
.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಹೊರ ಮಠದಲ್ಲಿ ವಿಶೇಷ ಪೂಜೆ. ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ. ಎಂ.ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು.





ನಾಯಕನಹಟ್ಟಿ: ಪಾಕಿಸ್ತಾನದ ಉಗ್ರಗಾಮಿಗಳ 9 ಶಿಬಿರಗಳ ಮೇಲೆ ಭಾರತ ಸೇನೆ ವೈಮಾನಿಕ ನೆಡೆಸಿ ದಾಳಿ.ನೂರಾರು ಉಗ್ರರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ. ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದರು.
ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾರತ ಸೇನೆ ಹಾಗೂ ಯೋಧರಿಗೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪಾಕಿಸ್ತಾನ ಉಗ್ರರನ್ನು ನಾಶ ಮಾಡಲು ಶಕ್ತಿಯನ್ನು ಹಾಗೂ ವಿಜಯವನ್ನು ಕೊಡಲಿ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಮಾತನಾಡಿದರು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂ ಹೆಸರಿನಲ್ಲಿ ಭಾರತೀಯ
ಸೇನೆ ವೈಮಾನಿಕ ದಾಳಿ ಮೂಲಕ ಬಾಂಬುಗಳ ಸುರಿಮಳೆ ಸುರಿದು ನೂರಾರು ಭಯೋತ್ಪದಕ ರಾಕ್ಷಸರನ್ನು ಸಂಹಾರ ಮಾಡಿ.ಪೆಹಾಲ್ಬಮ್ ನಲ್ಲಿ ನೆಡೆದ ಅಮಾಯಕ
ಭಾರತೀಯರ ಮೇಲೆ ಪಾಕಿಸ್ತಾನದ ಉಗ್ರರು ಮಾಡಿದ ಮಾರಣ ಹೋಮದ ಸೇಡಿನ ಉತ್ತರವಾಗಿ,ಭಾರತೀಯ ಸೇನೆ. ಆಪರೇಷನ್ ಸಿಂಧೂರ ಕಾರ್ಯಚರಣೆ ಯಶಸ್ವಿಯಾದ ಪ್ರಯುಕ್ತ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಎಂ.ವೈ.ಟಿ. ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ರೇಖಲಗೆರೆ ಚಿನ್ನಯ್ಯ, ಎತ್ತಿನಹಟ್ಟಿ ದೇವರಾಜ್, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.