ವರದಿ ಎಂ ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಮಂಚ್ಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ನಿವೃತ್ತ ಜಂಟಿ ನಿರ್ದೇಶಕರು ಪಶುಸಂಗೋಪನೆ ಇಲಾಖೆ ಅಧಿಕಾರಿ ಗೌಡಗೆರೆ ಜಿ. ತಿಪ್ಪೇಸ್ವಾಮಿ ರವರ 64ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ನಂತರ ಮಾತನಾಡಿದ ಅವರು ಮೂಲಭೂತ ಸೌಲಭ್ಯ ಕೊರತೆ ಇರುವಂತ ಶಾಲೆಗಳನ್ನು ನಾವುಗಳು ಆಯ್ಕೆ ಮಾಡಿಕೊಳ್ಳುತ್ತೇವೆ. ಚಿಕ್ಕ ಹಳ್ಳಿಯಾದರೂ ಸಹ ನಮ್ಮ ಮೇಲೆ ಅಪಾರವಾದ ಪ್ರೀತಿ ಈ ಹಳ್ಳಿಯ ಜನರಿಗೆ ಮತ್ತು ಮಕ್ಕಳಿಗಿದೆ. ನಾನು ಹುಟ್ಟು ಹಬ್ಬವನ್ನು ಎಂದು ಕೂಡ ಆಚರಿಸಿಕೊಂಡಿಲ್ಲ. ಆದರೆ ಈ ಗ್ರಾಮದವರ ಒತ್ತಾಯದ ಮೇರೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ತಂದಿದೆ.
ಈ ಹಿಂದೆ ನಡೆದ ಹುಟ್ಟು ಹಬ್ಬದ ದಿನದಂದು ಶಾಲೆಯ ಮಕ್ಕಳಿಗೆ ನೀಡುವ ಬಿಸಿ ಊಟದ ಜೊತೆಗೆ ಪಾಯಸ ಮಾಡಿಸಿ ಮಕ್ಕಳಿಗೆ ನೀಡುವಂತೆ ತಿಳಿಸುದ್ದೆವು. ಲೇಖನ ಪುಸ್ತಕವನ್ನು ನೀಡಿದ್ದೇವೆ. ಈ ವರ್ಷ ಭಾನುವಾರ ಬಂದಿರುವುದರಿಂದ ಈ ದಿನವೇ ಆಚರಿಸಿಕೊಳ್ಳುತ್ತಿದ್ದೇವೆ. ನಾನು ಈ ತಾಲೂಕಿನಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿ ರಾಜ್ಯಮಟ್ಟದ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಹಳ್ಳಿಯ ಮಕ್ಕಳು ನನ್ನಂತೆ ಉತ್ತಮ ಉದ್ದೇಶ ಮಾಡಿ ರಾಜ್ಯ ಹಾಗೂ ದೇಶದ ಉನ್ನತ ಅಧಿಕಾರಿಯಾಗಬಹುದು ಎಂದು ಕನಸು ಕಾಣುತ್ತಿದ್ದೇನೆ. ಆವಾಗಲೇ ನಮ್ಮ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ನಂತರ ಶಾಲೆ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ನಾಗೇಂದ್ರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಪಿ. ಬೋರಯ್ಯ, ಉಪಾಧ್ಯಕ್ಷ ಜಿ ಬೋರಯ್ಯ, ಸದಸ್ಯ ಎಂ ಪ್ರಕಾಶ್, ಗ್ರಾಮಸ್ಥರಾದ ಓ ಪಾಪಣ್ಣ, ಯರಮಂಚಯ್ಯ, ಜಗದೀಶ್ ಶಿವಕುಮಾರ್ ವೈ ಬಿ ಬೋರಯ್ಯ ಸೇರಿದಂತೆ ಸಮಸ್ತ ಯರವಂಚಯ್ಯಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.