ಹೊಸದುರ್ಗ: 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊರ ಬಿದ್ದಿದ್ದು, ಹೊಸದುರ್ಗದ ಪ್ರತಿಷ್ಠಿತ ಎಸ್.ನಿಜಲಿಂಗಪ್ಪ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 98.2% ವಾಣಿಜ್ಯ ವಿಭಾಗದಲ್ಲಿ 100% ರಷ್ಟು ಫಲಿತಾಂಶ ಬಂದಿದ್ದು, 59- ಅತ್ಯುನ್ನತ ಶ್ರೇಣಿಯಲ್ಲಿ, 83- ಪ್ರಥಮ ಶ್ರೇಣಿಯಲ್ಲಿ ಮತ್ತು 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.



ವಾಣಿಜ್ಯ ವಿಭಾಗದಲ್ಲಿ: ಅಂಜನಾ ಕುಮಾರಿ ಎಂ- 586, ದಿಶಾ ಎ.ಎಂ.-586, ಕುಶಾಲ್ ಹೆಚ್.ಎಂ.- 584 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ: ಸೈಯದಾ ಜೆಹರಾ- 584 ಮತ್ತು ವಿಲಾಸ್ ಆರ್. ಯಾದವ್-583 ಅಂಕಗಳನ್ನು ಪಡೆದಿರುತ್ತಾರೆ. ಒಟ್ಟು 22 ವಿದ್ಯಾರ್ಥಿಗಳು ಐಚ್ಚಿಕ ವಿಷಯಗಳಾದ ಬಿಸಿನೆಸ್ ಸ್ಟಡೀಸ್-06, ಗಣಿತ- 05, ಸ್ಮಾಟೀಸ್ಟಿಕ್ಸ್- 02, ಫಿಸಿಕ್ಸ್-02 ಕಂಪ್ಯೂಟರ್ ಸೈನ್ಸ್-02 ಬಯಾಲಜಿ- 02, ಎಕಾನಾಮಿಕ್ಸ್-02, ಅಕೌಂಟೆನ್ಸಿ-01 ರಂತೆ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ ಎಂದು ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ, ಅಕಾಡೆಮಿಕ್ ಡೈರೆಕ್ಟರ್ ಎಂ.ಬಿ.ತಿಪ್ಪೇಸ್ವಾಮಿ ಹಾಗೂ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.