ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಯುವನಿಧಿಯಂತ ಗ್ಯಾರಂಟಿ ಯೋಜನೆಗಳು ನೈಜ ಫಲಾನುಭವಿಗಳಿಗೆ ಯಾವುದೇ ತೊಡಕಿಲ್ಲದೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಉದಯ ಶಂಕರ್ ಹೇಳಿದರು.

ಅವರುಸಾಲಿಗ್ರಾಮ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕಾಲೇಜಿನ ಉದ್ಯೋಗ ಮಾಹಿತಿ ಕೋಶ ವಿಭಾಗ ಇವುಗಳ ಸಹಯೋಗದೊಂದಿಗೆ ಆಯೋಜಿಸಿದ್ದ ನಿರುದ್ಯೋಗಿ ಯುವಜನರಿಗೆ ಆರ್ಥಿಕ ನೆರವು ಮತ್ತು ಕೌಶಲ್ಯ ತರಬೇತಿಯನ್ನು ಒದಗಿಸುವ ಯುವನಿಧಿ ಯೋಜನೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಅನುಷ್ಠಾನ ಸಮಿತಿಯು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸನ್ನದ್ಧವಾಗಿದೆ. ಯುವಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು. ಅ.12ರಂದು ಕೆ.ಆರ್.ನಗರ ಪಟ್ಟಣದ ರೇಡಿಯೋ ಮೈದಾನದಲ್ಲಿ ಎಂ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕ
ದೊಡ್ಡಸ್ವಾಮೇಗೌಡರ 75ನೇ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ಉದ್ಯೋಗ ಮೇಳ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದವಕಾಶವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ರಾಣಿ ಅವರು ಮಾತನಾಡಿ ಯುವನಿಧಿ ಯೋಜನೆಯ ಸಮಗ್ರ ಮಾಹಿತಿಯನ್ನು ತಿಳಿಸಿ ಯುವನಿಧಿ ಕೇವಲ ನಿರುದ್ಯೋಗ ಭತ್ಯೆಯಲ್ಲ, ಇದು ಉದ್ಯೋಗ ಹುಡುಕುವ ನಿಮ್ಮ ಪಯಣದಲ್ಲಿ ದೊರೆಯುವ ಒಂದು ತಾತ್ಕಾಲಿಕ ಆಸರೆ. ಪದವೀಧರರಿಗೆ ಮಾಸಿಕ 3,000 ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂ ಗಳ ನೆರವು ನೀಡಲಾಗುತ್ತಿದೆ. ಆದರೆ ಯುವಜನತೆ ಕೇವಲ ಭತ್ಯೆಯನ್ನು ಪಡೆಯುವುದಕ್ಕೆ ಸೀಮಿತವಾಗದೇ ಸರ್ಕಾರ ಒದಗಿಸುವ ಯುವನಿಧಿ ಪ್ಲಸ್ ಅಡಿಯಲ್ಲಿನ ಉಚಿತ ಕೌಶಲ್ಯ ತರಬೇತಿಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಗೋವಿಂದೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಮಹದೇವ, ಮಹಾಲಿಂಗಪ್ಪ, ಮಹದೇವನಾಯಕ, ಸಿ.ಎಸ್.ಮೂರ್ತಿ, ಕಾಂತರಾಜು, ಚೆಲುವಯ್ಯ, ಮೋಹನ್, ರಂಗಸ್ವಾಮಿ, ರವಿ, ಲೋಕೇಶ್, ವಾಸಿಂಪಾಷಾ, ಉದ್ಯೋಗ ಮತ್ತು ಮಾಹಿತಿ ಕೋಶದ ಸಂಚಾಲಕರಾದ ಡಾ.ಸತ್ಯನಾರಾಯಣ, ಸುರೇಶ್ ಚಲವಾದಿ, ಶ್ರೀನಿವಾಸ್, ಡಾ.ರಾಜೇಶ, ಮಧು,
ಡಾ.ಮಹೇಶ್, ಮಂಜುನಾಥ್, ಡಾ.ಪ್ರತಿಮಾ, ಡಾ.ಸುವರ್ಣ, ಡಾ.ತಾಸೀನ್, ಡಾ.ಸುಮನ, ಡಾ.ಗಾಯಿತ್ರಮ್ಮ, ವಿದ್ಯಾರ್ಥಿಗಳು, ಮತ್ತು ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.