July 13, 2025
IMG20250508132624_01.jpg

ಚಳ್ಳಕೆರೆ: ಹುಟ್ಟು ಸಾವು. ಖಚಿತ ಈ ಎರಡರ ನಡುವೆದಾನ, ಧರ್ಮ.ಸಾಮಾಜ ಸೇವೆಗಳು ಮಾತ್ರ ಸಾವಿನ ನಂತರ ಶಾಶ್ವತವಾಗಿ ವಾಗಿ ಜನರು ಮನದಲ್ಲಿ ಚಿರಂಜೀವಿ ಯಾಗಿ ಉಳಿಯುತ್ತವೆ ಎಂದು ಭಗೀರಥ ಪೀಠದ ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಗಳು ಆರ್ಶೀವಚನ ನೀಡಿದರು.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಸುಶೀಲಮ್ಮ ಎಂಬುವರ ಕುಟುಂಬದ ತೋಟದಲ್ಲಿ ಗುರುವಾರ ಆಯೋಜಿಸಿದ್ದ ಓ. ನಾಗೇಂದ್ರಯ್ಯ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಡಾ.ಬಿ. ಮೈಲಾರಪ್ಪ ಅವರ ರಚನೆಯ ಆಧುನಿಕ ಭಗೀರಥ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮನುಷ್ಯನಿಗೆ ತಾಯಿಯ ಗರ್ಭದಲ್ಲೇ ಸಾವಿನ ನಿರ್ಣಯವೂ ಹಣೆಬರಹದಂತೆ ನಿಶ್ಚಿತವಾಗುತ್ತದೆ. ಆದರೆ, ಲೋಕದ ಬದುಕಿನಲ್ಲಿ ಕಲಿತ ವಿದ್ಯೆ, ಹಣ ಸಂಪಾದನೆ ಮತ್ತು ಜನರ ನಡುವಿನ ಮಾನವೀಯ ಸಂಬಂಧ ಕಂಡುಕೊಳ್ಳುವ ನಿರ್ಧಾರದಲ್ಲಿ ಸಮಾಜವನ್ನು ಅರ್ಥೈಸಿಕೊಳ್ಳಬೇಕು. ತಾನು ಇಲ್ಲದಿದ್ದಾಗಲೂ ತನ್ನ ಕಾರ್ಯ ಪ್ರತಿಫಲಗಳು ಸಮಾಜಮುಖಿಯಾಗಿ ಇರುವ ರೀತಿಯಲ್ಲಿ ಜೀವನ ನಡೆಸಬೇಕು. ಸೌಜನ್ಯ ಮತ್ತು ಭಗೀರಥನ ಪ್ರಯತ್ನದಂತೆ ಕಾಯಕದಲ್ಲಿ ನಿಷ್ಠಾವಂತರಾಗಿದ್ದ ನಾಗೇಂದ್ರಯ್ಯ ಅವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಲೇಖಕ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಬಿ. ಮೈಲಾರಪ್ಪ ಮಾತನಾಡಿ, ಮಧ್ಯ ಕರ್ನಾಟಕದಲ್ಲಿ ಆರಾಧ್ಯ ದೇವಿ ಎನಿಸಿಕೊಂಡಿರುವ ಗೌರಸಮುದ್ರ ಮಾರಮ್ಮ ಉಪ್ಪಾರ ಕುಲದ ಹೆಣ್ಣು ಮಗಳು. ಜನಾಂಗಕ್ಕೆ ಇತಿಹಾಸ ಪರಂಪರೆ ಸಾರುವ ಧಾರ್ಮಿಕ ಕಾರ್ಯ ಸಾಧಕರ ಹಿನ್ನೆಲೆಯಿದೆ. ಗೋಪನಹಳ್ಳಿ ಗ್ರಾಮದ ನಾಗೇಂದ್ರಯ್ಯ ಹೆಚ್ಚು ಶಿಕ್ಷಣ ಇಲ್ಲದಿದ್ದರೂ ಕಾಯಕದಲ್ಲಿ ನಿಷ್ಠಾವಂತರಾಗಿ ಬದುಕಿದವರು. ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದ್ದಾರೆ. ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ. ನಾಲ್ವರ ಜೀವನಕ್ಕೆ ನೆರವಾಗುವ ರೀತಿ ಬದುಕಿ ಜೀವನ ಸಾರ್ಥಕ ಕಂಡುಕೊಳ್ಳಬೇಕು. ರೈತನಾಗಿ, ಕಾರ್ಮಿಕನಾಗಿ ಮತ್ತು ಉದ್ಯಮಿಯಾಗಿ ಬದುಕು ಕಂಡುಕೊಂಡ ಓ.ನಾಗೇಂದ್ರಯ್ಯ, ಸಂಸ್ಕಾರ ನಡೆ-ನುಡಿಯಿಂದ ಜನ ಮಧ್ಯದಲ್ಲಿ ಸದಾ ಇರುತ್ತಾರೆ ಎಂದು ಹೇಳಿದರು.
ಶಾಸಕ ಟಿ ರಘುಮೂರ್ತಿ ಭಾಗವಹಿಸಿ ಕುಟುಂಬ ಸದಸ್ಯರೂಂದಿಗೆ ಮಾತನಾಡಿ ಆತ್ಮಸ್ಥೈರ್ಯ ತುಂಬಿದರು.
ತೆರಿಗೆ ಅಧಿಕಾರಿ ಜಗನ್ನಾಥ್ ಸಾಗರ್.ಮಾತನಾಡಿದರು.
ನಿವೃತ್ತ ನ್ಯಾಯಮೂರ್ತಿ ಬಿಲ್ವಪ್ಪ, ಬಿಇಒ ಕೆ.ಎಸ್. ಸುರೇಶ್, ಕವಿ ಕೂರ‍್ಲಕುಂಟೆ ತಿಪ್ಪೇಸ್ವಾಮಿ, ಸುಶೀಲಮ್ಮ, ಜಗನ್ನಾಥ್, ರಾಮಾಂಜಿನೇಯ, ಮಲ್ಲಪ್ಪ, ಎಂ.ಪಿ.ಶಂಕರ್, ಪಂಚಾಕ್ಷರಪ್ಪ, ಕುರ್ಕೆ ತಿಪ್ಪೇಸ್ವಾಮಿ, ಗೋಪನಹಳ್ಳಿ ಶಿವಣ್ಣ, ಶಿಕ್ಷಕ ರಂಗನಾಥ್. ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading