
ವಾಣಿವಿಲಾಸ ಜಲಾಶಯದ ಒಂದು ನೋಟ
ಹಿರಿಯೂರು:
ಮಧ್ಯ ಕರ್ನಾಟಕದ ಜನರ ಜೀವನಾಡಿಯಾಗಿರುವ ವಾಣಿವಿಲಾಸ ಜಲಾಶಯದ ನೀರಿನ ಮಟ್ಟವು ಭಾನುವಾರ 121.25ಅಡಿಗೆ ಏರಿಕೆಯಾಗಿದ್ದು, ತಾಲ್ಲೂಕಿನ ರೈತರ ಹಾಗೂ ಜನರ ನೀರಿನ ಸಮಸ್ಯೆ ದೂರವಾಗಲಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿದಿನ 1964 ಕ್ಯೂಸೆಕ್ ನೀರನ್ನು ತರೀಕೆರೆ ಸಮೀಪದ ಬೆಟ್ಟದ ತಾವರಕೆರೆ ಪಂಪ್ ಹೌಸ್ ನಿಂದ ಒಂದು ಪಂಪ್ ಲಿಫ್ಟ್ ಮಾಡಲಾಗುತ್ತಿದೆ.
ಹಾಗಾಗಿ ನೀರಿನ ಒಳಹರಿವು 550 ಕ್ಯೂಸೆಕ್ ಇದ್ದು ಇಷ್ಟು ನೀರು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ. ಪಂಪ್ ಮಾಡುವ ನೀರು ಸೇರಿದಂತೆ ಹೊಸದುರ್ಗ, ಕಡೂರು, ಬಿರೂರು, ತರೀಕೆರೆ, ಅಜ್ಜಂಪುರ ಸುತ್ತಮುತ್ತಲ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹೆಚ್ಚಿನ ಕ್ಯೂಸೆಕ್ ನೀರು ಭಾನುವಾರ ಹರಿದು ಬಂದಿದ್ದು, ಇದರಿಂದ ಪ್ರಸ್ತುತ ಜಲಾನಯನ ನೀರಿನಮಟ್ಟ 121.25ಅಡಿಗೆ ಏರಿಕೆಯಾಗಿದೆ.
ಇನ್ನು ವಾಣಿವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿ.ಎಂ.ಸಿ.ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.