January 29, 2026
IMG-20250109-WA0100.jpg

ನಾಯಕನಹಟ್ಟಿ : ಜಿಲ್ಲೆಯ ಶಾಸಕರುಗಳಿಂದ, ಜಿಲ್ಲಾ ಉಸ್ತುವರಿ ಮಂತ್ರಿಗಳಿಂದ, ಸಂಸದರಿಂದ ನೀರು ತರಲಿಕ್ಕೆ ಅವರಿಂದ ಅಸಾಧ್ಯ. ನಮ್ಮ ಜಿಲ್ಲೆಯ ಎಲ್ಲಾ ಕೆರೆಗಳಲ್ಲಿ ನೀರು ತುಂಬಬೇಕಾದರೆ ಸಿರಿಗೆರೆ ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಹಟ್ಟಿಮಲ್ಲಪ್ಪ ನಾಯಕ ಸಂಘದ ಗುರುವಾರ ನಡೆದ ಶ್ರೀ ಶ್ರೀ ಜಗದ್ಗುರು ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು ಮತ್ತು ತರಳಬಾಳು ಬೃಹನ್ಮಠ ಸಿರಿಗೆರೆ, ಚಿತ್ರದುರ್ಗ ತಾಲ್ಲೂಕು ಇವರ ಸನ್ನಿದಾನಕ್ಕೆ ಸಾವಿರಾರು ರೈತರು ಜಾತಾದೊಂದಿಗೆ ಶ್ರೀ ಮಠಕ್ಕೆ ಆಗಮಿಸಿ ರೈತರಿಂದ ಮನವಿ ಸಮರ್ಪಣೆ ಮತ್ತು ಭದ್ರಮೇಲ್ದಂಡ ಯೋಜನೆಯ ಕಾಮಗಾರಿ ತೀರ್ವಗೊಳಿಸಲು ಹಾಗೂ ಕೈಬಿಟ್ಟ ಕೆರೆಗಳಿಗೆ ನೀರು ತುಂಬಿಸಲು ಜ.13 ರಂದು ಸಿರಿಗೆರೆಗೆ ನಿಯೋಗ ತೆರಳಲು ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಕರೆಯಿಸಿ ಪೂರ್ವಭಾವಿ ಸಭೆ ನಡೆಯಿತು. ನಂತರ ಮಾತನಾಡಿದ ಅವರು

ನೀರಿದ್ದರೆ ಜೀವನ, ನೀರಲ್ಲದೆ ಜೀವನ ಅಲ್ಲ ಈ ಬಾರಿ ದೇವರ ಕೃಪೆಯಿಂದ ಭರ್ಜರಿ ಮಳೆಯಾಗಿದ್ದು ಎಲ್ಲಾ ಕೆರೆಗಳಿಂದ ನೀರು ಬಂದಿರುವುದರಿಂದ, ರೈತರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಮಳೆ ಬಾರದೆ ಹೋಗಿದ್ದರೆ ಅತೀ ಹೆಚ್ಚು ರೈತರು, ಯುವಕರು, ಜನಪ್ರತಿನಿಧಿಗಳು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗದಂತೆ ಪರಮಾತ್ಮ ಸೃಷ್ಠಿಕರ್ತ ಮಳೆ ಸುರಿಸಿದರಿಂದ ನೆಮ್ಮದಿಯಾಗಿದ್ದೇವೆ ಎಂದರು. ಬಸ್ ಮಾಲೀಕರು, ಎಲ್ಲಾ ರೈತ ಸಂಘಟನ ಹೋರಾಟಗಾರರು ಸಭೆ ಕರೆಯಿಸಿ ಎಲ್ಲಾರೂ ಜೊತೆಗೂಡಿ ಸಭೆ ನಡೆಸೋಣ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ ನಮಗೆ ಬೇಕಾಗಿರುವುದು ನೀರು ಮಾತ್ರ ಸಾವಿರಾರು ಕೋಟಿ ರೂಪಾಯಿಗಳು ಹಣ ಖರ್ಚು ಮಾಡಿದ್ದಾರೆ. ಆದರೆ ಯಾವುದೇ ಕೆರೆಗಳಿಗೆ ನೀರು ಬಂದಿಲ್ಲ. ಕಳೆದ ೪೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಪತ್ನಿಯ ಸಹಕಾರದಿಂದ ಹಲವು ಬಾರಿ ಹೋರಾಟ ಮಾಡಿದ್ದೇನೆ. ೪ ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನನಗೆ ರೈತರೆ ಮಾರ್ಗದರ್ಶಿ. ಸಾವಿರಾರು ಟಿ.ಎಂ.ಸಿ ನೀರು ಸಮುದ್ರಕ್ಕೆ ಸೇರುತ್ತದೆ. ಅತೀವೃಷ್ಠಿಯಾದಗ ಸಾವಿರಾರು ಟಿ.ಎಂ.ಸಿ ನೀರು ಅದನ್ನು ಹಿಡಿದಿಟ್ಟು ನಮ್ಮ ಎಲ್ಲಾ ಕೆರೆಗಳಿಗೆ ಸಾಧ್ಯವಾಗುತ್ತದೆ. ಎಲ್ಲಾ ಸರ್ಕಾರಗಳು ಸೌಜನ್ಯ ತೋರುತ್ತಿಲ್ಲ. ಬೆಳಗಾಂ ಅಧಿವೇಶನದಲ್ಲಿ ನಮ್ಮ ಉತ್ತರಕರ್ನಾಟಕದ ರೈತರು ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು. ಲಕ್ಷಕೋಟಿ ಹಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬೆಳಗಾಂ ಅದಿವೇಶನದಲ್ಲಿ ಮಧ್ಯಕರ್ನಾಟಕದ ಯಾವ ರೈತರು ಹೋಗಿಲ್ಲ, ಭಾಗವಹಿಸಿಲ್ಲ. ಎಲ್ಲಾರು ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಎಲ್ಲಾ ರೈತರು ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು. ನೀವು ಯಾವುದೇ ಪಕ್ಷಕ್ಕೆ ಮತಹಾಕಿ ನನಗೆ ಅಭ್ಯಂತರವಿಲ್ಲ ನೀರಿಗಾಗಿ ಪ್ರತಿಯೊಬ್ಬರು ಪಣ ತೊಡೊಣ ಎಂದರು. ಸಿರಿಗೆರೆ ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ ೬೦ ಕೆರೆಗಳಿಗೆ ನೀರು ಹರಿಸಿದ್ದಾರೆ. ಎಲ್ಲಾ ಕೆರೆಗಳು ಸಹ ಕೋಡಿ ಬಿದ್ದು ಹರಿದಿದೆ. ೨೪ ಗಂಟೆಗಳಿAದ ಕೆರೆಗಳಿಗೆ ನೀರು ಹರಿಯುತ್ತೇನೆ ಇವೆ ಎಂದು ಹೇಳಿದರು.

ಆರ್.ನಿಜಲಿಂಗಪ್ಪ ಮಾತನಾಡಿ ಎಲ್ಲಾ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಬಹಳ ಶಕ್ತಿ ಬರುತ್ತದೆ. ಎಲ್ಲಾ ಕೆರೆಗಳಿಗೂ ನೀರು ಬರುತ್ತದೆ ಎಂದರು. ರೈತ ನಾಯಕ ಪ್ರೋ.ನಂಜುಡಸ್ವಾಮಿ ಸಮಾಧಿಗೆ ಹೋಗಿ ಕರಪತ್ರವಿಟ್ಟು ಎಲ್ಲಾ ರೈತರು ಒಂದಾಗಲಿ ಎಂದು ಕೈ ಮುಗಿದು ಬಂದಿದ್ದೇವೆ. ನಾನು ಸಹ ರೈತರ ಪರವಾಗಿ ಹೋರಾಟ ಮಾಡಿ ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ ಎಂದರು. ಹಸಿರು ಶಾಲು ಹಾಕಿಕೊಂಡು ಪ್ರತಿಯೊಬ್ಬ ರೈತರಿಗೆ ಗೌರವವಿರುತ್ತದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಡಾ.ನಾಗರಾಜ್ ಮೀಸೆ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುವೇವ ಮೇಟಿ ಬಣ ನಾಯಕನಹಟ್ಟಿ ಹೋಬಳಿ ಘಟಕ ಬೆಂಬಲ ಸೂಚಿಸಿದರು, ಡಿ.ಟಿ.ಮಂಜುನಾಥ, ತಿಪ್ಪೇಸ್ವಾಮಿ, ಬೋರಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಓಬಯ್ಯ, ಬೋಸೆರಂಗಸ್ವಾಮಿ, ಜೋಗಿಹಟ್ಟಿ ಮಂಜು, ತಾರಕೇಶ್, ಮಾಜಿ ಪ.ಪಂ.ಸದಸ್ಯ ಟಿ.ಬಸಣ್ಣ, ಬೋರಸ್ವಾಮಿ ಹಾಗೂ ರೈತಪರ ಹೋರಾಟಗಾರರು, ಹಟ್ಟಿ ಮಲ್ಲಪ್ಪ ನಾಯಕ ಸಂಘದ ಸದಸ್ಯರುಗಳು ಹಾಗೂ ಇನ್ನೂ ಇತರರು ಇದ್ದರು.
ಬಾಕ್ಸ್ ಮಾಡಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading