April 9, 2026
IMG-20260409-WA0285.jpg

ಚಳ್ಳಕೆರೆ ತಾಲೂಕಿನ ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 2025–26ನೇ ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ…
ಹೌದು…ಈ ಬಾರಿ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲಿ ಗಮನಾರ್ಹ ಫಲಿತಾಂಶ ತಂದುಕೊಟ್ಟಿದ್ದಾರೆ…
ಉಲಾಸಿನಿ ಡಿ.ವಿ ಅವರು 584 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ…
ನಿಖಿತಾ ಎಸ್ ಅವರು 582 ಅಂಕಗಳೊಂದಿಗೆ ಮೂರನೇ ರ್ಯಾಂಕ್ ಪಡೆದಿದ್ದಾರೆ…
ಶ್ರೀಲಕ್ಷ್ಮಿ ಅವರು 581 ಅಂಕಗಳೊಂದಿಗೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ…
ಇಷ್ಟೇ ಅಲ್ಲ…
ಈ ಬಾರಿ 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 34 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ…
ಇದು ಕಾಲೇಜಿನ ಶೈಕ್ಷಣಿಕ ಮಟ್ಟವನ್ನು ತೋರಿಸುವ ಮಹತ್ವದ ಸಾಧನೆ ಎಂದು ಹೇಳಬಹುದು…
ಈ ಸಾಧನೆಗೆ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಸರ್, ಪ್ರಾಂಶುಪಾಲರು ಹಾಗೂ ಬೋಧಕ ವೃಂದ ಸಂತೋಷ ವ್ಯಕ್ತಪಡಿಸಿದ್ದಾರೆ…
ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಮರ್ಪಣೆಯೇ ಈ ಯಶಸ್ಸಿನ ಮೂಲ ಎಂದು ಆಡಳಿತ ಮಂಡಳಿ ಶ್ಲಾಘಿಸಿದೆ…
ಈ ಸಾಧನೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ…
ಸಂಪೂರ್ಣ ಚಳ್ಳಕೆರೆ ತಾಲೂಕಿಗೆ ಹೆಮ್ಮೆ ತರುವಂತದ್ದು…
ಇಂತಹ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯ…

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading