
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಪ್ರತಿಯೊಬ್ಬ ವಿದ್ಯಾರ್ಥಿಯು ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಎಂ.ಸೌಮ್ಯ ಹೇಳಿದರು.



ಗುರುವಾರ ಪಟ್ಟಣದ ಎಸ್ ಟಿ ಎಸ್ ಆರ್ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪೊಲೀಸ್ ಇಲಾಖೆ ಶಾಲಾ ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಪೋಕ್ಸೋ ಕಾಯ್ದೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 18 ವರ್ಷ ತುಂಬುವ ಮೊದಲೇ ಬಾಲಕಿಯರು ವಿವಿಧ ಒತ್ತಡಗಳಿಗೆ ಮಣಿದು ಮದುವೆಯಾಗಿ ಗರ್ಭಿಣಿಯರಾಗುತ್ತಿದ್ದಾರೆ ಈ ಪರಿಪಾಠ ಆರೋಗ್ಯವಂತ ಸಮಾಜಕ್ಕೆ ಮಾರಕ ವಿದ್ಯಾರ್ಥಿಗಳು ನಲಿಯುತ ಕಲಿಯುವ ಮೂಲಕ ಬಾಲ್ಯವನ್ನು ಸುಂದರವಾಗಿಸಿ ಕೊಳ್ಳಬೇಕು ಆದರೆ 18 ವರ್ಷ ತುಂಬುವ ಮೊದಲೇ ಸಾಮಾಜಿಕ ಜಾಲತಾಣಗಳಿಂದ ಪ್ರೇರಿತರಾಗಿ ಪ್ರೀತಿ ಪ್ರೇಮ ಪ್ರೇರಣೆಗಳಲ್ಲಿ ಸಿಲುಕಿ ಉಜ್ವಲ ಭವಿಷ್ಯವನ್ನು ನಾಶ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಕಾನೂನಿನ ಪ್ರಕಾರ ಇದು ಘೋರ ಹಾಗೂ ಶಿಕ್ಷಾರ್ಹ ಅಪರಾಧ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಮ್ಮ ಮನೆಗಳಲ್ಲಿ ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್ ಟಿ ಎಸ್ ಆರ್ ವಿದ್ಯಾ ಸಂಸ್ಥೆ ಉಪ ಪ್ರಾಚಾರ್ಯರಾದ ರಮೇಶ್, ಶಿಕ್ಷಕರಾದ ಈರಣ್ಣ, ವೀರೇಶ್, ಫಣೇಂದ್ರ ಕುಮಾರ್, ಮಾರುತಿ, ಸುಬ್ಬೀರ್, ಹಾಲೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಮಾಜ ಕಾರ್ಯಕರ್ತೆ ರೇಖಾ, ಕ್ಷೇತ್ರ ಕಾರ್ಯಕರ್ತ ಯುವರಾಜ್, ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕಿ ಚಂದನ ಅಂಗನವಾಡಿ ಶಿಕ್ಷಕಿಯರಾದ ನಾಗರತ್ನ ಲತಾಬಾಯಿ ಎಚ್ ಶೈಲಜಾ, ಸೇರಿದಂತೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.