.
ಜಗಳೂರು-08 ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಆದರ್ಶಗಳು ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿಯಾಗಿವೆ. ಅವರು ಶಿಕ್ಷಕರಾಗಿ, ರಾಷ್ಟ್ರಪತಿಯಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಎಸ್ ಕೆ.ಒ.ಎಸ್ ಟಿ ಮೆಮೋರಿಯಲ್ ಶಾಲೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ
ಹೇಳಿದರು.
ಅವರು, ಜಗಳೂರು ತಾಲ್ಲೂಕಿನ ಹಿರೇಮಲ್ಲನಹೂಳೆ ಗ್ರಾಮದ ಎಸ್.ಕೆ.ಒ.ಎಸ್.ಟಿ. ಮೆಮೋರಿಯಲ್ ಶಾಲೆಯಲ್ಲಿ ನಡೆದ ಡಾ.ಸರ್ವಪಲ್ಲಿರಾಧಕೃಷ್ಣನ್‍ರವರ ಜನ್ಮದಿನ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನಾಗಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಎಂದರೆ ಶಿಸ್ತು ಕ್ಷಮೆ ಕರ್ತವ್ಯ ನಿರ್ವಹಿಸುವುದೇ ನಿಜವಾದ ಶಿಕ್ಷಕನ ಆದರ್ಶ ಅಂತ ತತ್ವಗಳನ್ನು ಅಳವಡಿಸಿಕೊಂಡು ಬಡ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಸರ್ವಪಲ್ಲಿ ರಾಧಾಕೃಷ್ಣ ರವರು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ರಾಧಾಕೃಷ್ಣ ಅವರು ತಮ್ಮ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯಿಂದ ಒಬ್ಬ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ವಿವಿಧ ಉನ್ನತ ಹುದ್ದೆಗಳ ಅಲಂಕರಿಸಲು ಸಾಧ್ಯವಾಯಿತು ಶಿಕ್ಷಕ ಹುದ್ದೆಯನ್ನು ಹೆಚ್ಚು ಪ್ರೀತಿ ಹಾಗೂ ಗೌರವಿಸುತ್ತಿದ್ದ ರಾಧಾಕೃಷ್ಣ ತಮ್ಮ ಹುಟ್ಟುಹಬ್ಬದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ತಿಳಿಸಿದರು.






ಪ್ರಾಸ್ತಾವಿಕವಾಗಿ ಸೂಕ್ಕೆ ಶಾಲೆ ಶಿಕ್ಷಕಿ ನಾಗರತ್ನ ಮಾತನಾಡಿದರು
ಇನ್ನೂ ಎಸ್ ಕೆ ಓ.ಎಸ್ ಟಿ ಸೂಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ವೈ. ಎನ್.ಅನಿತಾ ರವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಸೌಭಾಗ್ಯ. ಹಿರೇಮಲ್ಲನಹೊಳೆ ಎಸ್ ಕೆ ಓ ಎಸ್ ಟಿ ಮೆಮೋರಿಯಲ್ ಶಾಲೆಯ ಮುಖ್ಯ ಶಿಕ್ಷಕಿ ಓ.ರೇಖಾ. ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕಿಯರು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.