ಪಿಯುಸಿ ಯಲ್ಲಿ ಫೇಲ್- ಸದ್ಗುರು ಆಯುರ್ವೇದ ಸಂಸ್ಥೆ ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೂಗ ಸಮಾಜಸೇವೆಯಲ್ಲಿ ತೊಡಗಿದೆ ಉದ್ಯಮಿ ಡಿ.ಎಸ್.ಪ್ರದೀಪ್
ನಾಗತಿಹಳ್ಳಿ ಮಂಜುನಾಥ್ ಹೊಸದುರ್ಗ.
ಹೊಸದುರ್ಗ ಫೆ.9 ಜನಸೇವೆಯೇ ಜನಾರ್ಧನನ ಸೇವೆ’ ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ ಇಂದು ಸಮಾಜ ಸೇವಾಕರ್ತರೆನಿಸಿಕೊಂಡಿರುವವರಲ್ಲಿ ಬಹುಜನ ಸ್ವಾರ್ಥ ಮನೋಭಾವದವರಾಗಿರುವುದರಿಂದ ಸಮಾಜ ಸೇವಾಕರ್ತರಿಂದರೆ ಸಾರ್ವಜನಿಕರ ಹಣದಲ್ಲಿ ಐಷಾರಾಮದ ಜೀವನವನ್ನು ನಡೆಸುವವರೆಂಬ ಅರ್ಥ ಜನಜನಿತವಾತಗಿದೆ.


ಆದರೆ ಇಲ್ಲೊಬ್ಬರು ಕಷ್ಟ ಪಟ್ಡು ಕೆಳ ಹಂತದಿಂದ ಬಂದು ಉದ್ದಿಮೆ ಪ್ರಾರಂಭಿಸಿ ನೂರಾರು ಮಹಿಳೆ ಸೇರಿದಂತೆ ಇತರರಿಗೆ ಉದ್ಯೋಗ ನೀಡುವ ಮೂಲಕ ಅವರ ಕುಟುಂಬಗಳಿಗೆ ಆಸರೆಯಾದರೆ ಅದರಲ್ಲಿ ಬಂದ ಸಂಪಾದನೆಯಲ್ಲಿ ಬಡ ಮಕ್ಕಳು ವ್ಯಾಸಂಗ ಮಾಡುವ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜ ಸೇವೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಹೌದು ಇದು ಹೊಸದುರ್ಗ ನಗರದ ಸದ್ಗುರು ಆರ್ಯುವೇದ ಉದ್ಯಮಿ ಡಿ.ಎಸ್.ಪ್ರದೀಪ್ ಇವರ ಯಸೋಗಾದೆಯಾಗಿದೆ.
ಹಲವು ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ, ಇಟ್ಟ ಗುರಿಯನ್ನು ಬೆನ್ನತ್ತುವ ಸಾಧಕ, ಸದ್ಗುರು ಆಯುರ್ವೇದ ಸಂಸ್ಥೆ ಮತ್ತು ಫಂಡೂಸ್ ವಾಟರ್ ನಿರ್ಮಿಸಿ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿ, ನೂರಾರು ಜನರಿಗೆ ಕೆಲಸ ಕಲ್ಪಿಸಿದ ಉದ್ಯೋಗದಾತ, ಹೊಸದುರ್ಗ ತಾಲೂಕಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಶಿಕ್ಷಣ ಪ್ರೇಮಿ, ತನ್ನ ಸರಳತೆಯಿಂದಲೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮೆರೆಯುತ್ತಿರುವ ಉದ್ಯಮಿ ಡಿ.ಎಸ್. ಪ್ರದೀಪ್ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಬಡವರ ಪಾಲಿಗೆ ಕೋಡುಗೆ ದಾನಿಯಾಗಿದ್ದಾರೆ.
ಡಿ.ಎಸ್. ಪ್ರದೀಪ್ ಮೂಲತಃ ಹೊಸದುರ್ಗದವರೇ ಆಗಿದ್ದು, ಇವರ ಮನೆತನದವರು ಕುಲಕಸುಬಾದ ವ್ಯಾಪಾರ ವೃತ್ತಿಯನ್ನೇ ಅವಲಂಬಿಸಿಕೊಂಡು, ನಡೆಸಿಕೊಂಡು ಬಂದಿದ್ದಾರೆ ಶ್ರೀಧರಮೂರ್ತಿ ಮತ್ತು ಲಕ್ಷ್ಮಿ ಎಂಬ ದಂಪತಿಯ ಮಗನೇ ಡಿ.ಎಸ್.ಪ್ರದೀಪ್. ಪ್ರಾಥಮಿಕ ಶಿಕ್ಷಣವನ್ನು ಹೊಸದುರ್ಗ ಪಟ್ಟಣದ ಜ್ಞಾನ ವಾಹಿನಿ ಶಾಲೆಯಲ್ಲಿ ಮುಗಿಸುತ್ತಾರೆ, ನಂತರ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿದ್ದಾರೆ.
ಡಿ.ಎಸ್. ಪ್ರದೀಪ್ ರವರು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಹೊಸದುರ್ಗದಲ್ಲಿಯೇ ಮುಗಿಸಿ, 2002 ರಲ್ಲಿ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತಾರೆ. ತದನಂತರ ವಿದ್ಯಾಭ್ಯಾಸ ಮುಂದುವರಿಸದೆ, ಎಲೆಕ್ಟ್ರಾನಿಕ್ ವಿಷಯದಲ್ಲಿ ಆಸಕ್ತಿ ಇದ್ದುದ್ದರಿಂದ ಸ್ವಂತವಾಗಿ ಫ್ಯಾನ್ ಮತ್ತು ಮಿಕ್ಸಿ ರಿಪೇರಿ ಮಾಡುವ ಅಂಗಡಿ ತೆರೆಯುತ್ತಾರೆ. ಹಂತ ಹಂತವಾಗಿ ಇದೇ ವೃತ್ತಿಯನ್ನು ಮುಂದುವರಿಸಿ, ನಂತರ ಮೊಬೈಲ್ ಮಾರಾಟ ವೃತ್ತಿಗೆ ಇಳಿಯುತ್ತಾರೆ. ಅದರ ಜೊತೆಗೆ ತಂದೆಯವರು ಹೊಸದುರ್ಗದಲ್ಲಿ ಮಾಡಿಕೊಂಡಿದ್ದ ಮೆಡಿಮಿಕ್ಸ್ ಸೋಪಿನ ಏಜೆನ್ಸಿ ಮತ್ತು ಅದರ ಡಿಲವರಿ, ಕಲೆಕ್ಷನ್ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಪ್ರತಿ ತಿಂಗಳು ತಪ್ಪದೇ, ಕೊಟ್ಟಿದ್ದ ಟಾರ್ಗೆಟ್ ರೀಚ್ ಮಾಡಿ, ಇದರಿಂದ ಮೆಡಿಮಿಕ್ಸ್ ಸಂಸ್ಥೆ ಗೋಲ್ಡ್ ಮೆಡಲ್ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಕನಸ್ಸು ಇದ್ದುದ್ದರಿಂದ ಮತ್ತು ಸೋಪ್ ಮಾರ್ಕೆಟಿಂಗ್ ಅನುಭವ ಇದ್ದದ್ದರಿಂದ ಅವರ ಕನಸ್ಸಿನ ಕೂಸಾದ ಸದ್ಗುರು ಆಯುರ್ವೇದ ಸಂಸ್ಥೆಯನ್ನ ಹುಟ್ಟುಹಾಕಿದರು.
ಪ್ರದೀಪ್ ರವರಿಗೆ ಸೋಪ್ ಮಾರ್ಕೆಟಿಂಗ್ ಮಾಡಿದ ಅನುಭವ ಮತ್ತು ಆಸಕ್ತಿ ಇದ್ದಿದ್ದರಿಂದ ಸದ್ಗುರು ಎಂಬ ಹೆಸರಿನಲ್ಲಿ ವಿನೂತನವಾಗಿ ಸೋಪ್ ತಯಾರಿಸಬೇಕೆಂಬ ಆಲೋಚನೆ ಬೆಳೆಯುತ್ತದೆ. ಅದರಂತೆಯೇ, ಪುರಾತನದ ಆಯುರ್ವೇದಿಕ್ ಪದ್ಧತಿಗೆ ಹೊಸ ಸ್ಪರ್ಶ ನೀಡಿ, ಕಡಲೆಹಿಟ್ಟಿನಿಂದ ಸೋಪುಗಳನ್ನ ತಯಾರಿಸುತ್ತಾರೆ. ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ಸದ್ಗುರು ಆಯುರ್ವೇದ ಉತ್ಪನ್ನಗಳನ್ನ ತಯಾರಿಸಲು ಮುಂದಾಗುತ್ತಾರೆ. ಮೊದಲಿಗೆ 40 ಸಾವಿರ ರೂ.ಗಳಿಂದ ಪ್ರಾರಂಭವಾದ ಉದ್ಯಮ, ಇಂದು ಹತ್ತಾರು ಕೋಟಿ ವ್ಯವಹಾರ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ, ಅಕ್ಕ ಪಕ್ಕದ 4ರಿಂದ 5 ರಾಜ್ಯಗಳಲ್ಲಿ ಸದ್ಗುರು ಆಯುರ್ವೇದ ಉತ್ಪನ್ನಗಳು ಮಾರಾಟವಾಗುತ್ತಿದೆ.
ಹೊಸದುರ್ಗ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನ ದತ್ತು ಸ್ವೀಕಾರ ಮಾಡಿ, ಶಾಲೆಗಳಿಗೆ ಬೇಕಿರುವ ನೀರು, ಬೆಂಚು, ಕಪ್ಪು ಹಲಗೆ, ಮಕ್ಕಳು ಕೂರಲಿಕ್ಕೆ ಬೇಕಾಗಿರುವ ಬೆಂಚುಗಳು, ಸ್ಮಾರ್ಟ್ ಟಿವಿ, ಮಕ್ಕಳ ಕ್ರೀಡೆಗೆ ಬೇಕಿರುವ ಕ್ರೀಡಾ ಸಾಮಗ್ರಿಗಳು ಹಾಗೂ ಇನ್ನಿತರ ಪರಿಕರಗಳನ್ನು ನೀಡುತ್ತಿದ್ದಾರೆ.
ನಿರಾಶ್ರಿತ ಜನರಿಗೆ, ಬಡ ಕುಟುಂಬದ ವಿದ್ಯಾರ್ಥಿಗಳಿಗೆ, ಕ್ರೀಡಾಸಕ್ತರಿಗೆ, ಅಂಗವಿಕಲರಿಗೆ, ಧಾರ್ಮಿಕ ಕಾರ್ಯಗಳಿಗೆ ನಿರಂತರವಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ವಿಶೇಷವಾಗಿ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ತಮ್ಮ ಸಂಸ್ಥೆಯಲ್ಲಿ ವಿವಿಧ ಹುದ್ದೆ ಸೃಷ್ಟಿಸಿ, ವಿದ್ಯಾಭ್ಯಾಸ ಮತ್ತು ಅನುಭವಕ್ಕನುಗುಣವಾಗಿ ನೇಮಕಾತಿ ಮಾಡಿಕೊಂಡು ಸ್ವಾವಲಂಬನೆ ಸಾಧಿಸಲು ವಿವಿಧ ಸ್ಥರಗಳಲ್ಲಿ ಸಹಾಯ ಹಸ್ತ ನೀಡುವ ಔದಾರ್ಯ ವಂತರಾಗಿದ್ದಾರೆ. ಕರೋನ ಮಹಾಮಾರಿ ಬಂದಾಗ ಆಸ್ಪತ್ರೆಗೆ ಆಕ್ಸಿಜನ್ ಕಿಟ್, ರೋಗಿಗಳಿಗೆ ಆಹಾರದ ಕಿಟ್ ಉಚಿತವಾಗಿ ಒದಗಿಸಿದ ಆಪದ್ಭಾಂಧವ ಈ ಸದ್ಗುರು ಪ್ರದೀಪ್.
ಸದ್ಗುರು ಆಯುರ್ವೇದ ಸಂಸ್ಥೆಯನ್ನು ನಡೆಸುವುದರ ಜೊತೆಗೆ, ಹಲವಾರು ರೀತಿಯಾಗಿ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನನ್ನೆಲ್ಲಾ ಒಳ್ಳೆಯ ಕಾರ್ಯಗಳಿಗೆ ನನ್ನ ತಂದೆ-ತಾಯಿ, ಧರ್ಮಪತ್ನಿ, ಬಂಧುಗಳು, ಅಪಾರ ಸ್ನೇಹಿತರು, ಗುರು-ಹಿರಿಯರು ಮತ್ತು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸ್ನೇಹಿತರು ಸಹಕಾರ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಇವರ ಸಹಕಾರ ಮತ್ತು ಬೆಂಬಲದಿAದ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುವಂತ ಶಕ್ತಿ ಬಂದಿದೆ.


ಸದ್ಗುರು ಪ್ರದೀಪ್.
ಸದ್ಗುರು ಆಯುರ್ವೇದ ಸಂಸ್ಥೆ ಮಾಲೀಕರು, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.