ಚಳ್ಳಕೆರೆ….ಅಖಂಡ ಕರ್ಣಾಟಕ ರಾಜ್ಯ ರೈತ ಸಂಘ ದ ಸೋಮು ಗುದ್ದು ರಂಗಸ್ವಾಮಿಯವರು ಸುಮಾರು ನಾಲ್ಕು ದಶಕಗಳ ಕಾಲ ಸುಧೀರ್ಘ ಅವಧಿಯಲ್ಲಿ ಅನೇಕ ರೈತ ಪರ ಹೋರಾಟಗಳನ್ನು ಮಾಡಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಬರದ ನಾಡಿಗೆ ಭದ್ರ ನೀರನ್ನು ತರುವ ಹೋರಾಟದಲ್ಲೂ ಕೂಡ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಸಲಹೆ ಸೂಚನೆಗಳನ್ನು ಕೊಟ್ಟು ಭದ್ರನೀರು ತರಲು ಶ್ರಮವಹಿಸಿದ್ದಾರೆ, ರಂಗಸ್ವಾಮಿಯವರು ಸದಾ ಹಸನ್ಮುಖಿಯಾಗಿ ಕೃಷಿಯಿಂದ ಸರಳ ಜೀವನವನ್ನು ನಡೆಸುತ್ತಿದ್ದಾರೆ,
ಇಂತಹ ಮೇರು ವ್ಯಕ್ತಿತ್ವವುಳ್ಳ ರಂಗಸ್ವಾಮಿಯವರ ಮೇಲೆ , ಅವರ ಜೋತೆಗೆ ಇರುವ ವರು ರಂಗಸ್ವಾಮಿ ರವರ ಮೇಲೆ ವಿನಾ ಕಾರಣ ದೂರುತ್ತಿರುವುದು ಸರಿಯಲ್ಲ, ಆವರ ಜೊತೆ ಇಸ್ಟುವರುಷ ಕೆಲಸ ಮಾಡಿ ನಾವು ನೀವು ಒಂದೇ ದೋಣಿ ಯಲ್ಲಿ ಸಾಗುತ್ತಿದ್ದೇವೆ ಎಲ್ಲಾ ರೈತರು ಒಟ್ಟಾಗಿ ಇದ್ದರೆ ನೊಂದ ರೈತರಿಗೆ ನ್ಯಾಯ ಕೊಡಿಸಬಹುದು, ಒಗ್ಗಟ್ಟಿನಲ್ಲಿ ಬಲವಿದೆ, ನಾವು ನೀವು ಎಲ್ಲರೂ ಸೇರಿ ಆವರ ಹೆಸರಿಗೆ ಇಲ್ಲಸಲ್ಲದ ಆರೋಪ,ಮತ್ತು ಕೇಸರು ಎರಚುವುದನ್ನು ಹಾಗೂ ತೇಜೋವಧೆ ಮಾಡುವುದನ್ನು ಬಿಟ್ಟು ಒಳ್ಳೆಯ ಉದ್ದೇಶದಿಂದ ಅವರ ಜೊತೆ ನಾವು ನೀವು ಎಲ್ಲರೂ ಸೇರಿ ಅಖಂಡ ರೈತ ಸಂಘ ಕಟ್ಟೋಣ ,
ಹಾಗೇ ಸ್ಥಳೀಯ ಜನಪ್ರಿಯ ಶಾಸಕರಾದ ಟಿ ರಘು ಮೂರ್ತಿ ರವರು ಪರಶುರಾಮ್ ಪುರ ಭಾಗದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಸುಮಾರು 7 check dyam ,check ಡ್ಯಾಂ ಕಮ್ ಬ್ಯಾರೇಜ್ ನಿರ್ಮಾಣ ಮಾಡಿ 100 ಹಳ್ಳಿಗಳಿಗೆ ಕುಡಿಯುವ ನೀರು, ಅಂತರ್ಜಾಲ ಅಭಿವೃದ್ಧಿ, ರೈತರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಶಾಸಕರ ಪಾತ್ರ ಅವಿಸ್ಮರಣೀಯ , ಹಾಗಾಗಿ ರಂಗಸ್ವಾಮೀಯವರುರೈತ ಪರ ಕೆಲಸ ಮಾಡುವ ವ್ಯಕ್ತಿ ಮುಖ್ಯ ಎಂದು ಬೇಷರತ್ ಬೆಂಬಲವನ್ನು ಘೋಷಿಸಿದರು ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಎ ಪರಶುರಾಂಪುರ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ರೈತರು ರಂಗಸಮಿಯವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು ಪಾದಾಧಿಕಾರಿಗಳು,, ಕೆ.ಪಿ.ಭೂತಯ್ಯ.ಸೋಮಗುದ್ದುರಂಗಸ್ವಾಮಿ,ಪರಶುರಾಮ್ , ಗೋಸಿ ಕೆರೆ ರಾಜು, ಗಿರಿಧರ್ ,ಕೃಷ್ಣಮೂರ್ತಿ ಸ್ವಾಮಿ,ಶಿವಣ್ಣ,ವೆಂಕಟರಮಣಪ್ಪ , ಇನ್ನು ಮುಂತಾದ ರೈತರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.