
ಚಳ್ಳಕೆರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.



ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರ್ಕಾರ ರೈತರಿಗೆ ಸಬ್ಸಿಡಿ ಆಸೆ ತೋರಿಸಿ ರೈತರನ್ನು ಸೋಲಾರ್ ಕಂಪನಿಗೆ ವರ್ಗಾವಣೆ ಮಾಡಿರುವುದು ಖಂಡನೀಯವಾದದ್ದು ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾವಣೆ ಮಾಡುವುದು ಅಪರಾಧವಾಗಿದೆ ಆದ್ದರಿಂದ 2022 23ನೇ ಸಾಲಿನಲ್ಲಿ ಇದ್ದಂತಹ ಅಕ್ರಮ ಸಕ್ರಮದ ಕಾನೂನು ಅಡಿಯಲ್ಲಿ ರೈತರಿಗೆ ನೀಡಬೇಕಾದ ಸೌಲತ್ತುಗಳನ್ನು ಕೊಟ್ಟು ಮೊದಲಿನಂತೆ ಇರುವ ಕಾನೂನನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.
ರೈತರು ವಿದ್ಯುತ್ತನ್ನು ತನ್ನ ಸ್ವಂತಕ್ಕಾಗಲಿ ಅಥವಾ ಕುಟುಂಬಕ್ಕಾಗಲಿ ಬಳಸುತ್ತಿಲ್ಲ ರೈತರು ಬಳಸುವ ವಿದ್ಯುತ್ ದೇಶದ ಆಹಾರ ಭದ್ರತೆಗಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸರ್ಕಾರಗಳು ರೈತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿವೆ ಹೊರತು ರೈತ ಪರವಾದ ಯೋಜನೆಗಳನ್ನು ರೂಪಿಸಿ ರೈತರನ್ನು ಉದ್ಧಾರ ಮಾಡಿಲ್ಲ ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಗಳನ್ನು ಯಾವುದೇ ಸರ್ಕಾರಗಳು ಈಡೇರಿಸುವುದಿಲ್ಲ ಕೂಡಲೇ ರೈತರ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಮತ್ತು ಡಾಕ್ಟರ್ ಸ್ವಾಮಿನಾಥನ್ ವರದಿಯನ್ನು ಆಧರಿಸಿ ರೈತರಿಗೆ ಎಂ ಎಸ್ ಪಿ ಜಾರಿಯಾಗುವವರೆಗೆ ರೈತರಿಗೆ ಕೊಟ್ಟಿರುವ ಯಾವುದೇ ಕಾನೂನುಗಳನ್ನು ಬದಲಾವಣೆ ಮಾಡಬಾರದು ಪಂಪ್ಸೆಟ್ಟುಗಳಿಗೆ ನೀಡಿರುವ ವಿದ್ಯುತ್ತನ್ನು ಕಡಿತಗೊಳಿಸದೆ ಯಥವತ್ತಾಗಿ ನೀಡಬೇಕು ಮುಂದಿನ ದಿನಗಳಲ್ಲಿ ಸರ್ಕಾರಗಳು ರೈತರಿಗೆ ಮಾರಕವಾಗುವಂತಹ ಕ್ರಮಗಳನ್ನು ಕೈಗೊಂಡಲ್ಲಿ ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ತಿಪ್ಪೇಸ್ವಾಮಿ ಶಿವಕುಮಾರ್ ಓಬಯ್ಯ ತಿಪ್ಪೇಸ್ವಾಮಿ ರಾಜಣ್ಣ ಸಣ್ಣಪಾಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.