March 17, 2026
IMG-20250209-WA0161.jpg

ಚಳ್ಳಕೆರೆ ಫೆ.9

ಗ್ರಾಮೀಣ ಸಂಪರ್ಕ ಮಣ್ಣಿನ ರಸ್ತೆಗೆ ಡಾಂಬರ್ ರಸ್ತೆ ಭಾಗ್ಯ ಕಲ್ಪಿಸುವರೇ …?

ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂರಮ್ಮನಹಳ್ಳಿ ಗ್ರಾಮದಿಂದ ಚೌಳಕೆರೆ ಮಾರ್ಗದ ಮುಷ್ಠಲಗುಮ್ಮಿ ಗ್ರಾಮಕ್ಕೆ ಆರು ಕಿ.ಮೀ. ರಸ್ತೆ ತಗ್ಗು ಗುಂಡಿಗಳು ಬಿದ್ದು ಗಿಡಗೆಂಟೆಗಳು ರಸ್ತೆಗೆ ಚಾಚಿಕೊಂಡಿದ್ದು ವಾಹನ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ.  ಸೂರಮ್ಮನಹಳ್ಳಿ ಗ್ರಾಮದಿಂದ ಚೌಳಕೆರೆ ಮಾರ್ಗವಾಗಿ ಮುಷ್ಟಲಗುಮ್ಮಿ ಗ್ರಾಮಕ್ಕೆ ಆರು ಕಿ.ಮಿ. ಈ ರಸ್ತೆಯು ಮೂರು ಹಳ್ಳಿಗಳಿಗೆ ಹಾಗೂ ಅನೇಕ ಹಳ್ಳಿಗಳ ಜನರಿಗೆ ರಸ್ತೆಯು ಹೆಚ್ಚು ಪ್ರಾಮುಖ್ಯತೆ ಪಡೆದಿರುತ್ತದೆ. ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಹಾಗೂ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಈ ರಸ್ತೆ ಹೆಚ್ಚು ಅನಾನುಕೂಲವಾಗಿರುತ್ತದೆ. ಮುಷ್ಟಲಗುಮ್ಮಿ ಗ್ರಾಮದಲ್ಲಿ ಸಮುದಾಯದ ಆರೋಗ್ಯ ಕೇಂದ್ರ ಇರುವುದರಿಂದ ಆಸ್ಪತ್ರೆಗೆ ರೋಗಿಗಳು ವಾಹನ ತೆಗೆದು ಕೊಂಡು ಹೋಗುವಾಗ ತೊಂದರೆಯನ್ನು ಅನುಭವಿಸುತ್ತಾರೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಮಳೆಕಾಲದಲ್ಲಿ ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ. ಇನ್ನು ಮುಖ್ಯವಾಗಿ ರಸ್ತೆಯ ಮತ್ತು ವಾಹನ ಓಡಾಟದ ಸಮಸ್ಯೆಯಿಂದ ಎಷೋ ತಂದೆತಾಯಿಯರು ಹೆಣ್ಣುಮಕ್ಕಳನ್ನು ಅರ್ಧಕ್ಕೆ ಶಾಲೆಯನ್ನು ಪ್ರೌಢಶಾಲೆಗೆ ಬಿಡಿಸಿದ ನಿದರ್ಶನಗಳಿವೆ.

ಹಾಗಾಗಿ ಈ ಭಾಗದ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಬಹಳ ಕಡಿಮೆ ಸಾಕ್ಷರತೆ ಇದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಹಿಂದಿನ ಶಾಸಕರು ಹಾಗೂ ಸಚಿವರಿಗೆ ಎರಡು ಮೂರು ಬಾರಿ ಗ್ರಾಮಕ್ಕೆ ಬಂದಾಗ ಮನವಿ ಮಾಡಿಕೊಳ್ಳಲಾಗಿತ್ತು. ಶಾಸಕರ ಜನಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮನವಿ ಮಾಡಿಕೊಂಡರೂ ರಸ್ತೆ ದುರಸ್ತಿ ಭಾಗ್ಯ  ಕಂಡಿಲ್ಲ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ರಸ್ತೆ ದುರಸ್ತಿ ಭಾಗ್ಯ ಒದಗಿಸುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading