August 9, 2025
IMG20250809071555_01.jpg

ಚಳ್ಳಕೆರೆ ಆ.9 ಮಳೆಸುರಿಸಿ ಎರಡು ದಿನ ವಿಶ್ರಾಂತಿ ಪಡೆದ ಮಳೆರಾಯ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಬೆಳೆಗಳು ಜಲಾವೃತ ಗೊಂಡೆರೆ ಮನೆಗಳು ಕುಸಿದು ಬಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುವಂತೆ ಮಳೆರಸಯ ಆವಾಂತರ ಸೃಷ್ಟಿ ಮಾಡಿದ್ದಾನೆ.
ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ.ಗೋಪನಹಳ್ಳಿ ಹುಲಿಕುಂಟೆ. ತಳಕು ಹೋಬಳಿ ಸೇರಿದಂತೆ ವಿವಿಧೆಡೆ ಜಮೀನುಗಳಲ್ಲಿ ಅಡಿಕೆ, ತೆಂಗು, ಮೆಕ್ಕೆಜೋಳ, ತರಕಾರಿ . ತೊಗರಿ.ಸೇರಿದಂತೆ ವಿವಿಗಧ ಬೆಳೆಗಳು ಜಲಾವೃತಗೊಂಡರೆ.
ನಗರದ ವೆಂಕಟೇಶ್ವರ ನಗರದ ಅಭಿಶೇಖ್ ನಗರದಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗೆ ನಷ್ಟವಾದ ತಾಲೂಕಿನ ಕೆಲವು ಕಡೆ ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿವೆ.
ಚಳ್ಳಕೆರೆ ಪಾವಗಡ ಮಾರ್ಗದ ದ್ಯಾವರನಹಳ್ಳಿ ಸಮೀಪ ಉಪ್ಪಹಳ್ಳಿ ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದು ಇಲ್ಲಿ ಸೇತುವೆ ಇಲ್ಲದ ಕಾರಣ ವಾಹನ ಸವಾರರು ಹೈರಾಣಾಗಿದ್ದಾರೆ.
ನಗರಂಗೆರೆ ಕೆರೆ ಕೋಡಿ ಬಿದ್ದ ಕಾರಣ ಗರೀಬ್ ಸಾಬ್ ಮಠ ಜಲಾವೃತಗೊಂಡಿದೆ. ಇದೇ ರೀತಿ ರೈತರ ಜಮೀನುಗಳಲ್ಲೂ ಸಹ ನೀರಿನಿಂದ ಬೆಳೆಗಳು ಜಲಾವೃತಗೊಂಡಿದ್ದು ರೈತರಿಗೆ ಅಪಾರ ನಷ್ಟವಾಗಿದೆ ಈಗೆ ಮಳೆ ಎಡೆಬಿಡದೆ ಸುರಿದರೆ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಕೈಗೆ ಬಂದಿದ್ದ ಬೆಳೆ ಮಳೆರಾಯನ ಅವಕೃಪೆಯಿಂದ ಹಾನಿಯಾಗಿದೆ. ಅತಿವೃಷ್ಟಿಯಿಂದ ಚಳ್ಳಕೆರೆ ತಾಲೂಕಿನ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading