December 15, 2025
IMG-20250109-WA0079.jpg

ಭಾರತೀಯ ಕಿಸಾನ್ ಸಂಘವು  ಅರಣ್ಯ ಇಲಾಖೆಗೆ ಭೇಟಿಕೊಟ್ಟು ವಲಯ ಅರಣ್ಯ ಅಧಿಕಾರಿಗಳ ದಂತ ಶಶಿಧರ್ ಅವರಿಗೆ ಮನವಿ ಸಲ್ಲಿಸಿತು.

ಉತ್ತಾರಿ ಬೆಟ್ಟಸಾಲು ಗಳಲ್ಲಿ ಎರಡು ಡ್ಯಾಮ್ ಗಳು ಬೋರನ ಕಣಿವೆ ಹಾಗೂ ವಾಣಿವಿಲಾಸಾಗರ, ಧಾರ್ಮಿಕ ಸ್ಥಳಗಳಾದ ದಶರಥ ರಾಮೇಶ್ವರ ವಜ್ರ ಹಾಗೂ ಸಿದ್ದಪ್ಪನ ವಜ್ರ, ಅಮೂಲ್ಯವಾದ ಚಂದನ ರಕ್ತ ಚಂದನ ಮುಂತಾದ ಸಸ್ಯಗಳು ಗಿಡಮರಗಳು ಇವೆ, ಹಾಗೂ ಅಪರೂಪವಾದ ಪ್ರಾಣಿಗಳಾದ ಜಿಂಕೆ, ಕರಡಿ ಚಿರತೆ ಮಲಗಳು ಮುಂತಾದ ಪ್ರಾಣಿಗಳಿವೆ. ಜೊತೆಗೆ ಜಿಂಕೆ ಜಾತಿಗೆ ಸೇರಿದ ಉತ್ತರೆ ಎಂಬ ವಿಶೇಷ ಪ್ರಾಣಿ ಇದೆ. ಹಾಗಾಗಿ ಉತ್ತರ ಬೆಟ್ಟಕ್ಕೆ ಈ ಹೆಸರು ಬಂತು.
ಹಾಗಾಗಿ ಉತ್ತರ ಬೆಟ್ಟಕ್ಕೆ ಬೆಂಕಿ ಬಿದ್ದರೆ ಉತ್ತರ ಮಳೆ ಬಂದರೆ ಹಾರುವುದು ಎನ್ನುವ ಪ್ರತಿತಿ ಹಾಗೆ ಪ್ರತಿ ವರ್ಷವೂ ನಾವು ಚಿಕ್ಕಂದಿನಿಂದ ನೋಡುತ್ತಾ ಬಂದಂತೆ ಉತ್ತರ ಬೆಟ್ಟದ ಸಾಲುಗಳಿಗೆ ಕಾಳ್ಗಿಚ್ಚು ಹಬ್ಬುವುದು ನೋಡಿದ್ದೇವೆ.
ಆ ಬೆಟ್ಟಸಾಲುಗಳಿಗೆ ಬೆಂಕಿ ಬಿದ್ದರೆ ಅಕ್ಕಪಕ್ಕದ 15ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಹೆಚ್ಚಳವಾಗುವುದು ಹಾಗೂ ಉಷ್ಣಾಂಶ ಹೆಚ್ಚಳದಿಂದ ತೆಂಗು ಅಡಕ್ಕೆ ಮುಂತಾದ ಬೆಳೆಗಳು ಇಳುವರಿ ಕುಂಟಿತ ಆಗುವುದು ಕಂಡು ಬಂದಿದೆ.
ಹಾಗಾಗಿ ತಾವುಗಳು ಇನ್ನೇನು ಬೇಸಿಗೆ ಕಾಲ ಬರುವ ಮುನ್ನವೇ ಎಚ್ಚೆತ್ತುಕೊಂಡು ಬೆಂಕಿ ನಂದಿಸಲು ವಿಶೇಷವಾದ ಕರ್ತವ್ಯವನ್ನು ನಿರ್ವಹಿಸಬೇಕು, ಹಾಗೂ ಆ ಭಾಗದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಮನವಿ ಸಲ್ಲಿಸಲಾಯಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ವಲಯ ಅರಣ್ಯಾಧಿಕಾರಿಗಳಾದ ಶಶಿಧರ್ ರವರು ಉತ್ತರೆ ಬೆಟ್ಟದ ಸಾಲುಗಳಲ್ಲಿ ಎಲ್ಲಾದರೂ ಬೆಂಕಿ ಬಿದ್ದರೆ ನಮಗೆ ಸೆಟಲೈಟ್ ಮೂಲಕ ಅಲಾರಾಂ ಬರುತ್ತದೆ ಹಾಗಾಗಿ ನಾವು ವಿಶೇಷವಾಗಿ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತೇವೆ ಎಂದು ನಮಗೆ ಭರವಸೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ರವರು ಮಾತನಾಡಿ ಆ ಭಾಗದ ಜನರು ಕಾಡಿಗೆ ಅಥವಾ ಬೆಟ್ಟ ಸಾಲುಗಳಿಗೆ ಬೆಂಕಿ ಹಚ್ಚಬಾರದು ಎಂದು ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗಡಾರಿ ಕೃಷ್ಣಪ್ಪ ಮಂಜುನಾಥ್ ಕಾತ್ರಿಕೆನಲ್ಲಿ ಚಂದ್ರಗಿರಿ ದಿಂಡವರ ಜಯಪ್ರಕಾಶ್ ಜಯಣ್ಣ ರಂಗನಾಥ್ ಗೌಡ ಯು ವಿ ಗೌಡ ದೊಡ್ಡಘಟ್ಟ ಕುಮಾರಣ್ಣ ಮುಂತಾದವರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading