ಚಿತ್ರದುರ್ಗ ಅ.08:
ಚಿತ್ರದುರ್ಗ ತಾಲ್ಲೂಕು ಕಾಕಬಾಳು ಗ್ರಾಮದ ರಕ್ಷಿತಾ ತಂದೆ ನಾಗರಾಜ್ ಕೆ.ಟಿ. (20) ಕಾಣೆಯಾದ ಕುರಿತು ಅ. 5 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಿತಾ ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ತಾಯಿ ದೇವಮ್ಮ ರೊಂದಿಗೆ ರಕ್ಷಿತಾ ಹೊಲಕ್ಕೆ ಹೊಗಿದ್ದು ನಂತರ ಕಾಣೆಯಾಗಿರುತ್ತಾರೆ. ರಕ್ಷಿತಾ ಸುಮಾರು 5 ಅಡಿ ಎತ್ತರ, ಕೊಲುಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದು, ಕಾಣೆಯಾದ ಸಮಯದಲ್ಲಿ ಹಳದಿ ಬಣ್ಣದ ಟಾಪ್, ಕೆಂಪು ಬಣ್ಣದ ಲೆಗಿನ್ ಧರಿಸಿರುತ್ತಾಳೆ.
ಕಾಣೆಯಾದ ಯುವತಿ ಪತ್ತೆಯಾದವಲ್ಲಿ ಭರಮಸಾಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194258421, 9480803163, ಅಥವಾ ಚಿತ್ರದುರ್ಗ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782, 0819410 ಗೆ ಕರೆ ಮಾಡುವಂತೆ ಪ್ರಕಟಣೆ ಕೋರಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.