December 14, 2025
IMG-20241207-WA0342.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಸರ್ವರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಅಡಗೂರು
ಹೆಚ್.ವಿಶ್ವನಾಥ್ ಹೇಳಿದರು.

ಅವರು ಪಟ್ಟಣದ ಡಬಲ್ ಟ್ಯಾಂಕ್ ಬಳಿ ತಮ್ಮ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನದಡಿಯಲ್ಲಿ ಸುಮಾರು 12 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮದಲ್ಲಿನ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ದೃಷ್ಟಿಯಿಂದ ಈ ಘಟಕವನ್ನು ಆರಂಭಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದ ಅವರು ಈ ಘಟಕವನ್ನು ನಿರ್ವಹಣೆ ಮಾಡುವವರು ಉತ್ತಮ ರೀತಿಯಲ್ಲಿ ಮಾಡಬೇಕು ಎಂದು ಸೂಚಿಸಿದರು.

ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಎನ್ನದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ.

ಗ್ರಾಮಗಳಲ್ಲಿ ದೇವಸ್ಥಾನಗಳನ್ನು ಕಟ್ಟಲು ತೋರುವ ಆಸಕ್ತಿಗಿಂತ ಶಾಲೆಗಳನ್ನು ಕಟ್ಟಲು ಹೆಚ್ಚಿನ ಆಸಕ್ತಿಯನ್ನು ತೋರಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ವರೂ ಮಾಡಬೇಕು. ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತೆ ಮಾಡುವ ಮೂಲಕ ಎಲ್ಲರೂ ಶಿಕ್ಷಣವನ್ನು ಪಡೆದು ಉತ್ತಮ ಸಮಾಜದ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣದಲ್ಲಿ ಈ ಹಿಂದೆ ಅವರ ಒಡನಾಟದಲ್ಲಿದ್ದ ಹಲವು ಹಿರಿಯರು ಮತ್ತು ಅವರೊಂದಿಗೆ ಇದ್ದ ಬಾಂಧವ್ಯದ ಬಗೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಎಸ್.ಕೆ.ಮಧುಚಂದ್ರ, ಮುಖಂಡರಾದ ನಾಗರಾಜು, ಏಜಸ್, ವೆಂಕಟರಾಮಯ್ಯ, ಲಾಲುಸಾಹೇಬ್ರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಸ್.ಆರ್.ಪ್ರಕಾಶ್, ಗಂಗಾಧರ್, ಶಕೀಲ್, ಶಿಕ್ಷಕ ಗೋಪಾಲ್ ರಾಜ್, ಮುಖಂಡರುಗಳಾದ ಗುಣಪಾಲ್ ಜೈನ್, ರಾಮರಾಜು, ಬಲರಾಮೇಗೌಡ, ಜಯಣ್ಣ, ಕೃಷ್ಣೆಗೌಡ, ವೆಂಕಟೇಶ್, ಸೋಮಶೇಖರ್, ಶ್ರೀನಿವಾಸ್, ಸರ್ದಾರ್, ಮಂಜು, ಪ್ರವೀಣ್, ಶಾಸಕರ ಆಪ್ತ ಸಹಾಯಕ ನಟರಾಜ್, ಪಿಡಿಓ ತಿಲಕರಾಜ್, ಲ್ಯಾಂಡ್ ಆರ್ಮಿಯ ಬಿ.ಟಿ.ಸತೀಶ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading