
ತಳಕು.ಅ.9 ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ತಳಕು ಪೋಲಿಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಮದಲ್ಲಿ
ದಿನಾಂಕ 9.07.2024 ರಂದು ಹಿರೇಹಳ್ಳಿ ಗ್ರಾಮದ ಸಮೀಪ ಹೊರವಲಯದಲ್ಲಿದ್ದ ಒಂಟಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಮನೆಯ ಯಜಮಾನಿಗೆ ಚಾಕು ತೋರಿಸಿ ಎದುರಿಸಿ ಹಗ್ಗದ ಸಹಾಯದಿಂದ ಕಟ್ಟಿ ಮನೆಯಲ್ಲಿದ್ದ 6,52,500 ರೂ ಹೆಣ್ಣು ಮಗಳ ಮೈ ಮೇಲಿನ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚಿತ್ರದುರ್ಗ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ಚಳ್ಳಕೆರೆ ಡಿ ವೈ ಎಸ್ ಪಿ ಟಿ ಬಿ ರಾಜಣ್ಣ ಇವರ ನೇತೃತ್ವದಲ್ಲಿ ತಳಕು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಹಾಗೂ ಶಿವಕುಮಾರ್ ಪೋಲಿ ಸ್.ಸಿಬ್ಬಂದಿಗಳು ಸಿಬ್ಬಂದಿಗಳು ಒಂಟಿ ಮನೆ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ದರೋಡೆಕೋರರಾದ ಆಂದ್ರ ಪ್ರದೇಶ ಅನಂತಪುರ ಜಿಲ್ಲೆಯ ರುದ್ರಂಪೇಟೆ ಎನ್ ಜಿ ಓ ಕಾಲೋನಿಯ ನೀಲಂ ಶ್ರೀರಾಮ್ ವಿಜಯ್, ವಿಜಯವಾಡದ ರಂಗುಲ ಪ್ರಸಾದ್. ಇಬ್ಬರನ್ನ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು ದರೋಡೆಯಲ್ಲಿ ಮುಖಂಡತ್ವ ವಹಿಸಿದ ಪಾಲ ವೆಂಕಟೇಶ್ ರಾವ್ ತಲೆ ತಪ್ಪಿಸಿಕೊಂಡಿದ್ದಾನೆ.



ಇಬ್ಬರನ್ನ ವಶಕ ಪಡೆದ ಪೊಲೀಸರು ಅವರಿಂದ ರಾಬರಿ ಮಾಡುವಾಗ ಬಳಸಿದ್ದ ಸಿಸಿ ಕ್ಯಾಮೆರಾ, ಮುಖದ ಕ್ಯಾಪ್, ಚಾಕುಗಳು, ಟಾರ್ಚ್ಗಳು, ಕಟರ್ ಮೊಲ ಹಿಡಿಯುವ ಬಲೆ ,ಪ್ಲಾಸ್ಟಿಕ್ ಹಾಗೂ ಮೊಬೈಲ್ ಇವುಗಳನ್ನ ವಶಕ ಪಡೆದಿದ್ದು ನ್ಯಾಯಾಲಯದ ಮುಂದೆಹಾಜರಿ ಪಡಿಸಲಾಗಿದೆ.
ಮೂರು ತಿಂಗಳ ಹಿಂದೆ ನಡೆದ ಒಂಟಿ ಮನೆ ದರೋಡೆಯನ್ನ ಪತ್ತೆ ಹಚ್ಚಿ ಅವರನ್ನು ವಶಕ್ಕೆ ಪಡೆದ ತಂಡವನ್ನು ಜಿಲ್ಲಾ ಎಸ್ ಪಿ ಅಭಿನಂದಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.