July 9, 2025
1751984100749.jpg


ಹಿರಿಯೂರು :
ತಾಲೂಕು ಹೊಸಕೆರೆ ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಈಗಾಗಲೇ ಹತ್ತು ಎಕರೆ 220 ಕೆ ವಿ ಸ್ಟೇಷನ್ ಇದ್ದು ಇದಕ್ಕೆ ಹೊಂದಿಕೊಂಡಂತೆ ನೂರು ಎಕರೆ ಸರ್ಕಾರಿ ಗೋಮಾಳವಿದ್ದು ಇದನ್ನು ಸರ್ಕಾರ ವಶಪಡಿಸಿಕೊಳ್ಳುವುದನ್ನು ರದ್ದುಪಡಿಸಬೇಕು ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಗ್ರಹಿದ್ದಾರೆ.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹೊಸಕೆರೆ ನೂರು ಎಕರೆ ಸರ್ಕಾರಿ ಗೋಮಾಳವನ್ನು ಸರ್ಕಾರ ವಶಪಡಿಸಿಕೊಳ್ಳುವುದನ್ನು ರದ್ದುಪಡಿಸುವುದು ಹಾಗೂ ತಹಶೀಲ್ದಾರ್ ರಾಜೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವ ಬಗ್ಗೆ ಮಾನ್ಯ ಶ್ರೀ ಕೃಷ್ಣಬೈರೇಗೌಡ ಅವರು ಕಂದಾಯ ಸಚಿವರು ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರುಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಸರ್ಕಾರ ಗೋಮಾಳವನ್ನು ವಶಪಡಿಸಿಕೊಂಡು ಸೋಲಾರ್ ಕಂಪನಿಗೆ ಕೊಡುವ ಉನ್ನಾರ ನಡೆದಿದ್ದು, ಅಲ್ಲಿ ವಾಸ ಮಾಡುವ ರೈತರಿಗೆ ದನ ಕರು ಕುರಿ ಮೇಕೆ ಜಾನುವಾರುಗಳಿಗೆ ಮತ್ತು ಮನೆ ಕಟ್ಟುವುದಕ್ಕೆ ಮುಂತಾದ ಸರ್ಕಾರದ ಇಲಾಖೆಗಳ ಕಾರ್ಯಕ್ರಮಕ್ಕೆ ಬಳಸಬೇಕಾಗಿರುತ್ತದೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಭೂಮಿ ಲಭ್ಯವಿಲ್ಲ ಎಂದು ವರದೆ ವರದಿ ನೀಡಿರುತ್ತಾರೆ,
ಗ್ರಾಮಸ್ಥರು ಹಾಗೂ ರೈತ ಸಂಘಟನೆ ವತಿಯಿಂದ ಈ ಭೂಮಿಯನ್ನು ಯಾವುದೇ ಕಾರಣಕ್ಕೂ ಹೊಸಪಡಿಸಿಕೊಳ್ಳಲು ಶಿಫಾರಸ್ಸು ಮಾಡಬಾರದು ಎಂದು ದೂರು ಅರ್ಜಿ ನೀಡಿದರು ಸಹ ತಹಶೀಲ್ದಾರ್ ಅವರು ವಶಪಡಿಸಿಕೊಳ್ಳಲು ಶಿಫಾರಸು ಮಾಡಿರುತ್ತಾರೆ ಇದಲ್ಲದೆ ಇನ್ನೂ ಮೂರ್ನಾಲ್ಕು ಕಡೆ ಸರ್ಕಾರಿ ಭೂಮಿಯನ್ನು ಕೆಪಿಟಿಷರಿಗೆ ಕೊಡಲು ಉನ್ನಾರ ನಡೆದಿದೆ ಕೂಡಲೇ ಅದನ್ನು ವಾಪಸ್ ಮಾಡಿ ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಕಂದಾಯ ಇಲಾಖೆಯಲ್ಲಿ ಬಹಳಷ್ಟು ಹಗರಣಗಳು ನಡೆದಿರುವ ಬಗ್ಗೆ ಅನೇಕ ಬಾರಿ ದೂರು ನೀಡಲಾಗಿದ್ದು ಅಧಿಕಾರಿಗಳು ಹಣ ಸ್ವೀಕರಿಸುವ ದೃಶ್ಯವನ್ನು ತಹಸೀಲ್ದವರ ಗಮನಕ್ಕೆ ತಂದರು ಯಾವುದೇ ಕ್ರಮ ವಹಿಸಿಲ್ಲ ರೆಕಾರ್ಡ್ ರೂಮು ಹಾಗೂ ನೊಂದಣಿ ಇಲಾಖೆಯಲ್ಲಿ ಜೆರಾಕ್ಸ್ ಮಿಷಿನ್ ಇಲ್ಲದೆ ಹೊರಗಡೆ ಜೆರಾಕ್ಸ್ ಗಾಗಿ ದಾಖಲೆಗಳನ್ನು ತೆಗೆದುಕೊಂಡು ಹೋದಾಗ ಮೂಲ ದಾಖಲೆಗಳಲ್ಲಿ ಅನೇಕ ತಿದ್ದುಪಡಿಗಳಾಗಿರುತ್ತವೆ ಇದರ ಬಗ್ಗೆ ದೂರು ನೀಡಲಾಗಿತ್ತು,
ವಂಶವೃಕ್ಷ. ಸಂಧ್ಯಾ ಸುರಕ್ಷಾ ಮತ್ತು ಡೆಡ್ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ಅಕ್ರಮವಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನ ಪಡೆಯುತ್ತಿರುವ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗಿತ್ತು ಅನೇಕ ರೈತರ ಸರ್ಕಾರಕ್ಕೆ ಪಡ ಸೇರಿದ ಭೂಮಿಗಳನ್ನ ಗುರುತಿಸಿ ರಿಯಲ್ ಎಸ್ಟೇಟ್ ಅವರೊಂದಿಗೆ ಶಾಮೀಲಾಗಿ ರೈತರಿಗೆ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಅತಿ ಹೆಚ್ಚು ಲಾಭ ಮಾಡಿಕೊಡುತ್ತಾರೆ,
ಸರ್ಕಾರಿ ಭೂಮಿ ಕೆರೆ ಗೋಕಟ್ಟೆ ಹಾಗೂ ಅರಣ್ಯ ಇಲಾಖೆಯ ಭೂಮಿಯಲ್ಲಿ ಅಕ್ರಮವಾಗಿ ಎಲ್ಲಾ ಕಾರ್ಯಗಳನ್ನು ಉಲ್ಲಂಘನೆ ಮಾಡಿ ನಿರಂತರ ಮಣ್ಣು ಮರುಂ ಒಡೆಯುತ್ತಿರುವ ಬಗ್ಗೆ ಅನೇಕ ಬಾರಿ ಕರೆ ಮಾಡಿ ತಿಳಿಸಿದರು ಯಾವುದೇ ಕ್ರಮ ವಹಿಸಿರುವುದಿಲ್ಲ ಹೀಗೆ ನೂರೆಂಟು ಅಕ್ರಮಗಳಲ್ಲಿ ಭಾಗಿಯಾಗಿ ಅಕ್ರಮ ದಾಖಲೆಗಳ ಸೃಷ್ಟಿ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ.
ಇಲಾಖೆಯ ಎಲ್ಲಾ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಲಂಚ ಕೊಡದೆ ಯಾವ ಕೆಲಸವಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ ಆದ್ದರಿಂದ ಇವರನ್ನು ಕೂಡಲೇ ಬೀರಡೆಗೆ ವರ್ಗಾಯಿಸಿ ಇವರ ಅವಧಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತಣಿಕೆ ನಡೆಸಿ ತಪ್ಪಿಸಸ್ಥ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷರಾದ ಆಲೂರು ಸಿದ್ದರಾಮಣ್ಣ, ಹೊಸಕೆರೆ ಗ್ರಾಮದ ಜಯಣ್ಣ, ಜಗದೀಶ್, ನಾರಾಯಣಪ್ಪ ರಘುನಾಥ್ ಗೌಡ ಧನಂಜಯ ಪುಟ್ಟರಾಜ ಲಕ್ಷ್ಮಿಪತಿ ಶಿವಣ್ಣ ಗಿರೀಶ್, ಸತೀಶ, ತಿಪ್ಪೇಸ್ವಾಮಿ, ಸಣ್ಣೀರಪ್ಪ, ಪುಟ್ಟಯ್ಯ, ಮಲ್ಲಿಕಾರ್ಜುನ, ಜೆಸಿಬಿ ರಘುನಾಥ್, ಶಿವಮೂರ್ತಿ, ಸುರೇಶ, ಜಲ್ದಿರಪ್ಪ, ರಮೇಶ್, ತಿಮ್ಮಾರೆಡ್ಡಿ, ರಂಗಸ್ವಾಮಿ, ತಿಮ್ಮರಾಯ, ರಂಗಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading