
ಚಳ್ಳಕೆರೆ: ತಾಲೂಕಿನ ಹೆಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಎನ್ ಸಿ ಸಿ ಶಿಬಿರಕ್ಕೆ ಶಾಸಕ ಟಿ ರಘುಮೂರ್ತಿ ಚಾಲನೆ ನೀಡಿದರು.
ಈ ವೇಳೆ ಮಾತಾಡಿದ ಅವರು ಕಾಲೇಜಿನಲ್ಲಿ ಎನ್‌ಸಿಸಿ ಘಟಕ ಸ್ಥಾಪಿಸಬೇಕು ಎಂಬ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬಹುದಿನಗಳ ಕನಸು ಇಂದು ಈಡೇರಿದೆ ಎನ್ ಸಿಸಿ ಘಟಕದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ ದೈಹಿಕ ಸದೃಢತೆ ಮತ್ತು ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎನ್ ಸಿ ಸಿ ಘಟಕ ಸ್ಥಾಪನೆಯ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.





ಕಾಲೇಜಿನ ಎನ್‌ಸಿಸಿ ಘಟಕದ ಅಧಿಕಾರಿ ಲೆಫ್ಟಿನೆಂಟ್ ಡಾ. ಸಾರ ಲೇಪಾಕ್ಷ ಮಾತನಾಡಿ ತಾಲೂಕಿನ ಪದವಿ ಕಾಲೇಜಿನಲ್ಲಿ ಎನ್‌ಸಿಸಿ ಘಟಕದ ಸ್ಥಾಪನೆಯಿಂದ ವಿದ್ಯಾರ್ಥಿಗಳು ಪೊಲೀಸ್ ಅರೆಸೇನಾಪಡೆ ಭಾರತೀಯ ಸೇನಾ ಪಡೆ ಸೇರಿದಂತೆ ಹಲವು ಹುದ್ದೆಗಳಿಗೆ ಆಯ್ಕೆಯಾಗಲು ಈ ಶಿಬಿರಗಳು ಸಹಕಾರಿಯಾಗಲಿವೆ ಎನ್ ಸಿ ಸಿಯಲ್ಲಿ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದರೆ ದೇಶ ಹಾಗೂ ರಾಜ್ಯದ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ದೊರೆಯಲಿದ್ದು ಅತ್ಯುನ್ನತ ಪದವಿಗಳನ್ನು ಪಡೆಯಲು ಸಹಕಾರಿಯಾಗಲಿದೆ ಪೊಲೀಸ್ ಸೇವೆಗೆ ಸೇರಲು ಅನುಸರಿಸುವ ದೈಹಿಕ ಕ್ಷಮತೆಯ ಮಾನದಂಡಗಳನ್ನು ಹಾಗೂ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿರಲಿದ್ದು ಅರೆಸೇನಾ ಪಡೆಯ ಅಧಿಕಾರಿಗಳ ನೇತೃತ್ವದಲ್ಲಿ ನೇಮಕ ಮಾಡಿಕೊಂಡು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ನಗರಸಭೆ ಸದಸ್ಯರು, ತಾಲ್ಲೂಕು ಪಂಚಾಯತಿ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಸುರೇಶ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಿವಸ್ವಾಮಿ, ಮುಖಂಡರಾದ ಪ್ರಹ್ಲಾದ್, ಮುಜೀಬ್, ಸುರೇಶ್ ಬಾಬು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.