ನಾಯಕನಹಟ್ಟಿ: ಪ್ರತಿ ವರ್ಷ ಸಂಪ್ರದಾಯದಂತ ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ಹಿರೇಮಠ ಮಹಾಂತೇಶ ಸ್ವಾಮಿ ಹೇಳಿದ್ದಾರೆ.

ಭಾನುವಾರ ಅವರು ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೂರಹಟ್ಟಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅಣ್ಣ ತಮ್ಮಗಳ ಹಿರೇರು ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಮಲ್ಲೂರ ಹಟ್ಟಿ ಶ್ರೀ ಬನಶಂಕರಿ ದೇವಿ ಜಾತ್ರೆಯು ನಮ್ಮ ಪೂರ್ವಿಕರ ಕಾಲದಿಂದಲೂ ಆಚರಿಸುತ್ತಾ ಬಂದಿದ್ದೇವೆ ಈ ಬಾರಿ ಉತ್ತಮ ಮಳೆ ಬೆಳೆ ಆದ ಕಾರಣ ಈ ವರ್ಷ ಅದ್ದೂರಿಯಾಗಿ ಶ್ರೀ ಬನಶಂಕರಿ ದೇವಿ ಜಾತ್ರೆಯನ್ನು ಆಚರಿಸಲಾಗಿದೆ ಶುಕ್ರವಾರ ಶ್ರೀದೇವಿ ಉಲಾಯಿ, ಕಂಕಣಧಾರಣೆ ,ಗಣಪತಿ ಪೂಜೆ, ಮಂಟಪ ಪೂಜೆ, ಶನಿವಾರ ಗಂಗಾ ಪೂಜೆ ಗೊಂಚಿಗಾರ್ ಮನೆಯಿಂದ ಗುಡಿಗೆ ಬಲಿಅನ್ನ ಹಾಕಿ ಮಧ್ಯಾಹ್ನ 12 ಗಂಟೆಗೆ ಶ್ರೀದೇವಿಗೆ ಒಳ್ಳೆ ಪೂಜೆ ಹೊರಡುವುದು ಹೊಳೆ ಪೂಜೆ ನಂತರ ಮುತ್ತೈದೆಯರಿಗೆ ಉಡಿ ತುಂಬುವುದು ಅದ್ದೂರಿ ಮೆರವಣಿಗೆ ಮೂಲಕ ರಾತ್ರಿ 8:00 ಗಂಟೆಗೆ ಗ್ರಾಮಕ್ಕೆ ಶ್ರೀದೇವಿಯನ್ನ ಕರೆತಂದು ತೂಗು ಮಂಚದಲ್ಲಿ ಪಡಿಸುವುದು ರಾತ್ರಿ ಮದಾಲ್ಸಿ ನಂತರ ದೀಪ ಬೆಳಗುವುದು ಇದೇ ದಿನ ಬೆಳಗ್ಗೆ 10:00 ಯಿಂದ ರಾತ್ರಿ 8 ಗಂಟೆವರೆಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದು ಇನ್ನೂ ಭಾನುವಾರ ಓಕಳಿ ನಂತರ ಸಕಲ ಬಿರುದಾವಳಿಯಗಳೊಂದಿಗೆ ದೇವಿಯನ್ನು ಗುಡಿ ತುಂಬುವುದು 11ಗಂಟೆಗೆ ಅಣ್ಣತಮ್ಮಗಳ ಇದೇ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಜಾತ್ರೆಗೆ ತೆರೆ ಬೀಳಲಿದೆ ಎಂದರು.


ಇನ್ನೂ ಮಲ್ಲೂರಹಟ್ಟಿ ಶ್ರೀ ಬಾಳೇ ಬಂದಮ್ಮ ಸೇವಾ ಸಮಿತಿ ಅಧ್ಯಕ್ಷ ಬಿ. ಶಂಕ್ರರಪ್ಪ ಮಾತನಾಡಿದರು ಬನಶಂಕರಿ ದೇವಿ ಆಶೀರ್ವಾದದಿಂದ ಮಲ್ಲೂರಹಟ್ಟಿ ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಸಮೃದ್ಧಿ ನೀಡಲಿ ಮತ್ತು ಗ್ರಾಮಕ್ಕೆ ಶಾಂತಿ ನೆಮ್ಮದಿ ತರಲಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಬಾಳೇ ಬಂದಮ್ಮ ದೇವಸ್ಥಾನ ಸೇವಾ ಸಮಿತಿ ಮಲ್ಲೂರಹಟ್ಟಿ ಗ್ರಾಮದ ಉಪಾಧ್ಯಕ್ಷ ಎಂ. ಬಿ. ನಿಜಲಿಂಗಪ್ಪ, ಕಾರ್ಯದರ್ಶಿ ಎಸ್. ತಿಪ್ಪೇಸ್ವಾಮಿ. ನಿರ್ದೇಶಕರಾದ ಎಂ. ಅರುಣ್ ಕುಮಾರ್, ಎಂ ಎಸ್. ವಸಂತ್, ಎಂ.ಟಿ. ಶಿವರಾಜ್, ಎಂ.ಬಿ. ರುದ್ರಮನಿ,ಎಂ. ವಿ. ನಾಗೇಂದ್ರಪ್ಪ, ಎಂ. ಮುಸ್ಟೂರಪ್ಪ, ಬಸವರಾಜ್, ಎಚ್.ಎಸ್. ಅಜ್ಜಯ್ಯ, ಪೂಜಾರಿ ತಿಪ್ಪೇಸ್ವಾಮಿ, ಸೇರಿದಂತೆ ಮಲ್ಲೂರಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.