
ಚಳ್ಳಕೆರೆ ಮೇ 9
ಕರ್ತವ್ಯ ನಿರ್ಲಕ್ಷ್ಯ ಹಾಗೂ
ಬೇಜವಾಬ್ದಾರಿಯುತ
ವರ್ತನೆ
ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಹಾಗೂ
ಶಿಸ್ತು ಪ್ರಾಧಿ ಕಾರ ಅಧಿಕಾರಿ ಪಿಡಿಒ ಅಮಾನತು
ಗೊಳಿಸಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಹೇಮಾವತಿ ಕರ್ತವ್ಯ ಲೋಪ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಂಬಂಧ ಜಿಪಂ ಸಿಇಒ ಸೋಮಶೇಖರ್ ಅಮಾನತು ಆದೇಶ ಹೂರಡಿಸಿದ್ದಾರೆ.


ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯದ ವೇಳೆ ಪೂರ್ವಾನುಮತಿ ಪಡೆಯದೆ
ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಕಂಡು ಬಂದ ಕಾರಣ ಕಾರಣ ಕೇಳಿ ನೋಟೀಸ್
ಜಾರಿ ಮಾಡಲಾಗಿದ್ದು, ಸದರಿಯವರು ನೋಟೀಸ್ ಪಡೆಯದೆ ನಿರಾಕರಿಸಿರುತ್ತಾರೆ. 2024-25ನೇ ಆರ್ಥಿಕ
ವರ್ಷ ಪೂರ್ಣಗೊಂಡು 2ತಿಂಗಳು ಕಳೆದಿದ್ದರೂ. 2024-25ನೇ ಸಾಲಿನ 15ನೇ
ಹಣಕಾಸು ಯೋಜನೆಯ ಕ್ರಿಯಾ ಯೋಜನೆಯನ್ನು ತಯಾರಿಸಿ ಇ-ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ ಅಳವಡಿಸಿರುವುದಿಲ್ಲ.
ಯೋಜನೆಯ ಪ್ರಗತಿ ಕುಂಠಿತವಾಗಿರುತ್ತದೆ. ಆದ್ದರಿಂದ ಈ ಬಗ್ಗೆ
ಇದರಿಂದ ಗ್ರಾಮ ಪಂಚಾಯತಿಯಲ್ಲಿ ಸದರಿ
ಇ-ಗ್ರಾಮ ಸ್ವರಾಜ್
03.05.2025ರಂದು ತಕ್ಷಣವೇ ಸದರಿ ಯೋಜನೆಯ ಕ್ರಿಯಾ ಯೋಜನೆಯನ್ನು ತಯಾರಿಸಿ
ತಂತ್ರಾಂಶದಲ್ಲಿ ಅಳವಡಿಸಿ ಪ್ರಗತಿ ಸಾಧಿಸುವಂತೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಆದರೆ ಸದರಿ ನೌಕರರು
ತಮ್ಮ ಬೇಜವಾಬ್ದಾರಿತನದಿಂದ ಕಾರಣ ಕೇಳಿ ನೋಟಿಸ್‌ಗೆ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ ಮತ್ತು 2024-25ನೇ
ಸಾಲಿನ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯನ್ನು ತಯಾರಿಸಿ ಇ-ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ
ಅಳವಡಿಸಿರುವುದಿಲ್ಲ. ಆದ್ದರಿಂದ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಹೆಚ್.ಹೇಮಾವತಿ, ಪಂಚಾಯತಿ
ಅಭಿವೃದ್ಧಿ ಅಧಿಕಾರಿ, ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಇವರ ವಿರುದ್ಧ ಕರ್ತವ್ಯ ಲೋಪದಡಿ ಶಿಸ್ತು ಕ್ರಮ ಕೈಗೊಳ್ಳಲು
ಕೋರಿರುತ್ತಾರೆ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ
ಇವರು ಒಬ್ಬ ಜವಾಬ್ದಾರಿಯುತ, ಸರ್ಕಾರಿ ನೌಕರರಾಗಿದ್ದುಕೊಂಡು, ಪೂರ್ವಾನುಮತಿ ಪಡೆಯದೆ ಅನಧಿಕೃತವಾಗಿ ಕರ್ತವ್ಯಕ್ಕೆ
ಗೈರು ಹಾಜರಾಗಿರುವುದು ಹಾಗೂ ಸರ್ಕಾರದ ಮತ್ತು ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡುವ ಮೂಲಕ,
ಸರ್ಕಾರಿ ನೌಕರರ ವೃತ್ತಿಗೆ ತರವಲ್ಲದ ರೀತಿ ವರ್ತಿಸಿ, ಕರ್ನಾಟಕ ನಾಗರೀಕ ಸೇವಾ (ನಡವಳಿ) ನಿಯಮಾವಳಿ ಉಲ್ಲಂಘಿಸಿರುವುದು, ಕಂಡು ಬಂದಿರುವ ಕಾರಣ ಸದರಿಯವರನ್ನು ಅಮಾನತ್ತುಗೊಳಿಸುವುದು
ಸೂಕ್ತವೆಂದು ಪರಿಗಣಿಸಿಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ, ಜಿಲ್ಲಾ ಪಂಚಾಯತ್ ಎಸ್.ಜೆ. ಸೋಮಶೇಖರ್. ಹೆಚ್.ಹೇಮಾವತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬೇಡರೆಡ್ಡಿಹಳ್ಳಿ
ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ
ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ. ಸದರಿಯವರು ಅಮಾನತ್ತು ಅವಧಿಯಲ್ಲಿ, ಈ ಪ್ರಾಧಿಕಾರದ
ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ ಮತ್ತು ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ
ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಆದೇಶ ಹೂರಡಿಸಿದ್ದಾರೆ.
سالة
About The Author
Discover more from JANADHWANI NEWS
Subscribe to get the latest posts sent to your email.