ವರದಿ ಎಂ ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ : ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ಯೋಜನೆ ಸೊಸೈಟಿ (ರಿ) ಚಿತ್ರದುರ್ಗ ಹಾಗೂ ಶ್ರೀ ಕಲಾ ನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ನಾಯಕನಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ 2024 25 ನೇ ಸಾಲಿನ ಎಸ್ ಸಿ ಎಸ್ ಪಿ / ಟಿ ಎಸ್ ಪಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನ ಮಾಡಿದರು.









ನಂತರ ತಂಡದ ಮುಖ್ಯಸ್ಥ ಮಲ್ಲೂರಹಳ್ಳಿ ಡಿ ರಾಜಣ್ಣ ಮಾತನಾಡಿ 6 ರಿಂದ 14 ವರ್ಷದ ಒಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ. 18 ವರ್ಷ ತುಂಬುವ ತನಕ ಯಾವುದೇ ಹೋಟೆಲ್ ಗ್ಯಾರೇಜ್ ಕಟ್ಟಡ ಕಾಮಗಾರಿ ಕೆಲಸಗಳಿಗೆ ಮಕ್ಕಳನ್ನು ತೊಡಗಿಸಬಾರದು. ಹಾಗೇನಾದರೂ ಶಾಲೆಗೆ ಕಳುಹಿಸದೆ 14 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಂಡಿದ್ದೆ ಆದರೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಅವರಿಗೆ ದಂಡವನ್ನು ವಿಧಿಸುವುದಲ್ಲದೆ, ಕಾರಾಗೃಹ ಶಿಕ್ಷೆಯನ್ನು ನೀಡುವಂತಹ ಕಾನೂನು ಜಾರಿಯಲ್ಲಿರುತ್ತದೆ.
14 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡವರಿಗೂ ಹಾಗೂ ಮಕ್ಕಳ ಪೋಷಕರಿಗೂ ಐವತ್ತು ಸಾವಿರದಿಂದ ಎರಡು ಲಕ್ಷದವರೆಗೆ ದಂಡ ವಿಧಿಸುವಂಥ ಕಾನೂನನ್ನು ಸರ್ಕಾರ ಜಾರಿಗೆ ತಂದಿದೆ. ಮಕ್ಕಳನ್ನು ಕಾರ್ಮಿಕ ವೃತ್ತಿಗೆ ದೂಡುವುದರಿಂದ ಮಕ್ಕಳ ಶಿಕ್ಷಣವನ್ನು ಕುಂಠಿತ ಮಾಡುತ್ತೇವೆ. ಅವರ ಬದುಕನ್ನು ನಾಶ ಮಾಡುತ್ತೇವೆ. ಬೆಳೆಯುವಂತ ಕೂಡಿಗಳ ಬದುಕನ್ನು ಚಿವುಟುತ್ತೇವೆ. ಆ ಒಂದು ಕಾರ್ಯಗಳನ್ನು ಮಾಡಬಾರದಾಗಿದೆ. ತಾವುಗಳು ಎಲ್ಲರೂ ತಮ್ಮ ಮಕ್ಕಳನ್ನು ಶಿಕ್ಷಣಸ್ಥರನ್ನಾಗಿ ಮಾಡಬೇಕಾಗಿದೆ. ಮಕ್ಕಳು ಶಿಕ್ಷಣಸ್ಥರಾದಾಗ ಮಾತ್ರ ನಮ್ಮ ಗ್ರಾಮ, ರಾಜ್ಯ, ದೇಶ ಅಭಿವೃದ್ಧಿಯಾಗಲು ಸಾಧ್ಯ. ಆದ್ದರಿಂದ ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಶ್ರೀ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ನಾಯಕನಹಟ್ಟಿ ಇವರಿಂದ ಬಾಲಕಾರ್ಮಿಕ ನಿರ್ಮೂಲನೆ ಕುರಿತು ಕಿರು ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ಡಾ|| ನಾಗರಾಜ್ ಮೀಸೆ. ಕಲಾವಿದರಾದ ಚನ್ನಬಸಪ್ಪ, ದೇವಿರಮ್ಮ, ಹಂಪಣ್ಣ, ದುರ್ಗೇಶ್, ಎಚ್ ಮಲ್ಲೇಶ್, ಅಂಬೇಡ್ಕರ್ ಕಾಲೋನಿಯ ಸಾರ್ವಜನಿಕರು,ಮಕ್ಕಳು ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.