December 14, 2025
IMG-20241208-WA0179.jpg

ಬಯಲು ಸೀಮೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಇಂದಲ್ಲ ನಾಳೆ ವಿಶೇಷ ಪ್ರವಾಸಿಗರ ನೆಲೆಯಾಗುವ ಇಲ್ಲಿನ ಭೌಗೋಳಿಕತೆಯ ನೈಸರ್ಗಿಕ ಬೆಟ್ಟ ಸೇರಿದಂತೆ ಕಟ್ಟೆಮನೆ,ದೇವರ ಎತ್ತುಗಳ ಸಾಕಾಣಿಕೆಯ ಬುಡಕಟ್ಟು ಪದ್ದತಿಗಳು ಅಚ್ಚರಿ ಅನಿಸುತ್ತವೆ.ಈ ಮಾತುಗಳು ಏಕೆಂದರೆ, ಈ ಗ್ರಾಮದ ರಂಗಭೂಮಿ ಕಲಾವಿದರು,ಸಾಹಿತ್ಯ ಚಿಂತನಾಶೀಲರು,ಈಗಾಗಲೇ ಸಾಹಿತ್ಯ ವಲಯಕ್ಕೆ’ ಆದಿಜಾಂಬವ ಧಾಮ’ ಎಂಬ ಕೃತಿ ಕೊಡುಗೆ ನೀಡಿರುವ ಪ್ರಸ್ತುತ ವರ್ಷದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಪೂಜಾರಿ ಹನುಮಂತಪ್ಪ( ಪಂಡಿತ್) ಅವರು ಪ್ರೀತಿಯಿಂದ ಮನೆಗೆ ಬಂದಾಗ, ವಿಚಾರ ಚರ್ಚೆ ಅಂತ ಕುಳಿತುಕೊಂಡ ಸಮಯ ನಾಲ್ಕು ಗಂಟೆ ಕಳೆದೊಯ್ತು.ಇಲ್ಲಿ ಶಿಕ್ಷಣ ಯಾವ ರೀತಿಯಲ್ಲೂ ಮಾನದಂಡ ಅಲ್ಲ ಅನಿಸಿತು.ಯಾಕೆಂದರೆ, ಹನುಮಂತಪ್ಪ ಅವರು, ಎಂಟನೇ ತಗರತಿ ಕಲಿತವರು.ಆದರೆ, ಭೂಮಂಡಲದಲ್ಲಿ ಮೀನು,ಆಮೆ, ಹಂದಿ,ಅರ್ಥರೂಪ ಮಾನವ ಹೋಲುವ ಸಿಂಹ,ವಾನರ ನಂತರ ಮನುಜನ ಜನನ ಸೇರಿದಂತೆ ಕಾಲಮಾನ ಅಳೆಯುವ ವಿಧಾನ ಪಂಚಾಂಗ ಕಟ್ಟಿರುವ ಗುಟ್ಟು, 12 ನೇ ಶತಮಾನದ ಬಸವಣ್ಣನ ಚಿಂತನೆಗಳ ಮೊದಲೇ 10 ನೇ ಶತಮಾನದ ಮಾದಾರ ಚನ್ನಯ್ಯನ ವಚನಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದಲ್ಲದೇ,ಕನ್ನಡ, ಅಕಾಡಮಿ,ಸಾಹಿತ್ಯ ಪದಗಳ ಮೂಲ ಅರ್ಥ ಮತ್ತು ಲೆಕ್ಕಸ್ಥ ಶ್ರೀಕೃಷ್ಣನ ಧರ್ಮ ಮತ್ತು ಅಧರ್ಮದ ವಿಚಾರಗಳನ್ನು ವಿಶ್ಲೇಷಣೆ ಮಾಡಿದ ರೀತಿ ನಿಜಕ್ಕೂ ನನಗೆ, ಅಚ್ಚರಿ ಅನಿಸಿತು. ಇವರ ಸಂಬಂಧ ಎಂದಿಗೂ ಮರೆಯಲಾರೆ _ ಕೊರ್ಲಕುಂಟೆ ತಿಪ್ಪೇಸ್ವಾಮಿ,

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading