December 15, 2025
IMG-20241108-WA0136.jpg

ಚಿತ್ರದುರ್ಗ: ಭೂಮಿಯ ಮೇಲೆ ಜನಿಸಿದವರೆಲ್ಲರೂ ಗಂಡು ಹೆಣ್ಣಿನ ರೂಪದ ಮನುಷ್ಯರೇ ಹೊರತು ಬೇರೇನೂ ಅಲ್ಲ ಹೀಗಿದ್ದರೂ ಜನಗಳ ನಡುವೆ ಜಾತಿಯ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ ಹಾಗಾಗಿ ಇಂತಹ ಸಂಘರ್ಷಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಪ್ರತಿಯೊಬ್ಬರಲ್ಲಿ ಮೂಡಿಸಬೇಕೆಂದು ಸಮಾಜ ಕಲ್ಯಾಣಾಧಿಕಾರಿ ನಾಗೇಂದ್ರಪ್ಪ ತಿಳಿಸಿದರು.

ತಾಲೂಕಿನ ಬೊಮ್ಮಕ್ಕನಹಳ್ಳಿ ತಾಲೂಕು ಆಡಳಿತ. ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಇವರುಗಳ ಸಹಯೋಗದೊಂದಿಗೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು,

ಮನುಷ್ಯ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ, ಆ ವ್ಯಕ್ತಿ ಬೆಳೆದ ನಂತರ ಜಾತಿ ವ್ಯವಸ್ಥೆ ಅಡಿಯಲ್ಲಿ ಬದುಕಲು ಆರಂಭಿಸುತ್ತಾನೆ. ಸಮಾಜದಲ್ಲಿ ಜಾತಿಗೆ ಅನುಗುಣವಾಗಿ ಸಂಸ್ಕೃತಿಯು ಸಹ ಬೆಳೆದಿದೆ. ಇವುಗಳ ನಡುವಿನ ಮೂಢನಂಬಿಕೆಗೆ ಜನರು ಮಾರುಹೋಗಿದ್ದಾರೆ ಹಾಗಾಗಿ ಕಂದಾಚಾರಗಳನ್ನು ಬದಿಗೆ ಒತ್ತಿ ಭಾರತ ಸಂವಿಧಾನದ ಕಾನೂನುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದು ತಿಳಿಸಿದರು.

ಶತಶತಮಾನಗಳಿಂದಲೂ ದಲಿತರ ಮೇಲೆ ಸಾಕಷ್ಟು ದೌರ್ಜನಗಳು ನಡೆಯುತ್ತಿವೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದರೆ ಕಾನೂನಿನ ಅರಿವು ಹಾಗೂ ಶಿಕ್ಷಣದ ಮಹತ್ವವನ್ನು ನಾವು ತಿಳಿದುಕೊಳ್ಳಬೇಕಿದೆ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ತುಂಬಿಸಿದರೆ ಜಾತಿಯ ವೈಶಮ್ಯಗಳು ಅವರಲ್ಲಿ ಬೇರೂರುವುದಿಲ್ಲ ಎಂದು ತಿಳಿಸಿದರು.

ಎಸ್ಸಿ ಎಸ್ಟಿ ಸಮುದಾಯದವರನ್ನು ಮೇಲ್ಜಾತಿ ವರ್ಗದವರು ಗ್ರಾಮದಿಂದ ಬಹಿಷ್ಕಾರ ಹಾಕುವುದು ಕಾನೂನುಬಾಹಿರ ಇಂತಹ ಅಪರಾಧಗಳಿಗೆ ಕಾನೂನಿನಲ್ಲಿ ತಕ್ಕ ಶಿಕ್ಷೆಗಳಿವೆ ಹಾಗಾಗಿ ಸಮಾಜದಲ್ಲಿ ಪ್ರೀತಿ ವಿಶ್ವಾಸದಿಂದ ಸಹೋದರತ್ವ ಭ್ರಾತತ್ವದಿಂದ ಬದುಕಬೇಕೆಂದು ತಿಳಿಸಿದರು.

ತುರುವನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಳವಾರು ಮಾತನಾಡಿ ಜಾತಿಯ ವ್ಯವಸ್ಥೆಯಲ್ಲಿರುವ ಮೂಢನಂಬಿಕೆಯಿಂದ ದೂರವಿದ್ದಷ್ಟು ಜ್ಞಾನದ ಅರಿವು ಹೆಚ್ಚಾಗುತ್ತದೆ. ಶಿಕ್ಷಣದ ಜೊತೆ ಜೊತೆಗೆ ಕಾನೂನಿನ ಅರಿವು ಸಹ ತಿಳಿದುಕೊಳ್ಳೋದು ಅವಶ್ಯಕ, ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ ಕೂಡ ಕಾನೂನಿಗೆ ಗೌರವಿಸುವುದು ಅತ್ಯಂತ ಮುಖ್ಯವಾಗಿದೆ. ಸಂಘರ್ಷಗಳನ್ನು ಮಾಡಿಕೊಳ್ಳದೆ ಸಹೋದರ ಬ್ರಾತೃತ್ವದ ನಡೆಯಲಿ ನಡೆದರೆ ಉತ್ತಮ ಸಮಾಜವನ್ನು ಕಟ್ಟಬಹುದು ಎಂದು ತಿಳಿಸಿದರು.

ಕೂನ್ನುಬೇವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಮಾತನಾಡಿ ದಲಿತರ ಮೇಲೆ ದಬ್ಬಾಳಿಕೆ ಮಾಡದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ಕಾನೂನನ್ನು ಪ್ರತಿಯೊಬ್ಬರು ಗೌರವಿಸುತ್ತಾ ಸಮಾನತೆಯನ್ನ ಸಮಾಜಕ್ಕೆ ಸಾರುತ ಹೋದರೆ ಈ ದೇಶದಲ್ಲಿ ಸಂಘರ್ಷಗಳೇ ಇರುವುದಿಲ್ಲ ಎಂದು ತಿಳಿಸಿದರು.

ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್.ಡಿ ಮಾತನಾಡಿ ಭಾರತ ದೇಶದಲ್ಲಿರುವಂತಹ ಜಾತಿ ಜಾತಿಗಳ ಸಂಘರ್ಷಗಳು ಮತ್ತೊಂದು ದೇಶದಲ್ಲಿಲ್ಲ, ಜಾತಿ ವ್ಯವಸ್ಥೆಯಲ್ಲಿ ನಮ್ಮ ದೇಶ ಹಿಂದುಳಿದಿದೆ. ಭಾರತ ದೇಶದ ಸಂವಿಧಾನದಲ್ಲಿ ಸರ್ವರಿಗೂ ಸಮಾನವಾಗಿ ಬದುಕಲು ಅವಕಾಶವನ್ನು ಕಲ್ಪಿಸಲಾಗಿದೆ ಆ ಒಂದು ನಟಿ ನಲ್ಲಿ ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಸಂವಿಧಾನವನ್ನ ಗೌರವಿಸುತ್ತಾ ಜೀವನವನ್ನು ನಡೆಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿಯ ವರ್ಗದವರಾದ ಮುಸ್ಟೂರಪ್ಪ, ದೀಪಾ, ಕೂನ್ನುಬೇವು ಅಧ್ಯಕ್ಷ ಮಂಜಣ್ಣ, ಮಾಜಿ ಅಧ್ಯಕ್ಷೆ ಕವಿತಮ್ಮ, ಸದಸ್ಯರಾದ ಜಯಣ್ಣ, ಪ್ರಕಾಶ್ ಮಂಜುಳಮ್ಮ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ಪ್ರದೀಪ್. ನಿರ್ದೇಶಕ ದ್ಯಾಮ್ ಕುಮಾರ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading