತು ಬಾಲ್ಕಿಯ ನಿರಂಜನ ಇವರು ಕೃಷಿ ಬೆಳೆದು ಬಂದ ಹಾದಿ, ಸುಸ್ಥಿರ ಕೃಷಿ ಪದ್ದತಿಗಳು, ಸಹಜ ಕೃಷಿಯ ಪರಿಚಯ, ಸಜೀವ ಮಣ್ಣು, ನೀರು ನಿರ್ವಹಣೆ ಮತ್ತು ಸಹಜ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆ, ಕಳೆ ಮತ್ತು ಕೀಟ ನಿರ್ವಹಣೆ, ಬಹುಪಯೋಗಿ ಜೀವಂತ ಬೇಲಿ, ತೋಟಗಾರಿಕೆ ಬೆಳೆಗಳಲ್ಲಿ ಗಿಡಗಳ ಸಂಯೋಜನೆ, ಹೊಸದಾಗಿ ತೋಟ ಕಟ್ಟಲು ಅನುಸರಿಸುವ ಕ್ರಮಗಳು, ಹಾಲಿ ಇರುವ ಹಳೆಯ ತೋಟವನ್ನು ಉತ್ತಮಪಡಿಸುವ ವಿಧಾನಗಳು, ತೋಟದ ಕೆಲಸ ಮತ್ತು ಖರ್ಚು ಕಡಿಮೆ ಮಾಡಲು ಇರುವ ಪರಿಹಾರಗಳು, ಸುಲಭವಾಗಿ ಬೆಳೆಯಬಹುದಾದ ತರಕಾರಿಗಳು, ಬಿದಿರಿನ ಮಹತ್ವ, ಸಹಜ ಕೃಷಿ ಪುಸ್ತಕಗಳ ಪರಿಚಯ, ಮಳೆಯಾಶ್ರಿತ ಬೆಳೆಗಳಲ್ಲಿ ಸಹಜ ಕೃಷಿ ಅಳವಡಿಕೆ, ನೇರ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಜ ಜೀವನದ ವಿಚಾರಗಳ ಕುರಿತುವಿಷಯಗಳನ್ನು ಮಂಡನೆ ಮಾಡಲಿದ್ದಾರೆ.ಈಗಾಗಲೇ ಸಹಜ ಕೃಷಿಯಲ್ಲಿ ತೊಡಗಿರುವ ಮತ್ತು ತಮ್ಮ ತಾಕಿನಲ್ಲಿ ಸಹಜ ಕೃಷಿ ಪ್ರಾರಂಭಿಸಲು ಆಸಕ್ತಿ ಇರುವ ಹಾಗೂ ಕಾರ್ಯಗಾರದ 3 ದಿನವೂ ಕಡ್ಡಾಯವಾಗಿ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿ ಭಾಗವಹಿಸುವ ಚಿತ್ರದುರ್ಗ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 10 ರಂತೆ, ಆರು ತಾಲ್ಲೂಕಿನ 60 ಜನ ಉತ್ಸಾಹಿ ಯುವ ರೈತಭಾಂದವರು ದೂರವಾಣಿ ಸಂಖ್ಯೆ 8277931058 ಗೆ ಕರೆ ಮಾಡಿ ಇದೇ ಅ.13ರೊಳಗೆ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕೋರಿದ್ದಾರೆ.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು, ನೋಂದಾವಣಿ ಮಾಡಿಸದ ಮತ್ತು ನಿಗದಿತ ಸಮಯದ ನಂತರ ಬರುವ ರೈತರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಮೊದಲು ನೋಂದಾವಣಿ ಮಾಡಿಕೊಂಡ ಅರ್ಹ 60 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.

ತರಬೇತಿ ಕಾರ್ಯಗಾರವು 2ನೇ ಮತ್ತು 3ನೇ ದಿನ ಬೆಳಗ್ಗೆ 6.30 ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಅಧಿವೇಶನ ಮತ್ತು ಚಟುವಟಿಕೆಗಳನ್ನು ಒಳಗೊಂಡಿರುವುದರಿಂದ ಆಸಕ್ತ ಉತ್ಸಾಹಿ ಯುವ ರೈತಭಾಂದವರು ಭಾಗವಹಿಸಲು ಕೋರಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading