ನಾಯಕನಹಟ್ಟಿ : ಪಟ್ಟಣದ ಇಂದಿರಾ ಕಾಂಟಿನ್ ಪಕ್ಕದಲ್ಲಿ ನೂತನ ನಂದಿನಿ ಹಾಲು ಮತ್ತು ಹಾಲು ಉತ್ಪನ್ನ ಪಾರ್ಲರ್‌ಗಳನ್ನು ನಿದೇಶಕ ಬಿ ಸಿ ಸಂಜೀವ್‌ಮೂರ್ತಿ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಸ್ಥಿರ ಮಾರುಕಟ್ಟೆ ಒದಗಿಸುವುದು ಹಾಗೂ ಗ್ರಾಹಕರಿಗೆ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ನಂದಿನಿ ಪಾರ್ಲರ್‌ಗಳನ್ನು ಆರಂಭಿಸಲಾಗಿದೆ ಎಂದರು.

ನಂದಿನಿ ಕೇವಲ ಬ್ರಾಂಡ್ ಅಲ್ಲ, ಅದು ರೈತರ ಬದುಕಿನ ಆಧಾರ ಎಂದು ಬಣ್ಣಿಸಿದ ಅವರು, ಹಾಲಿನ ದರ ಹೆಚ್ಚಾದಾಗ ಅದರ ಲಾಭ ನೇರವಾಗಿ ರೈತರಿಗೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಸಹಕಾರ ಸಂಘಗಳು ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ನಂದಿನಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಪಾರ್ಲರ್‌ಗಳನ್ನು ಆರಂಭಿಸಲಾಗುವುದು ಎಂದರು.
ಇನ್ನೂ ಇದೇ ವೇಳೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಪಟ್ಟಣ ಪಂಚಾಯಿತಿ ಅದ್ಯಕ್ಷೆ ಮಂಜುಳ ಶ್ರೀಕಾಂತ್ ಮಾತಾನಾಡಿದರು.
ಎಸ್ ಜಿ ಶೇಖರ್ ವ್ಯವಸ್ಥಾಪಕ ನಿರ್ದೇಶಕರಾದ ಬಿ ಕೆ ಪ್ರಮೋದ್ ವ್ಯವಸ್ಥಾಪಕ(ಮಾರುಕಟ್ಟೆ), ಹನುಮಂತಪ್ಪ , ಜಿ ಜಿ ಶೇಖರಪ್ಪ ಉಸ್ತುವಾರಿಗಳಾದ ಇರ್ಫನ್, ಸರೇಶ್‌ಬಾಬು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬೋಸಮ್ಮ ಮಂಜುನಾಥ್, ಮುಖ್ಯಾಧಿಕಾರಿ ಓ ಶ್ರೀನಿವಾಸ, ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಗೂ ನಾಮ ನಿರ್ದೇಶಿತ ಸದಸ್ಯ ಓಬಳೇಶ್, ಕುದಾಪುರ ಮುಖಂಡ ಕೆ ಜಿ ಪ್ರಕಾಶ, ದಾಸರಮುತ್ತೇನಹಳ್ಳಿ ಕೆಂಗಣ್ಣ, ರೇಖಲಗೆರೆ ತಿಪ್ಪೇಸ್ವಾಮಿ, ಅರುಣ್ ಉಳ್ಳಾರ್ತಿ ಸೇರಿದಂತೆ ಸಾರ್ವಜನಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.