ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಪ್ರತಿಯೊಬ್ಬರೂ ಸಮ ಸಮಾಜದಲ್ಲಿ ಬದುಕನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಚಿಂತನೆ, ಮಾರ್ಗದರ್ಶನ ಹಾಗೂ ದಾರಿಯನ್ನು ತೋರಿಸಿದಂತಹ ಮಹನೀಯರುಗಳ ಆದರ್ಶಗಳನ್ನು ಸರ್ವರೂ ಮೈಗೂಡಿಸಿಕೊಂಡು ಬದುಕನ್ನು ನಡೆಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.





ಅವರು ಪಟ್ಟಣದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲ್ಲೂಕು ಕುರುಬರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹನೀಯರುಗಳ ಜಯಂತಿಗಳನ್ನು ವರ್ಷದ ಉದ್ದಗಲಕ್ಕೂ ಆಚರಣೆ ಮಾಡುತ್ತೇವೆ. ಇದರ ಉದ್ದೇಶ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬುದು ಪ್ರಮುಖವಾದುದು. ಇಂತಹ ಮಹನೀಯರು, ದಾರ್ಶನಿಕರು ಹಾಗೂ ಗಣ್ಯರುಗಳ ಜಯಂತಿಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಅವರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸುವುದರೊಂದಿಗೆ ಅವರುಗಳು ನಡೆದಂತಹ ಹಾದಿಯಲ್ಲಿ ನಾವುಗಳು ನಡೆಯಬೇಕು ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.
ಜಿ.ಪಂ. ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಪ್ರತಿಯೊಬ್ಬರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ, ಪರಸ್ಪರ ವೈಯಕ್ತಿಕ ದ್ವೇಷ ಭಾವನೆಗಳನ್ನು ಮರೆತು ಪ್ರೀತಿ ವಿಶ್ವಾಸದೊಂದಿಗೆ ಬದುಕನ್ನ ನಡೆಸಬೇಕು ಎಂದರು.
ಜಾತಿ ತಾರತಮ್ಯವನ್ನು ಹೋಗಲಾಡಿಸಲು ಬಹಳ ವರ್ಷಗಳ ಹಿಂದೆಯೇ ಕನಕದಾಸರು ಸೇರಿದಂತೆ ಹಲವು ಮಹನೀಯರು ಹಲವು ಮಾರ್ಗಗಳಲ್ಲಿ ಶ್ರಮಿಸಿದ್ದರು. ಇಂತಹ ಮಹನೀಯರ ಆದರ್ಶ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕೆಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಕನಕದಾಸರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಿ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿ ವಿವಿಧ ಕಲಾತಂಡಗಳೊಂದಿಗೆ ಮಹಿಳೆಯರು ಪೂರ್ಣ ಕುಂಭ ಕಳಸಹೊತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಹಿರಿಯ ಪತ್ರಕರ್ತ ರಾಮಕೃಷ್ಣೇಗೌಡ, ಬಿಇಓ ಕೃಷ್ಣಪ್ಪ, ನಿವೃತ್ತ ಶಿಕ್ಷಕ ರಾಜಯ್ಯ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆಂಪರಾಜು, ಉದ್ಯಮಿಗಳಾದ ರೇವಣ್ಣ, ಆನಂದ ಅವರ ಪರವಾಗಿ ಸಹೋದರ ದೇವರಾಜು ಅವರುಗಳಿಗೆ “ಕನಕಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಅಭಿನಂದಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರೊ.ಸಿ.ಡಿ.ಪರಶುರಾಮ ಪ್ರಧಾನ ಭಾಷಣ ಮಾಡಿದರು.
ಸಮಾರಂಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಮಾರ್ಚಳ್ಳಿಶಿವರಾಮ್, ಜಿ.ಆರ್.ರಾಮೇಗೌಡ,
ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಸಾಲಿಗ್ರಾಮ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದರಾಮೇಗೌಡ, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷ ಜೆ.ಶಿವಣ್ಣ, ತಹಶೀಲ್ದಾರ್ ಗಳಾದ ರುಖಿಯಾ ಬೇಗಂ, ಜಿ.ಸುರೇಂದ್ರ ಮೂರ್ತಿ, ತಾ.ಪಂ.ಇಓಗಳಾದ ಎ.ಎನ್.ರವಿ, ವಿ.ಪಿ.ಕುಲದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಶಂಕರಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ಶಿವುನಾಯಕ್, ಮಾಜಿ ಸದಸ್ಯ ನಟರಾಜ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಕೆ.ಎಸ್.ಮಹೇಶ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ
ಜಿ.ಎಂ.ಹೇಮಂತ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್, ಪ್ರಭಾಕರ್, ವಕ್ತಾರ ಜಾಬೀರ್, ಎಸ್ ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ತಾ.ಕ.ಸಾ.ಪ. ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಮುಖಂಡರುಗಳಾದ
ಜಿ.ಎನ್.ವೆಂಕಟೇಶ್, ಭೇರ್ಯ ಬಿ.ಕೆ.ಮಂಜಪ್ಪ, ಕುಪ್ಪೆಪ್ರಕಾಶ್, ಮೂಡಲಕೊಪ್ಪಲು ಕೃಷ್ಣೆಗೌಡ, ಕೆಡಗನಟರಾಜ್, ಎಲ್.ಎಮ್.ಸಣ್ಣಪ್ಪ, ತಂದ್ರೆಧರ್ಮ, ಎಸ್.ಎನ್.ರಂಗಸ್ವಾಮಿ, ಚಿಬುಕಹಳ್ಳಿ ಬಸವರಾಜ್, ದಿಡ್ಡಹಳ್ಳಿಪಾಲಾಕ್ಷ, ರಾಮಯ್ಯ, ಎಸ್.ಎಂ.ಚಂದ್ರು,
ಕೆ.ಆರ್.ಮಂಜುನಾಥ್, ನಟರಾಜ್, ಶ್ರೀನಿವಾಸ್, ಗರುಡಗಂಭದಸ್ವಾಮಿ, ಕಾಟ್ನಾಳು ಮಹದೇವ್, ತಿಮ್ಮಶೆಟ್ಟಿ, ನಾಗೇಶ್, ಮಹದೇವ್, ಲೋಕೇಶ್, ಬಡಕನಕೊಪ್ಪಲು ನಾಗರಾಜು, ನಾಗೇಶ್, ರಾಮೇಗೌಡ, ಲಕ್ಕಿಕುಪ್ಪೆ ಮಂಜೇಗೌಡ, ದೊಡ್ಡಕೊಪ್ಪಲು ಶಂಕರೇಗೌಡ, ಕೋಮಲಚಾರಿ, ಕೆ.ಸಿ.ಸುಬ್ಬೇಗೌಡ, ಬೀಚನಹಳ್ಳಿ ಯಶವಂತ್, ಬಿ.ಎಸ್.ಸುಬ್ಬೇಗೌಡ, ಚಂದ್ರಹಾಸ, ಮಹಾಲಿಂಗು, ರವಿ ಸೇರಿದಂತೆ ಹಲವರುಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.