ಹಿರಿಯೂರು:
ತಾಲ್ಲೂಕಿನ ರೈತರ ಜಮೀನುಗಳ ಪಹಣಿಯಲ್ಲಿ ಯಾವುದೇ ಸಂಘ-ಸಂಸ್ಥೆ ವಕ್ಫ್-ಬೋರ್ಡ್ ಹೆಸರನ್ನು ನೊಂದಾಯಿಸಿ ಅಕ್ರಮವಾಗಿ ವಶಪಡಿಸಿಕೊಂಡಲ್ಲಿ ಅಂತಹದ್ದರ ವಿರುದ್ಧ ಭಾರತೀಯ ಕಿಸಾನ್ ಸಂಘವು ಉಗ್ರ ಹೋರಾಟ ಮಾಡುತ್ತದೆ ಎಂಬುದಾಗಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಗಡಾರಿಕೃಷ್ಣಪ್ಪ ಅವರು ಎಚ್ಚರಿಸಿದರು.
ಇತ್ತೀಚಿಗೆ ರಾಜ್ಯದಾದ್ಯಂತ ಸಂಚಲನ ಹುಟ್ಟು ಹಾಕಿದ ವಕ್ಫ್ ಬೋರ್ಡ್ ವಿಚಾರವಾಗಿ ತಾಲ್ಲೂಕಿನಾದ್ಯಂತ ಯಾವುದೇ ರೈತರ ಜಮೀನುಗಳ ಪಹಣಿಯಲ್ಲಿ ಅಕ್ರಮವಾಗಿ ವಕ್ಫ್ ಬೋರ್ಡ್ ನ ಅಥವಾ ಇನ್ಯಾವುದೇ ಸಂಘ-ಸಂಸ್ಥೆ ಹೆಸರನ್ನು ಸೇರಿಸದಂತೆ ಒತ್ತಾಯಿಸಿ ಭಾರತೀಯ ಕಿಸಾನ್ ತಾಲ್ಲೂಕು ಘಟಕದ ನೇತೃತ್ವದಲ್ಲಿ ಅಪರ ತಹಶೀಲ್ದಾರರಾದ ತಿಪ್ಪೇಸ್ವಾಮಿ ರವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕಾತ್ರಿಕೇನಳ್ಳಿಮಂಜುನಾಥ್ ಮಾತನಾಡಿ ತಾಲ್ಲೂಕಿನ ರೈತರುಗಳು ಈ ಕೂಡಲೇ ತಮ್ಮ- ತಮ್ಮ ಜಮೀನುಗಳ ಪಹಣಿಯನ್ನು ತೆಗೆದುಕೊಂಡು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ ಪ್ರಬಲವಾದ ಹೆಗ್ಗಣಗಳು ನಿಮ್ಮ ಜಮೀನನ್ನು ನುಂಗಿಹಾಕುತ್ತವೆ ಎಂಬುದಾಗಿ ರೈತರಲ್ಲಿ ಮನವಿ ಮಾಡಿದರು.
ಈಸಂದರ್ಭದಲ್ಲಿ ದಿಂಡಾವರಚಂದ್ರಗಿರಿ, ಪರಮೇನಹಳ್ಳಿರಂಗನಾಥ್, ತಿಪ್ಪೇಸ್ವಾಮಿಮೆಟಿಕುರ್ಕೆ, ಜಯಣ್ಣಕೆ.ಕೆ.ಹಟ್ಟಿ, ಜಯಪ್ರಕಾಶ್ ಎ.ವಿ.ಕೊಟ್ಟಿಗೆ, ಸುರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.