ಹಿರಿಯೂರು ತಾಲೂಕು ಪಂಚಾಯಿತಿ ಮನವಿ ಸಲ್ಲಿಸಿ ನರೇಗಾ ಯೋಜನೆಯು ಸಂವಿಧಾನದತ್ತವಾದ ಹಕ್ಕು ಆಗಿದ್ದು ಇತ್ತೀಚಿನ ದಿನಗಳಲ್ಲಿ ಐದು ಜನ ಪಿಡಿಒಗಳು ಲೋಪವೇಸಗಿದ್ದು ಕಂಡುಬಂದಿದ್ದು ಅವರು ಈಗಾಗಲೇ ಆರೋಪ ಒಪ್ಪಿ ದಂಡ ಕಟ್ಟಿರುತ್ತಾರೆ.
ಇದು ಸಂವಿಧಾನಕ್ಕೆ ಮಾಡಿರುವ ಅಪಚಾರ ಎಂದು ತಿಳಿದು ಹಾಗೂ ಕಳೆದಲ್ಲೇ ಹುಡುಕಿಕೊಳ್ಳುವ ಜಾಯಮಾನದ ಅಧಿಕಾರಿಗಳಾಗಿರುವ ರಿಂದ ಅವರುಗಳನ್ನು ಈ ಕೂಡಲೇ ಕೆಲಸದಿಂದ ಅಮಾನತ್ತು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಹಾಗೂ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಮೂರ್ತಿ ಎಂಬುವರ ದೂರಿನ ಮೇರೆಗೆ ಲೋಕಾಯುಕ್ತರ ಭೇಟಿ ನೀಡಿ ಪರಿಶೀಲಿಸಿದ್ದು ಆರೋಪಿಗಳಾದ ಅಂದಿನ ಪಿಡಿಒ ರವಿ, ಹುಸೇನ್, ಹಾಗೂ ಹಂಗಾಮಿಯಾಗಿ ನರೇಗಾ ಯೋಜನೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಕುಶಾಲ್ , ಹರ್ಷ ಇಂಜಿನಿಯರ್ಗಳು ಬಿ ಎಫ್ ಟಿ ವೆಂಕಟೇಶ್ ಇವರುಗಳು ಾಕ್ಷಿಗಳನ್ನ ನಾಶಪಡಿಸುವುದು ಕಂಡು ಬಂದಿದೆ. ಹಾಗಾಗಿ ಇವರುಗಳನ್ನ ಕೆಲಸದಿಂದ ವಜಗೊಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಚಂದ್ರಗಿರಿ ಅಭಿಪ್ರಾಯಪಟ್ಟರು. ಈ ಮೇಲಿನ ವಿಚಾರ ಇಟ್ಟುಕೊಂಡು ಭಾರತೀಯ ಕಿಸಾನ್ ಸಂಘವು ಕಾರ್ಯನಿರ್ವಹಣಾಧಿಕಾರಿ ಸತೀಶ್ ರವರ ಅನುಪಸ್ಥಿತಿಯಲ್ಲಿ ಬೇರೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕು ಸಮಿತಿಯ ಅಧ್ಯಕ್ಷರಾದ ಗಡರಿ ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಚಂದ್ರಗಿರಿ ಜಯಪ್ರಕಾಶ್ ಮೇಟಿಕೂರಿಕೆ ಜಯಣ್ಣ ದೊಡ್ಡಘಟ್ಟ ಕುಮಾರಣ್ಣ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷರಾದ ಪರಮೇನಹಳ್ಳಿ ರಂಗನಾಥ್ ಗೌಡ ಯು ವಿ ಗೌಡ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.