ಚಳ್ಳಕೆರೆ ಅ.8 ಜಿಲ್ಲೆಯಲ್ಲಿ ಚಳ್ಳಕೆರೆ ಅತಿ ದೊಡ್ಡ ತಾಲೂಕು ಹಾಗೂ ಅತಿ ಹೆಚ್ಚು ಭೌಗೋಳಿಕ ಪ್ರದೇಶ ಹೊಂದಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು ಇದು ಚಳ್ಳಕೆರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಕಳೆದ ಎರಡು ದಿನಗಳ ಹಿಂದೆ, ರಾಜ್ಯಕ್ಕೆ 5 ನೇ ಸ್ಥಾನದಲ್ಲಿದ್ದರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು ಮತ್ತೆ ಈಗ ಎರಡನೇ ಸ್ಥಾನ ಪಡೆದು ಹೊಳಲ್ಕೆರೆ ಮೊದಲನೇ ಸ್ಥಾನ ಪಡೆದಿದೆ.
ಚಳ್ಳಕೆರೆ ತಾಲೂಕಿನಲ್ಲಿ ಕಂದಾಯ.ಶಿಕ್ಷಣ. ನಗರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಮಾಖೆ ಅಧಿಕಾರಿಗಳು. ಶಿಕ್ಷಕರ.ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಮೇಲ್ವೀಚಾರಕರ ಶ್ರಮದಿಂದ ಚಳ್ಳಕೆರೆ ತಾಲೂಕು ರಾಜ್ಯದಲ್ಲಿ 5 ನೇ ಸ್ಥಾನ ಪಡೆದು ಕೊಂಡರೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ಪ್ರಥಮ ಸ್ಥಾನ ಪಡೆದಿದೆ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.
ರಾಜ್ಯ ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯದಾದ್ಯಂತ ಪ್ರಾರಂಭವಾಗಿದ್ದು ಸೆ.7 ಕ್ಕೆ ನಿಗದಿತ ಅವದಿ ಮುಕ್ತಾಯಗೊಂಡಿದ್ದು ಮತ್ತೆ ಸಮೀಕ್ಷೆಯ ಅವದಿಯನ್ನು ವಿಸ್ತರಿಸಲಾಗಿದೆ.
ಚಳ್ಳಕೆರೆ ತಾಲೂಕಿನಲ್ಲಿ81527 ಮನೆಗಳನ್ನು ಗುರುತಿಸಿತ್ತು ಇನ್ನೇನು ಸಮೀಕ್ಷೆ ಗುರಿಮುಟ್ಟುತ್ತೇವೆ ಎನ್ನುವಷ್ಟರಲ್ಲಿ ಮತ್ತೆ 5100 ಹೆಚ್ಚುವರಿ ಮನೆಗಳು ತಂತ್ರಾಂಶದಲ್ಲಿ ಸೇರ್ಪಡೆಯಾಗಿದ್ದರಿಂದ ಮೊದಲ ಸ್ಥಾನ ಪಡೆದಿದ್ದ ಚಳ್ಳಕೆರೆ ಎರಡನೆ ಸ್ಥಾನ ಪಡೆದಿದ್ದು ಉಳಿದ ಮನೆಗಳ ಸಮೀಕ್ಷೆಗಾಗಿ ಗಣತಿದಾರರು ಮುಂದಾಗಿದ್ದಾರೆ.
ಚಳ್ಳಕೆರೆ ತಾಲೂಕಿನಲ್ಲಿ 871166 ಮನೆಗಳಿದ್ದರೆ ಹೊಳಲ್ಕೆರೆ ತಾಲೂಕಿನಲ್ಲಿ54500 ಮನೆಗಳಿವೆ.
ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸಹಾಯವಾಣಿ.
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ 2025
ಸರ್ಕಾರದ ಸುತ್ತೋಲೆಯಂತೆ ದಿನಾಂಕ 18/10 /2025 ರವರೆಗೆ ಸಮೀಕ್ಷಾ ಕಾರ್ಯವನ್ನು ವಿಸ್ತರಣೆ ಮಾಡಲಾಗಿರುತ್ತದೆ .
ಈಗಾಗಲೇ ಚಳ್ಳಕೆರೆ ತಾಲೂಕಿನ ಸಮೀಕ್ಷಾ ಕಾರ್ಯವು ಪೂರ್ಣಗೊಳ್ಳುವ ಹಂತದಲ್ಲಿದ್ದು ಯಾವುದೇ ಮನೆಗಳು ಸಮೀಕ್ಷಾ ಕಾರ್ಯದಿಂದ ಹೊರಗುಳಿಯದಂತೆ ಚಳ್ಳಕೆರೆ ತಾಲ್ಲೂಕು ಆಡಳಿತದ ವತಿಯಿಂದ ಕ್ರಮ ವಹಿಸಲಾಗಿರುತ್ತದೆ .ಇದನ್ನು ಹೊರತುಪಡಿಸಿ ಸಮೀಕ್ಷೆಗೆ ಒಳಪಡದೆ ಇದ್ದಲ್ಲಿ ಅಥವಾ ಗಣತಿ ಕಾರ್ಯದಿಂದ ವಂಚಿತರಾಗಿದ್ದಲ್ಲಿ ಸಂಬಂಧಪಟ್ಟ ಮನೆಗಳ ಮಾಲೀಕರು
ನಾಗರಿಕ ಬಂಧುಗಳು ಜನಪ್ರತಿನಿಧಿಗಳು
ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ತಾಲೂಕು ಸಹಾಯವಾಣಿ ಸಂಪರ್ಕಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು
ಶ್ರೀ ರೆಹಾನ್ ಪಾಷ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಚಳ್ಳಕೆರೆ ತಲ್ಲೂಕು ಹಾಗೂ ತಾಲ್ಲೂಕು ಮಟ್ಟದ ಸಮೀಕ್ಷಾ ನೋಡಲ್ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿರುತ್ತಾರೆ..
ತಾಲ್ಲೂಕು ಸಹಾಯವಾಣಿ ಮತ್ತು ನಗರಸಭೆಯ ಸಹಾಯವಾಣಿ ಕೇಂದ್ರ ಮೊಬೈಲ್ ಸಂಖ್ಯೆ -9964147418
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
-9972997738.
About The Author
Discover more from JANADHWANI NEWS
Subscribe to get the latest posts sent to your email.