ಚಳ್ಳಕೆರೆ ಮಾ.9
ದೇವಾಲಯಗಳು ಶಾಂತಿ ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ದೇವರಿಗೆ ಅನೇಕ ಹೆಸರುಗಳಿದ್ದರೂ ಶಕ್ತಿ ಮೂಲ ಒಂದೇಯಾಗಿದೆ ಎಂದು ಶಾರದಾಶ್ರಮದ ತ್ಯಾಗಮಯಿ ಹೇಳಿದರು.
ನಗರದ ಶಿವನಗರದಲ್ಲಿ ಭಕ್ತರಿಂದ ನೂತನವಾಗಿ ನಿರ್ಮಾಣವಾಗುರುವ ಶ್ರೀಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮ ಭೂಮಿ ಎನಿಸಿದ ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು.ದೇವಸ್ಥಾನಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶೃದ್ಧೆ ಅಪಾರ ಎಂದು ತಿಳಿಸಿದರು.
ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಇಂದಿನ ಜೀವನದ ಜಂಜಾಟದ ಬಧುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದ್ದು ದೇವಸ್ಥಾನ .ಆಧ್ಯಾತ್ಮಿಕ ಸತ್ಸಂಗ ಸಭೆ ಉತ್ಸವಗಳು ಶ್ರದ್ದೆ ಭಕ್ತಿ.ಶಾಂತಿ ನೆಮ್ಮದಿ ನೀಡುತ್ತವೆ ಜನರು ದೇವಸ್ಥಾನ ಪೂಜಾ ಕಾರ್ಯಕ್ರಮ ಉತ್ಸವ. ಸತ್ಸಂಗ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೆಮ್ಮದಿ ಕಾಣುತ್ತಿದ್ದಾರೆ ಎಂದು ತಿಳಿಸಿದರು.
ಭಾನುವಾರ ಬೆಳಗ್ಗೆಯಿಂದಲೇ ಶ್ರೀ ಮಹಾಲಕ್ಷ್ಮಿಯ ಪೀಠ ಸಂಸ್ಕಾರ,
ಅಷ್ಟಬಂಧನ, ವಿಗ್ರಹ ಪ್ರತಿಷ್ಠಾಪನೆ, ಮಹಾ ರುದ್ರ ಕಭಿ, ವಸ್ತ್ರಾಲಂಕಾರ, ಪುಷ್ಪಾಲಂಕಾರ, ಪ್ರಾಣ
ಪ್ರತಿಷ್ಠಾಪನೆ, ಪ್ರಾಣ ಕಲಾ ಹೋಮ, ನಾಡಿ ಸಂಧಾನ, ನೇತ್ರೋನಿಲನ, ಪ್ರಧಾನ ಪೂರ್ಣಾಹುತಿ,
ಕದಳಿಕೂಷ್ಮಾಂಡ ಛೇದನ, ಬಲಿಹರಣ, ದರ್ಪಣ ದರ್ಶನ, ನಂತರ ರಾಜೋಪಚಾರ.
ಮಹಾಮಂಗಳಾರತಿ, ಪ್ರಸಾದ ವಿನಿಯೋಗ. ಪತಂಜಲಿ ಯೋಗ ಸಮಿತಿಯವರಿಂದ ಭಜನಾ ಕಾರ್ಯಕ್ರಮ.
ಸುಮಾ ಪ್ರಕಾಶ್ ತಂಡದವರಿಂದ ಸೌಂದರ್ಯ ಲಹರಿ.ಶ್ರೀ ಶಾರದಾಶ್ರಮದವರಿಂದ ಕಾರ್ಯಕ್ರಮ.
ಶ್ರೀ ಸಾಯಿ ಪ್ರಾರ್ಥನಾ ಮಂಡಳಿ. ವಾಸವಿ ಮಹಿಳಾ ಮಂಡಳಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು
ಪೂಜೆ ವಿಧಿ-ವಿಧಾನಗಳು
ದೇವಾಲಯದ ಶ್ರೀಮಹಾಲಕ್ಷ್ಮಿದೇವಿ,
ಶ್ರೀದೇವಿ, ಭೂದೇವಿ ವಿಗ್ರಹದ ಶಿಲ್ಪಗಳು
ವೇದಬ್ರಹ್ಮ ಶ್ರೀಶ್ರೀ ಎಸ್. ಮಂಜುನಾಥ ಆಚಾರ್ಯ,
ಯಲಹಂಕ, ಬೆಂಗಳೂರು
ಹಾಗೂ ವೈಧಿಕ ವೃಂದ.
ಶಿಲ್ಪಿ ಎಸ್. ಮಂಜುನಾಥ ಆಚಾರ್ಯ ಹಾಗೂ
ಶ್ರೀಯುತ ಶ್ರೀ ಅಭಿ ಆರಾಧ್ಯ ಶರ್ಮಾಜ
ಮತ್ತು
ಪರಪ್ಪ ಪಂಚಾಲ್ ಶರ್ಮಾಜಿ ತಂಡದವರಿಂದ
ಪೂಜಾ ವಿಧಿ-ವಿಧಾನಗಳು ನೆರವೇರಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಸಮಿತಿ ಹಾಗೂ ಭಕ್ತರು ಭಾಗವಹಿಸಿದ್ದರು.






















About The Author
Discover more from JANADHWANI NEWS
Subscribe to get the latest posts sent to your email.