
ಚಳ್ಳಕೆರೆ-ಭಗವತ್ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀಮದ್ ಭಾಗವತ ತಿಳಿಸುತ್ತದೆಂದು ಗದಗ-ವಿಜಯಪುರದ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.



ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ನಡೆಯುತ್ತಿರುವ “ಶ್ರೀಮದ್ ಭಾಗವತ ಪ್ರವಚನ ಸಪ್ತಾಹ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ದಿವ್ಯತ್ರಯರು ಮತ್ತು ಶ್ರೀಮದ್ ಭಾಗವತ”ಎಂಬ ವಿಷಯವಾಗಿ ಪ್ರವಚನ ನೀಡಿದರು. ದಿವ್ಯತ್ರಯರ ಜೀವನದ ಘಟನೆಗಳಿಗೂ ಭಾಗವತಕ್ಕೂ ಸಂಬಂಧವಿದ್ದು ಮಹಾತ್ಮರ ಜೀವನದಲ್ಲಿ ವ್ಯಕ್ತವಾಗುವ ಅಹೇತುಕ ಪ್ರೀತಿ ಅನಂತವಾದದ್ದು. ಆದ್ದರಿಂದ ಭಾಗವತದ ಸಂದೇಶಗಳನ್ನು ಮತ್ತು ಘಟನೆಗಳನ್ನು ಮೆಲುಕು ಹಾಕಿ ಅನುಸಂಧಾನ ಮಾಡಬೇಕು ಎಂದು ಹೇಳಿದರು.ಈ ಸತ್ಸಂಗದ ಪ್ರಯುಕ್ತ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾತಾಜೀ ತ್ಯಾಗಮಯೀ ವಹಿಸಿದ್ದರು.ಸತ್ಸಂಗ ಕಾರ್ಯಕ್ರಮದಲ್ಲಿ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ,ಪಾಲಕ್ಕ, ಬೋರಣ್ಣ, ವಿನೋದಮ್ಮ, ಶ್ರೀಮತಿ ಶಾರದಾಮ್ಮ,ಶಾರದಾ, ಜಿ.ಗೀತಾ, ಯತೀಶ್ ಎಂ ಸಿದ್ದಾಪುರ, ಮದ್ದಿಹಳ್ಳಿ ಜಯಪ್ಪ,ನಾಗರಾಜ್, ಕೆಂಚಮ್ಮ, ಮಹಾದೇವಮ್ಮ, ಶಿವಕುಮಾರ್, ಗೌರಮ್ಮ,ಗೀತಾ ನಾಗರಾಜ್, ಹೂವಿನ ಲಕ್ಷ್ಮೀದೇವಮ್ಮ, ಸೌಮ್ಯ ,ಮಹೇಶ್, ಚೇತನ್, ಮಲ್ಲಮ್ಮ, ಅನಂತರಾಮ್ ಗೌತಮ್,ಮಂಜುಳ, ಭ್ರಮರಂಭಾ, ವನಜಾಕ್ಷಿ ಮೋಹನ್,ಅಭೀಷೇಕ್, ಸುಗುಣಾ,ಸುಮ ಪ್ರಕಾಶ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಗಡಣ ಭಾಗವಹಿಸಿತ್ತು.
About The Author
Discover more from JANADHWANI NEWS
Subscribe to get the latest posts sent to your email.