ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ತಳಕು:: ಹೊಸಹಳ್ಳಿ ಗ್ರಾಮದ ಪ್ರತಿಯೊಬ್ಬರೂ ಶಿಕ್ಷಣ ಪಡೆದರು ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ ಎಂದು ಹಿರಿಯ ದಲಿತ ಹೋರಾಟಗಾರ ಬಿ.ಎಂ. ಹನುಮಂತಪ್ಪ ಸಲಹೆ ನೀಡಿದರು.



ಬುಧವಾರ ತಳಕು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪ ಡಾ.ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರ ನಾಮಫಲಕ ಅನಾವರಣ ಮಾಡಿ ಮಾತನಾಡಿದರು. ಹೊಸಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಇಡೀ ವಿಶ್ವವೇ ಸ್ಮಾರಿಸುವ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರ ಅನಾವರಣ ಮಾಡಲಾಗಿದೆ. ಹೊಸಹಳ್ಳಿ ಗ್ರಾಮದ ಜನರು ಇವತ್ತು ಜಾಗೃತರಾಗಿದರೆ ಗ್ರಾಮದಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಮಾತ್ರ ಮಾದಿಗ ಸಮುದಾಯದ ಉದ್ದಾರ ಅಗಲು ಸಾಧ್ಯ ಎಂದರು.
ಇದೇ ವೇಳೆ ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್ ಮಾತನಾಡಿದರು.ಸಂವಿಧಾನದಲ್ಲಿರುವ ತತ್ವ ಮತ್ತು ಆಶಯಗಳು ಬಹು ಮೌಲ್ಯದಿಂದ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಎಲ್ಲ ರೀತಿಯ ಅಸಮಾನತೆ ಹೋಗಲಾಡಿಸಬಹುದು. ಸ್ವಾತಂತ್ರ್ಯ ನಂತರ ಭಾರತದಲ್ಲಿ ಸಂವಿಧಾನ ರಚನೆ ಹಾಗೂ ಅದನ್ನು ಸ್ವೀಕಾರ ಮಾಡಿದ್ದು ಬಹು ದೊಡ್ಡ ಸಾಧನೆಯಾಗಿದೆ. ಭಾರತದ ಸಂವಿಧಾನ ಅತ್ಯಂತ ಪ್ರಸ್ತುತವಾದುದ್ದು ಎಂಬ ಹೆಗ್ಗಳಿಕೆ ಇದೆ. ಪ್ರತಿ ವಿದ್ಯಾರ್ಥಿಯೂ ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದರು.ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ನೆಲೆಸಬೇಕಾದರೆ ದೇಶಕ್ಕೆ ಸಂವಿಧಾನ ಅಗತ್ಯ. ಸಂವಿಧಾನದ ಅಗತ್ಯ ಏನು ಎಂದು ಪ್ರಶ್ನಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಶಯ ಅರ್ಥವಾದರೆ ಮಾತ್ರ ಅದರ ಅವಶ್ಯಕತೆ ಅರಿವಾಗುತ್ತದೆ ಎಂದರು.
ಗ್ರಾಮಸ್ಥರು ಹಾಗೂ ದಲಿತ ಮುಖಂಡರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಕುರಿತು ಕಾಂತ್ರಿ ಗೀತೆಗಳನ್ನು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಹಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ರಾಮಣ್ಣ, ಪ್ರಗತಿಪರ ಚಿಂತಕ ಆನಂದ ಕುಮಾರ್, ಮೊನ್ನೆ ಕೋಟೆ ಗ್ರಾ.ಪಂ. ಅಧ್ಯಕ್ಷ ರಮೇಶ್, ತಿಪ್ಪೇಸ್ವಾಮಿ, ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಆರೋಗ್ಯ ಇಲಾಖೆ ಕುದಾಪುರ ಎಸ್. ಬಿ. ತಿಪ್ಪೇಸ್ವಾಮಿ, ಹೊಸಹಳ್ಳಿ ಜ್ಯೋತಿ ರಾಜಣ್ಣ, ತಿಮ್ಮಪ್ಪಯ್ಯನಹಳ್ಳಿ ಮಂಜಣ್ಣ, ಹೊಸಹಳ್ಳಿ ಗುಬ್ಬಿ ತಿಪ್ಪೇಸ್ವಾಮಿ, ದಾವಣಗೆರೆ ಬಸಣ್ಣ, ಗ್ರಾ.ಪಂ. ಸದಸ್ಯೆ ಮಂಜುಳ ಮಹಾಂತೇಶ್, ಎಸ್, ತಿಪ್ಪೇಸ್ವಾಮಿ, ರಾಮು, ವಕೀಲರಾದ ರುದ್ರಮುನಿ ಹಿರೇಹಳ್ಳಿ, ಸುರೇಶ್ ಬಂಜಿಗೆರೆ, ಆರ್ ಬಸಪ್ಪ ತೊರೆಕೋಲಮ್ಮನಹಳ್ಳಿ, ದಲಿತ ಹೋರಾಟಗಾರ ವೆಂಕಟೇಶ್ ಬಂಜಿಗೆರೆ, ಹಿರೇಹಳ್ಳಿ ದುರುಗೇಶ್, ನಲಗೇತನಹಟ್ಟಿ ಕೆ. ರಮೇಶ್, ಗಾಯಕ ಕೆ.ಟಿ. ಮುತ್ತುರಾಜ್, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ಅರುಣ್ ಕುಮಾರ್, ಸೇರಿದಂತೆ ಹೊಸಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.