September 15, 2025
9hsdp1.jpg

ಹೊಸದುರ್ಗ
ಹೊಸದುರ್ಗತಾಲೂಕಿನ ಕಬ್ಬಳ ಗ್ರಾಮದ ಗ್ರಾಮ ದೇವತೆ ಕತ್ತಿಕಲ್ಲಾಂಭ ದೇವಿಯ ರಥೋತ್ಸವ ಹಾಗೂ ಸಿಡಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರಗಿತು.
ಜಾತ್ರೆಯ ಅಂಗವಾಗಿ ಬಧುವಾರ ರಾತ್ರಿ ಗ್ರಾಮದ ಕತ್ತಿಕಲ್ಲಾಂಭ ದೇವಿ, ಮಹಾತಂಗಿ ದೇವರಗಳೊಂದಿಗೆ ಹಿಂದಿನಿಂದಲೂ ಜಾತ್ರೆಗೆ ಅಗಮಿಸುವ ಅಜು ಬಾಜು ಗ್ರಾಮಗಳಾದ ಬೊಮ್ಮೇನಹಳ್ಳಿ,ಕರಿಯಮ್ಮ ದೇವಿ, ಮಲ್ಲೇನಹಳ್ಳಿ ತಿರಮಲೇಶ್ವರಸ್ವಾಮಿ, ಹೊಸಹಟ್ಟಿ ಗ್ರಾಮದ ಅಂಜನೇಯ ಸ್ವಾಮಿ ದೇವರಗಳ ಕೂಡು ಬೇಟಿ ಯೊಂದಿಗೆ ಗ್ರಾಮದ ರಾಜ ಬೀದಿಗಳಲ್ಲಿ ನಾನಾ ಜನಪದ ಕಲಾಮೇಳಗಳು, ದೇವಿಯ ಭಂಟ ಚೋಮನ ಕುಣಿತದೊಂದಿಗೆ ರಾಜ ಬೀದಿ ಉತ್ಸವ ನಡಯಿತು.
ಗುರುವಾರ ಬೆಳಿಗ್ಗೆ ಎಲ್ಲಾ ದೇವರಗಳ ಮೂರ್ತಿಗಳನ್ನು ರಥೋತ್ಸವದಲ್ಲಿ ಕುಳ್ಳಿರಿಸಿ ಧಾರ್ಮಿಕ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದ ನಂತರ ನೆರದಿದ್ದ ಭಕ್ತರ ರಥ ಎಳೆದು ಭಕ್ತಿ ಸಮರ್ಪಿಸಿದರು.
ಗುರುವಾರ ಮದ್ಯಾಹ್ನ ಅಲಾಂಕೃತವಾದ ಸಿಡಿ ಬಂಡಿಯಲ್ಲಿ ಸಿಡಿ ಮರವನ್ನು ಏರಿಸಿ ಗ್ರಾಮದಿಂದ ೧ಕೀಮಿ ದೂರಲ್ಲಿರುವ ಜಾಲಿಯಮ್ಮನ ದೇವಾಲಯದ ವಿಶಾಲವಾದ ಬಯಲಿನಲ್ಲಿ ದೇವಿ ಗುರುತಿಸಿದ ವ್ಯಕ್ತಿಯನ್ನು ಮರದ ಮೇಲೆ ಹತ್ತಿಸಿ ನೆರದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಸಿಡಿ ಉತ್ಸವ ಜರಗಿತು.
ಉತ್ಸವದಲ್ಲಿ ಬಾಗವಹಿಸಿದ್ದ ಭಕ್ತರು ಸಿಡಿ ಮರಕ್ಕೆ ಸಂಕಷ್ಟ ನಿವಾರಣೆಯಾಗಲೆಂದು ಬಾಳೆ ಹಣ್ಣು, ಹೂವು, ನಾಣ್ಯಗಳನ್ನು ತೂರುವ ಮೂಲಕ ಭಕ್ತಿ ಸಮರ್ಪಿಸಿದರೆ ರೈತಾಪಿ ಜನತೆ ಟ್ರಾö್ಯಕ್ಟರ್‌ಗಳು, ಎತ್ತಿನ ಬಂಡಿಗಳಲ್ಲಿ ಪಾನಕದ ಹಂಡೆಗಳಲ್ಲಿ ಪಾನಕ ಪಲಹಾರ ತಂದು ಜಾತ್ರೆಗೆ ಅಗಮಿಸಿದ್ದ ಜನತೆಗೆ ವಿತರಣೆ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading