
ಚಿತ್ರದುರ್ಗಏ.08:
ತಾಯಿಯ ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ಆರೋಗ್ಯ ಸಮಸ್ಯೆಗಳ ನಿರ್ವಹಿಸಲು ಆರೋಗ್ಯ ವ್ಯವಸ್ಥೆಗಳು ವಿಕಸನಗೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಇಲ್ಲಿನ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನವನ್ನು ಲಸಿಕಾ ಅಧಿವೇಶನದೊಂದಿಗೆ ನಡೆಸಿ, ಗರ್ಭಿಣಿ, ಬಾಣಂತಿ, ಮಕ್ಕಳ ಕುರಿತು ಅವರು ಮಾತನಾಡಿದರು.
ವಿಶ್ವ ಆರೋಗ್ಯ ದಿನವು, ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯದ ಕುರಿತು ಒಂದು ವರ್ಷವಿಡೀ ನಡೆಯುವ ಅಭಿಯಾನಕ್ಕೆ ನಾಂದಿ ಹಾಡಲಿದೆ. ಆರೋಗ್ಯಕರ ಆರಂಭಗಳು, ಭರವಸೆಯ ಭವಿಷ್ಯಗಳು ಎಂಬ ಶೀರ್ಷಿಕೆಯ ಈ ಅಭಿಯಾನವು , ಸರ್ಕಾರಗಳು ಮತ್ತು ಆರೋಗ್ಯ ಸಮುದಾಯವು ತಡೆಗಟ್ಟಬಹುದಾದ ತಾಯಂದಿರು ಮತ್ತು ನವಜಾತ ಶಿಶುಗಳ ಸಾವುಗಳನ್ನು ಕೊನೆಗೊಳಿಸಲು ಮತ್ತು ಮಹಿಳೆಯರ ದೀರ್ಘಕಾಲೀನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಪ್ರಯತ್ನಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತದೆ ಎಂದು ಹೇಳೀದು.
ಮಹಿಳೆಯರು ಮತ್ತು ಕುಟುಂಬಗಳಿಗೆ ಎಲ್ಲೆಡೆಯೂ ಉತ್ತಮ ಗುಣಮಟ್ಟದ ಆರೈಕೆಯ ಅಗತ್ಯವಿರುತ್ತದೆ. ಅದು ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ, ಹೆರಿಗೆಯ ಮೊದಲು, ಸಮಯದಲ್ಲಿ ಮತ್ತು ನಂತರ ಬೆಂಬಲಿಸುತ್ತದೆ. ತಾಯಿಯ ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಆರೋಗ್ಯ ವ್ಯವಸ್ಥೆಗಳು ವಿಕಸನಗೊಳ್ಳಬೇಕು. ಇವುಗಳಲ್ಲಿ ನೇರ ಪ್ರಸೂತಿ ತೊಡಕುಗಳು ಮಾತ್ರವಲ್ಲದೆ ಮಾನಸಿಕ ಆರೋಗ್ಯ ಪರಿಸ್ಥಿತಿಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಕುಟುಂಬ ಯೋಜನೆ ಕೂಡ ಸೇರಿವೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಬಿರು ಬೇಸಿಗೆ ಇರುವುದರಿಂದ ಗರ್ಭಿಣಿಯರು, ಬಾಣಂತಿಯರು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ಹೆಚ್ಚು ಹೆಚ್ಚು ನೀರು ಕುಡಿಯಿರಿ, ಕರಿದ ಮಸಾಲೆ ಭರಿತ ಪದಾರ್ಥಗಳನ್ನು ಉಪಯೋಗಿಸಬೇಡಿ. ತೆಳುವಾದ ಕಾಟನ್ ಬಟ್ಟೆ ಉಪಯೋಗಿಸಿ ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು ಬಿಡಬೇಡಿ. ಕಾಲ ಕಾಲಕ್ಕೆ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ ಮಾತನಾಡಿ, ಕಿಲ್ಕಾರಿ ಕರೆಗಳನ್ನು ಸ್ವಿಕರಿಸಿ, ಉಚಿತ ಮಾಹಿತಿ ಪಡೆದು ಸುರಕ್ಷಿತ ತಾಯ್ತನ ನಿಮ್ಮದಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿ ಸುಜಾತ ಲಸಿಕೆ ನೀಡಿದರು. ಆಶಾ ಕಾರ್ಯಕರ್ತೆ ಪ್ರೇಮ, ಅಂಗನವಾಡಿ ಕಾರ್ಯಕರ್ತೆ ಮಂಜುಳ, ತಾಯಿಮಕ್ಕಳು, ಗರ್ಭಿಣಿಯರು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.