
ರಾಂಪುರ ಏ.9
ದಿನಾಂಕ 06/04/2025 ರವಿವಾರದಂದು ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಹೊರವಲಯದ ರಸ್ತೆಯಲ್ಲಿ ಬೈಕ್ ಅಪಘಾತವಾಗಿ ಆಂಧ್ರಪ್ರದೇಶದ ವ್ಯಕ್ತಿ ಒಬ್ಬ ಬಿದ್ದು ಒದ್ದಾಡುತ್ತಿದ್ದರೂ ಯಾವುದೇ ಸಾರ್ವಜನಿಕರು, ಪೊಲೀಸರಿಗೆ ಆಗಲಿ ಆಂಬುಲೆನ್ಸ್ ಗಾಗಲಿ ಕರೆ ಮಾಡದಿರುವುದು ಕಂಡುಬಂದಿದ್ದು, ಕೊನೆಗೆ ಅವರ ಮನೆಯವರೇ ಬಂದು ಆಸ್ಪತ್ರೆಗೆ ಸೇರಿಸಿರುತ್ತಾರೆ. ಆದರೆ ಅದಾಗಲೇ ಅಪಘಾತ ಜರುಗಿ ನಾಲ್ಕರಿಂದ ಐದು ಗಂಟೆ ಆಗಿರುತ್ತದೆ ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ದುರದೃಷ್ಟವಶಾತ್ ಆತ ದಿನಾಂಕ 08/04/2025 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾನೆ. ಒಂದು ವೇಳೆ ಆತನಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರೆ ಆತ ಬದುಕುಳಿಯುವ ಸಾಧ್ಯತೆ ಬಹಳ ಇತ್ತು. ಆದ್ದರಿಂದ ಸಾರ್ವಜನಿಕರಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ಯಾವುದೇ ಅಪಘಾತ ನಡೆದಲ್ಲಿ ಅಥವಾ ತಮ್ಮ ಗಮನಕ್ಕೆ ಬಂದಲ್ಲಿ 112 ಗೆ ಕರೆ ಮಾಡಿ ಪೋಲಿಸ್ ರಿಗೆ ಮತ್ತು ಅಂಬುಲೆನ್ಸ್ ಗೆ ತಿಳಿಸುವುದು. ಇದರಿಂದ ನಿಮ್ಮನ್ನು ಯಾವುದೇ ಸಾಕ್ಷಿಗಳಾಗಿ ಪರಿಗಣಿಸುವುದಿಲ್ಲ, ಪೊಲೀಸ್ ಠಾಣೆಗೆ ಕರೆಯುವುದಾಗಲಿ, ನ್ಯಾಯಾಲಯಕ್ಕೆ ಕರೆಯುವುದಾಗಲಿ ಮಾಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಅಪಘಾತ ಜರುಗಿದಲ್ಲಿ ಗಾಯಾಳು ವನ್ನು ಆಸ್ಪತ್ರೆಗೆ ಸೇರಿಸುವುದು, ಪೊಲೀಸ್ ಠಾಣೆಗೆ ಅಥವಾ ಆಂಬುಲೆನ್ಸ್ ಗೆ ಕರೆ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆಯಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
-ರಾಂಪುರ ಪೊಲೀಸ್ ಠಾಣೆ .
About The Author
Discover more from JANADHWANI NEWS
Subscribe to get the latest posts sent to your email.