December 14, 2025
IMG-20241208-WA0102.jpg

ನಾಯಕನಹಟ್ಟಿ : ಪ್ರತಿಯೊಬ್ಬರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸಿದರೆ ಕ್ಷಯರೋಗ ನಿರ್ಮೂಲನೆ ಮಾಡಲು ಕ್ರಮ ವಹಿಸಬಹುದು ಎಂದು ಆಡಳಿತ ವೈದ್ಯಧಿಕಾರಿ ಡಾ.ಮೇಘನ ಹೇಳಿದರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಚಳ್ಳಕೆರೆ ಟಿವಿ ಘಟಕ ಹಾಗೂ ಮುಷ್ಟಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ 100 ದಿನ ಕ್ಷಯ ರೋಗ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು

ಟಿಬಿ ಕಾಯಿಲೆಯು ಕೆಮ್ಮುವಾಗ ಅಥವಾ ಸೀನುವಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ದೀರ್ಘಾವಧಿಯ ಕೆಮ್ಮು, ಕಫದಲ್ಲಿ ರಕ್ತ ರಾತ್ರಿ ವೇಳೆ ಜ್ವರ, ತೂಕ ಇಳಿಕೆ, ಹಸಿವಾಗದಿರುವುದು, ಬೆವರುವುದು ಇತ್ಯಾದಿ ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿ, ಅದರಲ್ಲಿ ರೋಗ ಲಕ್ಷಣಗಳು ಕಂಡು ಬರದೆ ಇದ್ದಲ್ಲಿ ಎಕ್ಸರೇ ಮಾಡಿಸಿ, ಖಚಿತ ಪಡಿಸಿಕೊಂಡ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ 6 ತಿಂಗಳ ಕಾಲ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಎಂದರು ಹಾಗೂ ಎಲ್ಲಾ ದಿನಗಳಲ್ಲಿ ಕ್ಷಯ ರೋಗ ಪತ್ತೆ ಮಾಡಲು ಆರೋಗ್ಯ ಇಲಾಖೆ ಮುಂದಿದೆ ಇದರಿಂದ ಸಾರ್ವಜನಿಕರು ಯಾವುದೇ ತರದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನೂ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯಿರಿ ಎಂದು ಹೇಳಿದರು.

ಮುಷ್ಟಲಗುಮ್ಮಿ ವೈದ್ಯಾಧಿಕಾರಿ ಡಾಕ್ಟರ್ ಅಶೋಕ್ ಮಾತನಾಡಿ ಕ್ಷಯರೋಗ ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಿದರೆ ಕ್ಷಯ ರೋಗ ಮುಕ್ತ ಹಳ್ಳಿ ಪಂಚಾಯಿತಿ ಹಾಗೂ ತಾಲೂಕನ್ನಾಗಿ ಮಾಡಲು, ಸರ್ಕಾರವು 100 ದಿನಗಳ ಕ್ಷಯ ರೋಗ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದಕ್ಕೆ ಪ್ರತಿಯೊಬ್ಬರೂ ಭಾಗವಹಿಸಿ, ಈ ಅಭಿಯಾನದಲ್ಲಿ ಕ್ಷಯ ರೋಗದ ಬಗ್ಗೆ ಕೇಳಿರಿಮೆ ಅಥವಾ ಸಾಮಾಜಿಕ ಕಳಂಕ ಎಂಬ ಭಾವನೆ ಇರುವುದರಿಂದ ಇದನ್ನು ಹೋಗಲಾಡಿಸಲು ಅಭಿಯಾನದ ಮೂಲಕ ಅರಿವು ಮೂಡಿಸಲು ಸಹಕಾರ ನೀಡಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ ಮಾತನಾಡಿ ಪ್ರತಿವರ್ಷ ಸರ್ಕಾರದ ವತಿಯಿಂದ ಕ್ಷಯ ಮುಕ್ತ ಅಭಿಯಾನವನ್ನು ಮಾಡಲು.ಸರ್ಕಾರ ಒಂದು ಹೆಜ್ಜೆ ಮುಂದಿಟ್ಟು ನೂರು ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರಿಂದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬ ಸಾರ್ವಜನಿಕರು ವೃದ್ಧರು ಜನಪ್ರತಿನಿಧಿಗಳು ಅಭಿಯಾನಕ್ಕೆ ಕೈಜೋಡಿಸಿ ಕ್ಷಯ ಮುಕ್ತ ಗ್ರಾಮ ಪಂಚಾಯತಿಯನ್ನಾಗಿಸಿ ಎಂದರು.

ಈ ಸಂದರ್ಭದಲ್ಲಿ ಪಿಡಿಒ ಎಂ ಮೋಹನ್ ದಾಸ್ ಗ್ರಾಮ ಪಂಚಾಯಿತಿ ಸದಸ್ಯರಾದ ಪಡ್ಡಬೋರಯ್ಯ, ಶೇಖರಪ್ಪ, ಪಿ.ವಿ.ಸಣೋಬಯ್ಯ, ಸುಮಿತ್ರಮ್ಮ, ಕವಿತಾ, ಮುಖಂಡ ಆನಂದಪ್ಪ, ಕುಬೇರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಸಿಎಚ್‌ ಒ ನಯನಕುಮಾರಿ, ಗೀತಾ, ಆಶಾ ಕಾರ್ಯಕರ್ತೆ ರತ್ನಮ್ಮ, ಸೇರಿದಂತೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading