ಮೈಸೂರು: ಮೈಸೂರು ಜಿಲ್ಲಾ ಉಪ್ಪಾರ ಸಂಘದ ವತಿಯಿಂದ ಜ. 11ರ ಭಾನುವಾರ ಬೆಳಗ್ಗೆ 10.30 ಕ್ಕೆ ನಗರದ ಗೋವರ್ಧನ್ ಹೋಟೆಲ್ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಸಮಾಜ ಸೇವಕರಿಗೆ ಸನ್ಮಾನ ಹಾಗೂ 2026ನೇ ಸಾಲಿನ ಸಂಘದ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಭಗೀರಥ ಸಮಾಜಸೇವಾ ಪ್ರಶಸ್ತಿ ಪುರಸ್ಕೃತ ಕೆ.ಟಿ.ಮೋಹನ್ ಕುಮಾರ್ ತಿಳಿಸಿದರು.
ಅವರು ನಗರದ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗದ ಶ್ರೀ ಭಗೀರಥ ಪೀಠದ ಶ್ರೀ ಶ್ರೀ ಶ್ರೀ
ಡಾ.ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿ ರವರು ವಹಿಸಲಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವರು, ಎಂ ಎಸ್ ಐ ಎಲ್ ನ ಅಧ್ಯಕ್ಷರು, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ
ಸಿ.ಪುಟ್ಟರಂಗಶೆಟ್ಟಿ ನೆರವೇರಿಸುವರು.
ಶ್ರೀ ಭಗೀರಥ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ ಉಪ್ಪಾರ ಹಾಗೂ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ ಅವರುಗಳು ನೆರವೇರಿಸುವರು.
ಮೈಸೂರು ಜಿಲ್ಲಾ ಉಪ್ಪಾರ ಸಂಘದ 2026ನೇ ಸಾಲಿನ ದಿನದರ್ಶಿಕೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಕೆಎಂಎಫ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಉಪಮೇಯರ್ ಡಾ.ರೂಪ ಯೋಗೇಶ್ ಬಾಬು ರವರುಗಳು ಬಿಡುಗಡೆ ಮಾಡುವರು.
ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನಾಗರಾಜು ಕರಳಪುರ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಂವಿಧಾನ ಮತ್ತು ಸಾಮಾಜಿಕ ಸಮೀಕ್ಷೆಗಳ ಬಗ್ಗೆ ಜಾಗೃತಿ ಉಪನ್ಯಾಸವನ್ನು ಜಿಲ್ಲಾ ಪಂಚಾಯಿತಿಯ ನಿವೃತ್ತ ಉಪ ಕಾರ್ಯದರ್ಶಿ ಕೆ.ಎಂ.ಶಿವಕುಮಾರ ಸ್ವಾಮಿ ನೀಡುವರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕರುಗಳಾದ ಸಿ.ಶಿವನಂಜಶೆಟ್ಟಿ,
ಮಹದೇವಸ್ವಾಮಿ,
ಮಹಾದೇವಸ್ವಾಮಿ, ಸಬ್ ಇನ್ಸ್ಪೆಕ್ಟರ್ ಗಳಾದ ಕೃಷ್ಣಕಾಂತ್ ಕೋಳಿ, ಬಸವರಾಜು, ಅರಣ್ಯ ಅಧಿಕಾರಿ ಸೋಮು, ಬೆಂಗಳೂರು ಗ್ರಾಮಾಂತರ ಉಪ್ಪಾರ ಸಂಘದ ಅಧ್ಯಕ್ಷ ಸುನಿಲ್, ಗೌರಿಬಿದನೂರಿನ ಉದ್ಯಮಿ ನಾಗರಾಜು
ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ಸಮಾಜಸೇವಕರು ಹಾಗೂ ಗಣ್ಯರುಗಳನ್ನು ಅಭಿನಂದಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರುಗಳು, ವಿವಿಧ ಸಂಘಟನೆಗಳವರು, ಉದ್ಯಮಿಗಳು ಸೇರಿದಂತೆ ಹಲವು ಗಣ್ಯರುಗಳು ಭಾಗವಹಿಸಲಿದ್ದಾರೆ.
ಉಪ್ಪಾರ ಸಮಾಜದ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನಾಗರಾಜು ಕರಳಪುರ ಮಾತನಾಡಿ ಜಿಲ್ಲೆಯಾದ್ಯಂತ ಉಪ್ಪಾರ ಸಮಾಜದ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಕೆಲಸವನ್ನು ಎಲ್ಲರ ಸಲಹೆ, ಸಹಕಾರ, ಮಾರ್ಗದರ್ಶನದೊಂದಿಗೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಗ್ರಾಮ ಮಟ್ಟದಿಂದ ನಗರ ಪ್ರದೇಶದವರೆಗೆ ಇರುವ ಉಪ್ಪಾರ ಸಮಾಜದ ಬಂಧುಗಳನ್ನು ಒಂದೇ ವೇದಿಕೆಯಡಿ ತರುವಂತಹ ಕೆಲಸವನ್ನು ಮಾಡುವ ಮೂಲಕ ಉಪ್ಪಾರ ಸಂಘಟನೆಯನ್ನು ಬಲಪಡಿಸಲಾಗುವುದು ಎಂದರು.
ಜಿಲ್ಲಾ ಉಪ್ಪಾರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಮಾತನಾಡಿ ಜಿಲ್ಲೆಯಲ್ಲಿ ಉಪ್ಪಾರ ಸಮಾಜದ ಮಹಿಳೆಯರನ್ನು ಸಂಘಟಿಸುವ ಮೂಲಕ ಮಹಿಳಾ ಘಟಕವನ್ನು ಜಿಲ್ಲಾ ಕೇಂದ್ರದ ಜೊತೆಗೆ ಪ್ರತಿ ತಾಲೂಕುಗಳಲ್ಲೂ ರಚಿಸಿ ಆ ಮೂಲಕ ಸಮಾಜದ ಸೇವೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ಮಹಿಳಾ ಘಟಕದ ಗೌರವಾಧ್ಯಕ್ಷೆ ಡಾ.ಗೀತಾ ಮಾತನಾಡಿ ಉಪ್ಪಾರ ಸಮಾಜದಲ್ಲಿನ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಹಾಗೂ ಸಮಾಜದ ಬಂಧುಗಳನ್ನು ಜಿಲ್ಲಾಧ್ಯಂತ ಭೇಟಿ ಮಾಡಿ ಅವರುಗಳನ್ನು ಸಂಘಟಿಸುವುದರ ಜೊತೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪ್ರಮುಖವಾಗಿ ಜಾಗೃತಿಯನ್ನು ಮೂಡಿಸುವುದಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಅವರುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಕನಕನಗರ ಮಹದೇವ್, ಪ್ರಧಾನ ಕಾರ್ಯದರ್ಶಿ ಜೆ.ಕೃಷ್ಣ, ಸಂಘಟನಾ ಕಾರ್ಯದರ್ಶಿ ಆರ್.ವಿನೋದ್ ಉಪ್ಪಾರ್, ಕಾರ್ಯದರ್ಶಿ ಮಲ್ಲೇಶ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರಿ, ಪದಾಧಿಕಾರಿಗಳಾದ ಮಹೇಶ್, ವೆಂಕಟೇಶ್ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.