ಚಳ್ಳಕೆರೆಅ.9
ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯದ ತ್ಯಾಜ್ಯವನ್ನು ರಸ್ತೆ ಬದಿಯ ಚರಂಡಿಗಳಿಗೆ ಬಿಡುತ್ತಿದ್ದು, ಸುತ್ತಮುತ್ತಲ ನಿವಾಸಿಗಳು ಮೂಗುಮುಚ್ಚಿಕೊಂಡು ಜೀವನ ಸಾಗಿಸುವಂತಂತಾಗಿದೆ.
ಹೌದು ಇದು ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ತ್ಯಾಜ್ಯವನ್ನು ರಾತ್ರಿಯಾದರೆ ಸಾಕು ಚರಂಡಿ ಬಿಡುತ್ತಿದ್ದು ಇದರಿಂದ ಶಾಂತಿನಗರದ ನಿವಾಸಿಗಳು ಸಾಂಕ್ರಮಿಕ ರೋಗ ಭೀತಿ ಹಾಗೂ ಮೂಗು ಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ.
ಈ ಬಗ್ಗೆ ನಗರಸಭೆ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಮಂಜುಳಾ ಪ್ರಸನ್ನಕುಮಾರ್ ಸಾಕಷ್ಟು ಬಾರಿ ನಗರಸಭೆಗೆ ದೂರು ನೀಡಿದರೂ ಹಾಗೂ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡರೂ ನಗರಸಭೆ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂದು ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಶೌಚಾಲಯ ತ್ಯಾಜ್ಯ ಶನಿವಾರ ತಡರಾತ್ರಿ ಚರಂಡಿಗೆ ಬಿಟ್ಟಿದ್ದು ಗೊಬ್ವು ವಾಸನೆ ಬರುತ್ತಿರುವುದನ್ನು ಗಮನಿಸಿದ ಶಾಂತಿನಗರ ನಿವಾಸಿ ಬೋಜರಾಜು ತಡರಾತ್ರಿ ಸಾರ್ವಜನಿಕ ಶೌಚಾಲಯದ ಬಳಿ ಹೋಗಿ ಪರಿಶೀಲನೆ ಮಾಡಿದಾಗ ಶೌಚಾಲಯದ ತ್ಯಾಜ್ಯ ರಸ್ತೆ ಬದಿಯ ಚಿಕ್ಕ ಚರಂಡಿಗೆ ಬಿಟ್ಟಿರುವುದು ಕಂಡು ಶೌಚಾಲಯದ ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡಾ ಶೌಚಾಲಯದ ಗುತ್ತಿಗೆದಾರಾರ ಶೌಚಾಲಯಕ್ಕಿ ಬೀಗ ಹಾಕಿಕೊಂಡು ಪರಾರಿಯಾದ ಘಟನೆ ಜರುಗಿದೆ .
ನಗರದ ನೈರ್ಮಲ್ಯ ಕಾಪಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಶೌಚಾಲಯಕ್ಕೆ ಬೀಗ ಜಡಿಯುವ ಮುನ್ನ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಶೌಚಾಲಯದ ತ್ಯಾಜ್ಯ ಚರಂಡಿಗೆ ಬಿಎಉವುದನ್ಮುನಿಲ್ಲಿಸುವರೇ ಕಾದು ನೋಡ ಬೇಕಿದೆ.






About The Author
Discover more from JANADHWANI NEWS
Subscribe to get the latest posts sent to your email.