
.
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಜೋಗಿಹಟ್ಟಿ ಗ್ರಾಮದ ಜನರು ಉತ್ತಮ ಶಿಕ್ಷಣ ಪಡೆಯಲು ಪ್ರೇರಣೆಯಾಗಬೇಕು. ಎಂದು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಸೋಮವಾರ ರಾತ್ರಿ ಹೋಬಳಿಯ ಗೌಡಗೆರೆ ಗ್ರಾ.ಪಂ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದಲ್ಲಿ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಶ್ರೀ ರಂಗನಾಥ ಸ್ವಾಮಿ ಯಕ್ಷಗಾನ ಕಲಾ ಸಂಘ ವತಿಯಿಂದ ದುಶ್ಯಾಸನನ ವಧೆ ಅರ್ಥಾತ್ ದ್ರೌಪದಿಯ ವಸ್ತ್ರಾಪಹರಣ ಎಂಬ ಯಕ್ಷಗಾನ ನಾಟಕವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಶ್ರೀ ಕೃಷ್ಣನ ಆದರ್ಶಗಳನ್ನು ತಿಳಿಯಲು ಗ್ರಾಮದಲ್ಲಿ ಯಕ್ಷಗಾನ ಪೌರಾಣಿಕ ಹೆಚ್ಚಿನದಾಗಿ ಪ್ರದರ್ಶನವಾಗಬೇಕು ಪ್ರತಿಯೊಂದು ಸನ್ನಿವೇಶದಲ್ಲಿ ಈ ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಐಎಎಸ್ ಐಪಿಎಸ್ ಮತ್ತು ರಾಜ್ಯದ ವಿವಿಧ ಹುದ್ದೆಗಳನ್ನು ಅಲಂಕರಿಸುವಂತೆ ಕೆಲಸವಾಗಬೇಕು ಎಂದರು.
ಡಿ.ಜಿ. ಗೋವಿಂದಪ್ಪ ಮಾತನಾಡಿದರು. ಪೂರ್ವಿಕರ ಕಾಲದಿಂದಲೂ ಯಕ್ಷಗಾನ ಪೌರಾಣಿಕ ನಾಟಕಗಳು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಾನ್ಯತೆ ಪಡೆದಿದೆ ಮಹಾಭಾರತ ರಾಮಾಯಣ ಕಥ ಸನ್ನಿವೇಶ ಒಳಗೊಂಡಂತಹ ಪೌರಾಣಿಕ ಯಕ್ಷಗಾನ ನಾಟಕಗಳು ಹೆಚ್ಚಿನದಾಗಿ ಗ್ರಾಮದಲ್ಲಿ ಪ್ರದರ್ಶನವಾಗುವ ಮೂಲಕ ಪ್ರತಿಯೊಬ್ಬರು ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಚ್ ಬಿ ತಿಪ್ಪೇಸ್ವಾಮಿ ಮಾತನಾಡಿ ಅತಿ ಹೆಚ್ಚು ಕಾಡುಗೊಲ್ಲ ಸಮುದಾಯವಿರುವ ನಮ್ಮ ಜೋಗಿಹಟ್ಟಿ ಗ್ರಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಐಎಎಸ್ ಐಪಿಎಸ್ ಎಂಬಿಬಿಎಸ್ ಅಂತಹ ಪ್ರತಿಭೆಗಳು ಹೊರ ಹೊಂಬಬೇಕು ಎಂದರು.
ಇದೇ ಸಂದರ್ಭದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ಎಸ್. ಸಿ. ನಾಗಪ್ಪ, ಸಣ್ಣಪ್ಪ, ಜಿ.ಓ. ಓಬಳೇಶ್, ಎಚ್ ಸಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ಸಂಗೀತ ನಿರ್ದೇಶಕ ಗೋವಿಂದಪ್ಪ, ಎಂ.ಜಿ. ತಿಪ್ಪೇಸ್ವಾಮಿ, ಜಿ ನಿಂಗಪ್ಪ ಹೊಸ ಜೋಗಿಹಟ್ಟಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ. ಬಸಪ್ಪನಾಯಕ ರಾಜಯ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ನಾಯಕನಹಟ್ಟಿ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ತಿಪ್ಪೇಸ್ವಾಮಿ ಗೌಡಗೆರೆ, ಡಿ,ಕೆ. ಬಸವರಾಜ್, ಭೀಮಗೊಂಡನಹಳ್ಳಿ ಜೆಡಿಆರ್ ತಿಪ್ಪೇಸ್ವಾಮಿ ,ರಂಗಸ್ವಾಮಿ, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮುತ್ತಯ್ಯ ಜಾಗನೂರಹಟ್ಟಿ, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ್, ಗುತ್ತಿಗೆದಾರ ಎಸ್. ಜಿ. ವೆಂಕಟೇಶ್,
ಕರಿಬಸವರಾಜ್ ಹೊಸಜೋಗಿಹಟ್ಟಿ, ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.