ನಾಯಕನಹಟ್ಟಿ : ಯುವ ಪೀಳಿಗೆ ಹೆಚ್ಚು ಮೊಬೈಲ್‍ಗಳಿಗೆ ವ್ಯಸನಿಗಳಾಗಿದ್ದು, ಮೊಬೈಲ್ ಗಳನ್ನು ಬಿಡಿ ಅಂಕಣಕ್ಕೆ ನಡಿ ಎಂಬ ವಾಕ್ಯದಂತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅಗತ್ಯ ಎಂದು ಪೊಲೀಸ್ ಉಪನಿರೀಕ್ಷಕ ಜಿ ಪಾಂಡುರಂಗಪ್ಪ ಸಲಹೆ ನೀಡಿದರು.
ಪಟ್ಟಣದ ಎಸ್ ಟಿ ಎಸ್ ಆರ್ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ವ್ಯಾಯಾಮ ಎಂಬುದೇ ಕನಸಾಗಿದೆ. ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅದರಿಂದ ಹೊರಬರಲು ದಿನಾಲು ದೈಹಿಕ ವ್ಯಾಯಾಮದಿಂದ ಮಾತ್ರ ಸಾಧ್ಯ. ಆದ್ದರಿಂದ ಪಟ್ಟಣದ ಯುವಕರು ತಪ್ಪದೆ ಆರೋಗ್ಯ ಮೇಳದಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಆರೋಗ್ಯ ಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ 30 ದಿನಗಳ ಕಾಲ ದಿನಾಲೂ ಬಾಳೆಹಣ್ಣು, ಹಾಲು, ಮೊಟ್ಟೆ ವಿತರಿಸಲಾಗುವುದು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಶಿವಣ್ಣ ಎಂ, ಕ್ರೀಡಾಪಟುಗಳಾದ ಚಂದು, ರಕ್ಷಿತ್, ಮಂಜು ಇನ್ನು ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.