
ಹಿರಿಯೂರು:
ಈಗಾಗಲೇ ಸಾಕಷ್ಟು ಜನರು ರಾಣೆಬೆನ್ನೂರಿನ ಡಾ.ಮುದ್ರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿಕೊಂಡು, ಆರ್ಥೋ ತಜ್ಞರು ಡಾ.ಸಂಜೀವ ಮಾ.ಮುದ್ರಿ ಎಂ.ಬಿ.ಬಿ.ಎಸ್, ಡಿ.ಆರ್ಥೋ ಡಿ.ಎನ್.ಬಿ(ಆರ್ಥೋ) ಇವರಿಂದ ಮಂಡಿನೋವಿಗೂ ನಿಜಾಯಿಂಟ್ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು ಗುಣಮುಖರಾಗಿ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ ಎಂಬುದಾಗಿ ವಾಗ್ದೇವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ವಿ.ಅಮರೇಶ್ ಹೇಳಿದರು.
ನಗರದ ವಾಗ್ದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ವಾಸವಿ ವಿದ್ಯಾವರ್ಧಕ ಸಂಘ, ರೋಟರಿ ಭಾರತೀಯ ರೆಡ್ ಕ್ರಾಸ್, ಲಯನ್ಸ್ ಕ್ಲಬ್, ಇಂಟರ್ ನ್ಯಾಷನಲ್ ಹಿರಿಯೂರು ಮತ್ತು ಲಕ್ಷ್ಮಿ ಸರ್ಜಿಕಲ್ ಡ್ರಾಮಾ ಆರ್ಥೋ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಣೆಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಸಾರ್ವಜನಿಕರ ಮೊಣಕಾಲು ಮಂಡಿಚಿಪ್ಪು ಮತ್ತು ಚಿಪ್ಪು ಬದಲಾವಣೆಗಳಿಗಾಗಿ ವಿಶೇಷ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ನಗರದ ತಾಲ್ಲೂಕಿನ ಮೂಳೆ, ಕೀಲುರೋಗಿಗಳು ಮೊಣಕಾಲು ಮಂಡಿಚಿಪ್ಪು ಮತ್ತು ಚಿಪ್ಪು ಬದಲಾವಣೆಗಳಿಗಾಗಿ ವಿಶೇಷ ಉಚಿತ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಆರ್ಥೋ ತಜ್ಞರು ಡಾ.ಸಂಜೀವ ಮಾ.ಮುದ್ರಿ ಮಾತನಾಡಿ, ಕೀಲು, ಮೂಳೆ, ಮಂಡಿ ನೋವಿನವರು ತಪಾಸಣೆ, ಸಲಹೆ ಪಡೆದುಕೊಂಡು ಅವಶ್ಯ ಶಸ್ತ್ರಚಿಕಿತ್ಸೆ ನಡೆಸಿಕೊಳ್ಳುವವರಿಗೆ ಯಶಸ್ವಿನಿ, ಕೆ.ಎ.ಎಸ್.ಎಸ್.ನ ಜ್ಯೋತಿ ಸಂಜೀವಿನಿ ಕಾರ್ಡ್ ಮತ್ತು ಯಾವುದೇ ಪ್ರೈವೇಟ್ ಇನ್ಸೂರೆನ್ಸ್ ನವರಿಗೆ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು ಈಗಾಗಲೇ ಹಿರಿಯೂರು ಭಾಗದಿಂದ ಸಾಕಷ್ಟು ಜನರು ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಆರೋಗ್ಯವಂತರಾಗಿರುತ್ತಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಮುದ್ರಿ ಆಸ್ಪತ್ರೆ ಸಿಬ್ಬಂದಿಗಳಾದ ಕೊಟ್ರೇಶ್, ವೀರೇಶ್ ಪಿ.ಆರ್.ಒ. ಹಾಗೂ ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ಚಂದ್ರಹಾಸ್, ಹೆಚ್.ಡಿ.ವಸಂತ್ ಕುಮಾರ್, ರೆಡ್ ಕ್ರಾಸ್ ನ ಸಿ.ನಾರಾಯಣಾಚಾರ್, ಪಿ.ಆರ್.ಸತೀಶ್ ಬಾಬು ಉಪಸ್ಥಿತರಿದ್ದರು.ಈ ಶಿಬಿರದಲ್ಲಿ ಸುಮಾರು 100 ಜನರು ಕೀಲು ಮೂಳೆ, ಮಂಡಿ ನೋವುಗಳ ಉಚಿತ ತಪಾಸಣೆ ನಡೆಸಲಾಯಿತು.



About The Author
Discover more from JANADHWANI NEWS
Subscribe to get the latest posts sent to your email.