
ಚಳ್ಳಕೆರೆ:-ನಗರದ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರವನ್ನು ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಿಆರ್ ಪ್ರಮೀಳಾ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಪೌರತ್ವ ತರಬೇತಿ ಶಿಬಿರದ ಮೂಲಕ ಪ್ರಶಿಕ್ಷಣಾರ್ಥಿಗಳು ಭಾರತದ ಉತ್ತಮ ಪೌರರಾಗಿ ರೂಪುಗೊಂಡು ಸೇವಾ ಮನೋಭಾವ ಮತ್ತು ಉತ್ತಮ ನಾಗರಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಮೂಲಕ ಆದರ್ಶ ಶಿಕ್ಷಕರಾಗಿ ಹೊರಹೊಮ್ಮಬೇಕಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.




ಪ್ರಾಸ್ತಾವಿಕವಾಗಿ ಹಿರಿಯ ಉಪನ್ಯಾಸಕರಾದ ರಾಘವೇಂದ್ರ ನಾಯಕ್ ಮಾತನಾಡಿ:-ಪೌರತ್ವ ತರಬೇತಿ ಶಿಬಿರದ ಮಹತ್ವವನ್ನು ವಿವರಿಸಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಉಪನ್ಯಾಸಕ ಕೆ.ಬಿ.ರವಿಕುಮಾರ್ ಅವರು “ಪ್ರಶಿಕ್ಷಣಾರ್ಥಿಗಳು ತರಗತಿಯ ಪಾಠ ಬೋಧನೆಗೆ ಮಾತ್ರ ಸೀಮಿತವಾಗದೆ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಪ್ರವೃತಿಯನ್ನು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಮನೋಭಾವ ಬೆಳಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೇಮಂತ್ ರಾಜ್ ಎನ್ ಎಲ್ ವಹಿಸಿದ್ದರು.ಪೌರತ್ವ ತರಬೇತಿ ಶಿಬಿರದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ದೊರೆಸ್ವಾಮಿ, ವಿಶ್ವನಾಥ್, ಕಲ್ಲೇಶ್,ಎಟಿ ನಾಗೇಶ್, ಶಾಮಸುಂದರ್, ಕಚೇರಿ ಅಧೀಕ್ಷಕರಾದ ವಾಣಿಶ್ರೀ, ಪ್ರಶಿಕ್ಷಣಾರ್ಥಿಗಳಾದ ಯತೀಶ್, ಸಿದ್ದಲಿಂಗಮ್ಮ, ಪುಷ್ಪ,ಪಿ, ಆಕಾಶ್, ಗಿರೀಶ್, ಅಶ್ವಿನಿ,ಕಿಶೋರ್, ಭೀಮಪ್ಪ,ಶ್ರೀಕಾಂತ,ಸ್ಪಂದನ,ಅಖಿಲ, ಕವಿತಮ್ಮ, ರಮ್ಯ, ತಿಪ್ಪೇಸ್ವಾಮಿ,ನಂದಿನಿ ಮುಂತಾದ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.