
ಹಿರಿಯೂರು:
ನಗರದ ಹುಳಿಯಾರು ರಸ್ತೆಯಲ್ಲಿರುವ ಶ್ರೀರಂಗನಾಥ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದ ಪ್ರತೀಕ್ ಎಂ. ಗೌಡ 578 ಅಂಕಗಳನ್ನು ಪಡೆದು ಶೇಕಡಾ 97% ಪಡೆದು ಹಿರಿಯೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ನಂದಿತಾ ಜಿ.ಎಸ್ 574 ಅಂಕಗಳು ಶೇಕಡಾ 96% ,ಮದನ್ 570 ಶೇಕಡಾ 95% ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಗಾಯತ್ರಿ 561 ಶೇಕಡಾ 94%, ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಸಿಂಚನ ಆರ್ ಜೈನ್ 559 ಶೇಕಡಾ 93% ,ಗೋವರ್ಧನ್ 528 ಶೇಕಡಾ 88% ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿರುತ್ತಾರೆ.
ಒಟ್ಟು ಫಲಿತಾಂಶದಲ್ಲಿ 17 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ ಹಾಗೂ 68 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರಾದ ವೀರಕರಿಯಪ್ಪ, ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.






About The Author
Discover more from JANADHWANI NEWS
Subscribe to get the latest posts sent to your email.